Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ತಿನ ಮಂಜೇಶ್ವರ ತಾಲೂಕಿನ ವಿಶೇಷ ಸಭೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ತಿನ ಮಂಜೇಶ್ವರ ತಾಲೂಕಿನ ವಿಶೇಷ ಸಭೆ.
ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ತಿನ ವಿಶೇಷ ಸಭೆಯನ್ನು ಮಂಜೇಶ್ವರ ತಾಲೂಕಿನ ಭಜನಾ ಪರಿಷತ್ತಿನ ಅಧ್ಯಕ್ಷರಾದ ದಿನೇಶ್ ಚೆರಗೋಳಿಯವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಮಂಜೇಶ್ವರ ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಶಶಿಕಲಾ ಸುವರ್ಣ ರವರು ಭಜನಾ ಪರಿಷತ್ತಿನ ನಿರ್ವಹಣೆ ಮತ್ತು ಪದಾಧಿಕಾರಿಗಳ ಭಾಗವಹಿಸುವಿಕೆಯ ಬಗ್ಗೆ ಮಾಹಿತಿ ನೀಡಿದರು, ಶ್ರೀ ಶ್ರೀ ಧರ್ಮಸ್ಥಳ ಭಜನಾ ಪರಿಷತ್ತಿನ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಭಾಗವಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟಂಬರ್ 22 ರಿಂದ 29 ರವರೆಗೆ 8 ದಿವಸಗಳವರೆಗೆ ನಡೆಯಲಿರುವ ಭಜನಾ ಕಮ್ಮಟದ ಬಗ್ಗೆ ಹಾಗೂ ಭಜನಾ ಮಂಗಳೋತ್ಸವದ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಶಿಬಿರದಲ್ಲಿ ಭಾಗವಹಿಸಿಸುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಭರ್ತಿ ಮಾಡಿ ಕಳಿಸಿ ಕೊಡುವಂತೆ ತಿಳಿಸಿದರು. ಸಭೆಯಲ್ಲಿ ಭಜನಾ ಪರಿಷತ್ತಿನ ಕಾರ್ಯದರ್ಶಿ ರಾಮಕೃಷ್ಣ ಸಂತಡ್ಕ, ಪರಿಷತ್ ವಲಯ ಅಧ್ಯಕ್ಷ ಸಂಜೀವ ಶೆಟ್ಟಿ ಮಾಡ ,‌ ಸುಂಕದ ಕಟ್ಟೆ ವಲಯ ಅಧ್ಯಕ್ಷ ಉಮೇಶ್ ಹಾಗೂ ತಲಪಾಡಿ, ಕುಂಬಳೆ, ಸುಂಕದಕಟ್ಟೆ ಪೈವಳಿಕೆ ಮತ್ತು ಪೆರ್ಲ ವಲಯದ ಪದಾಧಿಕಾರಿಗಳು ಮತ್ತು ಭಜನಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಂಜೇಶ್ವರ ಭಜನಾ ಪರಿಷತ್ತನ್ನು ಕ್ರಿಯಾಶೀಲಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಸಭೆಯನ್ನು ತಲಪಾಡಿ ವಲಯದ ‌ ಮೇಲ್ವಿಚಾರಕರು ನಿರೂಪಿಸಿ, ಸ್ವಾಗತಿಸಿ, ಧನ್ಯವಾದ ವಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.