ವಕ್ಫ್ ತಿದ್ದುಪಡಿ ಮಸೂದೆ ಪ್ರತಿಯನ್ನು ಸುಟ್ಟು ಕೇರಳ ರಾಜ್ಯಾದ್ಯಂತ ಪಿಡಿಪಿ ಪ್ರತಿಭಟನೆ.
ಆಗಸ್ಟ್ 10, 2024
0
ವಕ್ಫ್ ತಿದ್ದುಪಡಿ ಮಸೂದೆ ಪ್ರತಿಯನ್ನು ಸುಟ್ಟು ಕೇರಳ ರಾಜ್ಯಾದ್ಯಂತ ಪಿಡಿಪಿ ಪ್ರತಿಭಟನೆ.
ಕಾಸರಗೋಡು: ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ನಿನ್ನೆ ಸಂಸತ್ತಿನಲ್ಲಿ ಮಂಡಿಸಿದ ವಕ್ಫ್ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ತಿದ್ದುಪಡಿ ಮಸೂದೆಯ ಪ್ರತಿಗಳನ್ನು ಸುಟ್ಟು ಕೇರಳ ರಾಜ್ಯಾದ್ಯಂತ ಪಿಡಿಪಿ ಪಕ್ಷವು ಪ್ರತಿಭಟನೆ ನಡೆಸಲಾಯಿತು. ಜೆ.ಪಿ.ಸಿ ಗೆ ವರ್ಗಾಯಿಸಿದ ತಿದ್ದುಪಡಿ ವಿಧೇಯಕವನ್ನು ಕಾನೂನು ಮಾಡಲು ಕೇಂದ್ರ ಸರಕಾರ ಹಠ ಹಿಡಿದಿದೆ ಬಾಲಿಶ ವಾದಗಳೊಂದಿಗೆ ಸಂಸತಿನಲ್ಲಿ ಮಂದಿಸಿದ ಮಸೂದೆ ಪ್ರತಿಫಕ್ಷ ವಿರೋಧ ಹಿನ್ನಲೆಯಲ್ಲಿ ಜಂಟಿ ಸಂಸದೀಯ ಸಮಿತಿಗೆ ವರ್ಗಾಯಿಸಿದ್ದರೂ, ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ತಿದ್ದುಪಡಿ ಮಸೂದೆ ಜ್ಯಾರಿ ಗೊಳಿಸುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಪಿಡಿಪಿ ಉಸ್ತುವಾರಿ ಸಮಿತಿ ಪ್ರಧಾನ ಸಂಚಾಲಕರಾದ ಎಸ್ ಎಮ್ ಬಷೀರ್ ಅಹಮ್ಮದ್ ರಸ್ವಿ ನುಡಿದರು. ಅವರು ಪಕ್ಷದ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಭಾಗವಾಗಿ ಕಾಸರಗೋಡು ತಲಂಗರ ಮಾಲೀಕ್ ದೀನಾರ್ ನಗರದಲ್ಲಿ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅನ್ಯ ಧರ್ಮೀಯರನ್ನು ರಾಜ್ಯ ವಕ್ಫ್ ಗೆ ಸೇರಿಸುವ ವಿಧೇಯಕ ಜಾರಿಗೆ ಕೇಂದ್ರ ಸರ್ಕಾರ ಹಠ ಹಿಡಿದಿದೆ. ಮಹಿಳಾ ಪ್ರಾತಿನಿಧ್ಯದ ಭಾಗವಾಗಿ ಇಬ್ಬರು ಮಹಿಳೆಯರನ್ನು ಸೇರಿಸಿಕೊಳ್ಳುವುದು ಎಂದೂ ಮಾಸೂದೆಯಲ್ಲಿ ಮಂಡಿಸಲಾಗಿದೆ, ಇವು ಕೋಮು ಧ್ರುವೀಕರಣ ಮತ್ತು ವಕ್ಫ್ ಆಸ್ತಿಗಳನ್ನು ದುರ್ಬಳಕೆ ಮಾಡುವುದು ಫ್ಯಾಸಿಸ್ಟ್ ಅಜೆಂಡಾಗಳು ಎಂದು ಅವರು ಹೇಳಿದರು. ಪ್ರತಿಭಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಡಿಪಿ ಕಾಸರಗೋಡು ಜಿಲ್ಲಾಧ್ಯಕ್ಷ ಯೂನಸ್ ತಳಂಕರ ಮಾತನಾಡಿ, ಅಧಿಕಾರ ವಿಕೇಂದ್ರೀಕರಣದ ಕನಸನ್ನು ಧ್ವಂಸಗೊಳಿಸಿ ದೇಶದ ಇಡೀ ವ್ಯವಸ್ಥೆಯ ಅಧಿಕಾರವನ್ನು ಕೇಂದ್ರೀಕರಣಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದರು .
ಜಿಲ್ಲಾ ಪದಾಧಿಕಾರಿಗಳಾದ ಅಶ್ರಫ್ ಬೋವಿಕಾನಂ, ಎಂ.ಎ.ಕಲತ್ತೂರು, ಖಾದರ್ ಅಡೂರು, ಅಶ್ರಫ್ ಆರಿಕಾಡಿ ಮಾತನಾಡಿದರು.
ಪಿಯು ಅಬ್ದುರ್ರಹ್ಮಾನ್ ತಳಂಗರ ಸ್ವಾಗತಿಸಿ, ರಫೀಕ್ ತಳಂಗರ ವಂದಿಸಿದರು




