Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ವರ್ಕಾಡಿ ಭೂಕುಸಿತ ಉಂಟಾದ ಪ್ರದೇಶಕ್ಕೆ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಹಿತ ಜನಪ್ರತಿನಿಧಿಗಳ ತಂಡ ಭೇಟಿ.

ವರ್ಕಾಡಿ ಭೂಕುಸಿತ ಉಂಟಾದ ಪ್ರದೇಶಕ್ಕೆ ಜನಪ್ರತಿನಿಧಿ ತಂಡ ಭೇಟಿ.
ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತ್ ಗೊಳಪಡುವ ಭೂಕುಸಿತ ಉಂಟಾದ ಪ್ರದೇಶಗಳಲ್ಲಿ ಎಚ್ಚರಿಕೆ ಮತ್ತು ಭದ್ರತೆ ಅತ್ಯಗತ್ಯ ಎಂಬುದಾಗಿ ಸ್ಥಳ ಸಂದರ್ಶಿಸಿದ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಮೀನ ಟೀಚರ್ ಅಧಿಕೃತರನ್ನು ಒತ್ತಾಯಿಸಿದ್ದಾರೆ.
ಭೂಕುಸಿತದ ಸಾಧ್ಯತೆಯಿರುವ ಕಾಟರಿಕೋಟಿ, ಕಜೆ, ಕತ್ತರಿಕೋಡಿ ಪ್ರದೇಶಗಳಲ್ಲಿ ಬ್ಲಾಕ್ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿನ ಜನಪ್ರತಿನಿಧಿಗಳ ತಂಡ ಪ್ರದೇಶವನ್ನು ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮಂಜೇಶ್ವರ ಬ್ಲೋಕ್ ಪಂಚಾಯತ್ ಉಪಾಧ್ಯಕ್ಷ ರಾದ ಮಹಮ್ಮದ್ ಹನೀಫ್ ಪಿ ಕೆ, ಆರೋಗ್ಯ ಶಿಕ್ಷಣ ಸ್ಟಾಂಡಿಂಗ್ ಕಮಿಟಿ ಅಧ್ಯಕ್ಷ ಶಂಸೀನ ಎ, ಬ್ಲಾಕ್ ಪಂಚಾಯತ್ ಸದಸ್ಯರಾದ ಮೊಯ್ತೀನ್ ಕುಂಞಿ ತಲಕ್ಕಿ, ವರ್ಕಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಪಂ ಸದಸ್ಯರಾದ ಉಮರ್ ಬೋರ್ಕಳ, ಶಿವರಾಜ್ ಕುಮಾರ್, ಪದ್ಮಾವತಿ, ಗೀತ, ಭಾಸ್ಕರ್, ಸೀತಾ, ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.