Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

"ಮಾಲಿನ್ಯ ಮುಕ್ತ ಪಂಚಾಯತ್" ಸಾರ್ವಜನಿಕ ಸಹಕಾರ ಅಗತ್ಯ. ಕಠಿಣ ಕ್ರಮಕ್ಕೆ ಮಂಜೇಶ್ವರ ಗ್ರಾಮ ಪಂಚಾಯತ್ ನಿರ್ಧಾರ.

"ಮಾಲಿನ್ಯ ಮುಕ್ತ ಪಂಚಾಯತ್" ಸಾರ್ವಜನಿಕ ಸಹಕಾರ ಅಗತ್ಯ. ಕಠಿಣ ಕ್ರಮಕ್ಕೆ ಮಂಜೇಶ್ವರ ಗ್ರಾಮ ಪಂಚಾಯತ್ ನಿರ್ಧಾರ.
ಮಂಜೇಶ್ವರ: ಜನರ ಮನಸ್ಥಿತಿ ಬದಲಾದರೆ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ, ರಾತ್ರಿ ಮರೆವಿನಲ್ಲಿ ಕಿಡಿಗೇಡಿಗಳು ಮಾಡುವ ಅನಾಚಾರಕ್ಕೆ ಪಂಚಾಯತ್ ಬೆಲೆ ತೆರಬೇಕಾಗಿ ಬರುತ್ತದೆ ಎಂದು ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನೋ ಮೆಂತೆರೋ ಹೇಳಿದರು. ಪಂಚಾಯತ್ ವ್ಯಾಪ್ತಿಯ ಹರಿತ ಕರ್ಮ ಸೇನೆ, ಕುಟುಂಬ ಶ್ರೀ, ವ್ಯಾಪಾರಿಗಳ, ಜನಪ್ರತಿನಿದಿನಗಳ, ಆಶಾ ಕಾರ್ಯಕರ್ತರ ಕಾರ್ಯಾಗಾರ ಜಿಲ್ಲಾ ಸುಚಿತ್ವ ಮಿಷನ್ ಉದ್ಘಾಟಿಸಿ ಅವರು ಮಾತನಾಡಿದರು.
ಸುಚಿತ್ವ ಮಿಷನ್ ಜಿಲ್ಲಾ ಮುಖ್ಯಸ್ಥ ಕೃಷ್ಣ ಕುಮಾರ್ ಮಾಹಿತಿ ನೀಡಿ ಹರಿತ ಕರ್ಮ ಸೇನೆಯ ಕಾರ್ಯಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವು ಕಠಿಣ ನಿರ್ಧಾರಗಳಿಂದ ಮಾತ್ರ ನಿಯಮ ಜಾರಿ ಮಾಡಿದರೆ ಯಶಸ್ಸು, ಪಂಚಾಯತ್ ಸೇವೆ ನೀಡಬೇಕಾದರೆ ಜನತೆಯ ಸಹಕಾರವು ಅಗತ್ಯ ಎಂದರು. ತ್ಯಾಜ್ಯ ಎಸೆಯುವವರ ಮೇಲೆ ಕಠಿಣ ಕ್ರಮ ಅಗತ್ಯ, ಪ್ರತಿ ವ್ಯಾಪಾರ ಕೇಂದ್ರಗಳು ಪಂಚಾಯತ್ ಲೈಸಸ್ ಅಗತ್ಯವಾಗಿ ಪಡೆದಿರಬೇಕು ಮತ್ತು ಹರಿತ ಕರ್ಮ ಸೇನೆಗೆ ಫೀ ನೀಡಬೇಕು. ಸರಕಾರ ನಿಷೇದಿಸಿದ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಠಿಣ ನಿಯಮ, ಬೀದಿ ಬದಿ ವ್ಯಾಪಾರಿಗಳ ಮೇಲೆ ನಿಗಾ, ಹೋಟೆಲ್, ಮಾಂಸ ಅಂಗಡಿ ಗಳ ಲೈಸನ್ಸ್ ಕಡ್ಡಾಯ ಕೂಡಲೇ ಜಾರಿ ಮಾಡಬೇಕು. ಅಗತ್ಯ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಕೆ ಅಗತ್ಯ ಎಂದು ಹೇಳಿದರು. ಪಂಚಾಯತ್ ಕಾರ್ಯದರ್ಶಿ ಸ್ವಾಗತಿಸಿದರು.
ಪಂಚಾಯತ್ ಸದಸ್ಯರಾದ ಮೊಹಮ್ಮದ್ ಸಿದ್ದಿಕ್, ರಾಧಾ ಕನಿಲ, ಆದರ್ಶ ಬಿ ಎಂ, ಸಮೀರಾ, ಕುಲ್ಸುಮ್ಮಾ, ಜಯಂತಿ, ಲಕ್ಷ್ಮಣ ಕುಚ್ಚಿಕಾಡ್, ವಿನಯ ಭಾಸ್ಕರ್, ಪಂಚಾಯತ್ ಅಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಮತಿ ಸುಪ್ರಿಯಾ ಶೆಣೈ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.