Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸ್ವತಂತ್ರ ಸಂರಕ್ಷಣೆ ನಮ್ಮೆಲ್ಲರ ಹೊಣೆ - ಬಿಜೆಪಿ. ಬಿಜೆಪಿ ಮಂಜೇಶ್ವರ ವಿಧಾನ ಸಭಾ ಸಭೆ.

ಸ್ವತಂತ್ರ ಸಂರಕ್ಷಣೆ ನಮ್ಮೆಲ್ಲರ ಹೊಣೆ - ಬಿಜೆಪಿ.
ಮಂಜೇಶ್ವರ: ದೇಶದ ಸ್ವತಂತ್ರ ಸಂರಕ್ಷಣೆ ದೇಶದ ಪ್ರತಿ ದೇಶ ಪ್ರೇಮಿಗಳ ಹೊಣೆ, ಇಲ್ಲವಾದರೆ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ ದೇಶಗಳ ತರ ಪರಿಸ್ಥಿತಿ. ದೇಶ ವಿರೋಧಿ ಶಕ್ತಿಗಳನ್ನು ಕೂಡಲೇ ಮಟ್ಟ ಹಾಕುವ ಅಗತ್ಯತೆ ಈಗಾಗಲೇ ಇದೆ ಎಂದು ಬಿಜೆಪಿ ಮಂಜೇಶ್ವರ ವಿಧಾನ ಸಭಾ ಸಭೆಯಲ್ಲಿ ಚರ್ಚಿಸಲಾಯಿತು. ಬಿಜೆಪಿ ಮಂಜೇಶ್ವರ ವಿಧಾನ ಸಭಾ, ಮಂಡಲ ನೇತೃತ್ವ ಸಭೆ ಇಂದು ಕೈಕಂಬ ಪಂಚಮಿ ಸಭಾಂಗಣದಲ್ಲಿ ಬಿಜೆಪಿ ನೇತಾರ ಸುಧಾಮ ಗೊಸಾಡರ ಅಧ್ಯಕ್ಷತೆಯಲ್ಲಿ ಜರಗಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಉದ್ಘಾಟಿಸಿದರು.
ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ ಕಯ್ಯಾರ್, ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ಸುನಿಲ್ ಅನಂತಪುರ, ಚಂದ್ರವತಿ ಶೆಟ್ಟಿ, ತುಳಸಿ ಕುಮಾರಿ, ಯಾದವ ಬಡಾಜೆ, ಯತೀರಾಜ್ ಶೆಟ್ಟಿ, ಜಯಂತ ಪಟಾಲಿ, ಸುಧಾಕರ ಕಾಮತ್, ಬಾಬು ಕುಬನೂರ್, ರವಿರಾಜ್, ಅವಿನಾಶ್ ಕಾರಂತ್, ಪ್ರದೀಪ್ ಕುಂಬಳೆ ಹಾಗೂ ವಿವಿಧ ಪಂಚಾಯತ್ ಅಧ್ಯಕ್ಷರು, ಮೋರ್ಚಾ ನೇತಾರರು ಉಪಸ್ಥಿತರಿದ್ದರು. ವಸಂತ್ ಮಯ್ಯ ಸ್ವಾಗತಿಸಿ, ಧನರಾಜ್ ವಂದಿಸಿದರು. ಆಗಸ್ಟ್ 11 ರಂದು ದೇಶದ ಸ್ವಾತಂತ್ರ ದಿನ ಆಚರಣೆ ಪ್ರಚಾರರ್ಥ ಬೈಕ್ ರ‍್ಯಾಲಿಯು ಬೆಳಗ್ಗೆ 10.00 ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರ ಬಳಿಯಿಂದ ಆರಂಭಗೊಳ್ಳಲಿದೆ. ರ‍್ಯಾಲಿಯು ಮೊರತನೆ, ಮಿಯಪದವು, ಪೈವಳಿಕೆ, ಪೆರ್ಮುದೆ, ಸೀತಾoಗೋಳಿ ದಾರಿಯಾಗಿ ಕುಂಬಳೆ ಪೇಟೆಯಲ್ಲಿ ಸಮಾರೋಪಗೊಳ್ಳಲಿದೆ. (ರ‍್ಯಾಲಿಯಲ್ಲಿ ಭಾಗವಹಿಸುವವರು ರಾಷ್ಟ್ರ ಧ್ವಜ ಮಾತ್ರ ಅವಕಾಶ. ಬೈಕ್, ಲೈಸನ್ಸ್, ದಾಖಲೆಗಳು, ಹೆಲ್ಮೆಟ್ ಕಡ್ಡಾಯ.) ಸರ್ವರೂ.. ಭಾಗವಹಿಸುವಂತೆ ಬಿಜೆಪಿ ವಿನಂತಿಸಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.