ಪೈವಳಿಕೆ: ಮಂಜೇಶ್ವರ ಮಂಡಲದ ಬಿಜೆಪಿ ಕಾರ್ಯಕರ್ತರಲ್ಲಿ ಆವೇಶದ ಅಲೆ ಎಬ್ಬಿಸಿ ಪೈವಳಿಕೆಯಲ್ಲಿ ಎನ್ ಡಿ ಎ ಅಭ್ಯರ್ಥಿ ಕೆ ಸುರೇಂದ್ರನ್ ರೋಡ್ ಶೋ ನಡೆಯಿತು. ಶುಕ್ರವಾರ ಸಂಜೆ ಬಾಯಿಕಟ್ಟೆಯಿಂದ ಆರಂಭಿಸಿ. ಪೈವಳಿಕೆಯಲ್ಲಿ ಸಮಾಪ್ತಿಗೊಂಡ ರೋಡ್ ಶೋ ನಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡರು. ದ.ಕ ಸಂಸದ ಬ್ರಿಜೇಷ್ ಚೌಟ ರೋಡ್ ಶೋ ಉದ್ಘಾಟಿಸಿದರು. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ, ವಿಜಯ ಕುಮಾರ್ ರೈ, ಸುನಿಲ್ ಅನಂತಪುರ, ಆದರ್ಶ್ ಮಂಜೇಶ್ವರ ಮೊದಲಾದವರು ನೇತೃತ್ವ ನೀಡಿದರು. ದ. ಕ ಜಿಲ್ಲೆಯ ಹಲವು ಕಾರ್ಯಕರ್ತರು ಸಹಿತ ನೂರಾರು ಮಂದಿ ಪಾಲ್ಗೊಂಡರು.
8:10:45
