ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್‌ಡಿಎಫ್ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಭರ್ಜರಿ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಕೆ ನಡೆಸಿದರು.
ಮಂಜೇಶ್ವರ ಕ್ಷೇತ್ರದ ಎಲ್‌ಡಿಎಫ್ ಅಭ್ಯರ್ಥಿ ಕೆ. ಆರ್. ಜಯಾನಂದ ಅವರು ಸಿಪಿಐಎಂ ನಾಯಕ ಕೆ. ಪಿ. ಸತೀಶ್ಚಂದ್ರನ್ ಹಾಗೂ ಸಿಪಿಐ ನಾಯಕ ಜಯರಾಂ ಬಲ್ಲಂಗುಡೇಲು ಅವರೊಂದಿಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಉದುಮ ಕ್ಷೇತ್ರದ ಸಿ. ಎಚ್. ಕುಂಞಂಬು, ಕಾಞಂಗಾಡು ಕ್ಷೇತ್ರದ ಗೋವಿಂದನ್ ಪಳ್ಳಿಕಾಪಿಲ್ ಮತ್ತು ತ್ರಿಕರಿಪುರ ಕ್ಷೇತ್ರದ ಪಿ.ಪಿ. ಮುಸ್ತಫಾ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಅಭ್ಯರ್ಥಿಗಳು ಮತದಾರರ ಭೇಟಿಗೆ ಹೆಚ್ಚಿನ ಸಮಯ ಮೀಸಲಿಟ್ಟು ಕ್ಷೇತ್ರದಲ್ಲಿ ಸಕ್ರಿಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
