Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

"ನಮ್ಮ ಮಂಜೇಶ್ವರ" ನ್ಯೂಸ್ ಫಲಶ್ರುತಿ. ಭೂ ಕುಸಿತಗೊಂಡ ಬಾಕ್ರಬೈಲು ಕಜೆ ಬಜಿಲಾಡಿ ಗುಡ್ಡ ಪ್ರದೇಶಕ್ಕೆ ಕಾಸರಗೋಡು ಜಿಲ್ಲಾಧಿಕಾರಿ, ಮಂಜೇಶ್ವರ ಶಾಸಕ, ತಹಶೀಲ್ದಾರ್ ಭೇಟಿ.

"ನಮ್ಮ ಮಂಜೇಶ್ವರ" ನ್ಯೂಸ್ ಫಲಶ್ರುತಿ. ಭೂ ಕುಸಿತಗೊಂಡ ಬಾಕ್ರಬೈಲು ಕಜೆ ಬಜಿಲಾಡಿ ಗುಡ್ಡ ಪ್ರದೇಶಕ್ಕೆ ಕಾಸರಗೋಡು ಜಿಲ್ಲಾಧಿಕಾರಿ, ಮಂಜೇಶ್ವರ ಶಾಸಕ, ತಹಶೀಲ್ದಾರ್ ಭೇಟಿ.
ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತ್ 7 ನೇ ವಾರ್ಡ್ ಪಾತೂರು ಕಜೆ ಬಜಿಲಾಡಿ ಗುಡ್ಡೆ ಪ್ರದೇಶದಲ್ಲಿ ನಿನ್ನೆ ಭೂಮಿಯು ಬಿರುಕು ಬಿಟ್ಟು, ಕುಸಿತಗೊಂಡ ಸ್ಥಳಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಬ ಶೇಖರ್, ಮಂಜೇಶ್ವರ ಶಾಸಕರಾದ ಎ. ಕೆ.ಎಂ ಅಶ್ರಫ್ ಮಂಜೇಶ್ವರ ತಹಶೀಲ್ದಾರ್ ಶಿಬು ಪಿ ಇಂದು ಭೇಟಿ ನೀಡಿದರು.
ಬಿರುಕು ಬಿಟ್ಟ ಪ್ರದೇಶಗಳನ್ನ ಹಾಗೂ ಪರಿಸರದಲ್ಲಿ ವಾಸಿಸುತ್ತಿರುವ ಮನೆಯವರ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು 'ಬಿರುಕು ಬಿಟ್ಟ ಸ್ಥಳವನ್ನು ನಕ್ಷೆ ಬಿಡಿಸಿ ಗುರುತು (ಮಾರ್ಕ್) ಮಾಡಲು ಮತ್ತು ಮಂಜೇಶ್ವರ ಪೊಲೀಸ್ ಠಾಣಾಧಿಕಾರಿಗಳ ಗಮನಕ್ಕೆ ತಂದು, ಪರಿಸರದಲ್ಲಿ ವಾಸಿಸುವ ಮನೆಯವರಿಗೂ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಹಶೀಲ್ದಾರ್ ರವರಿಗೆ ಸೂಚಿಸಿದರು'.
ಈ ವೇಳೆ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಜಾಗೃತಿ ಬಗ್ಗೆ ಅರಿವನ್ನು ಮೂಡಿಸಿ ಯಾರೂ ಭಯಪಡದಿರಿ, ಸರಕಾರದ ಗಮನಕ್ಕೆ ತಂದು ನಮ್ಮಿಂದಾಗುವ ಎಲ್ಲಾ ರೀತಿಯ ಸಹಾಯ ಸಹಕಾರವನ್ನು ಮಾಡುತ್ತೇವೆ ಎಂದು ಜನತೆಗೆ ಧೈರ್ಯ ತುಂಬಿದರು.
ಮಂಜೇಶ್ವರ ಠಾಣಾಧಿಕಾರಿಗಳಾದ ರಾಜೀವ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರು ಹಾಗೂ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್, ವಾರ್ಡ್ ಸದಸ್ಯರೂ ಮಾಜಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಬಿ.ಎ, ವರ್ಕಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪಿ.ಬಿ ಅಬೂಬಕ್ಕರ್ ಪಾತೂರ್, ಕೊಡ್ಲಮೊಗರು ಗ್ರಾಮಾಧಿಕಾರಿ ಕಿರಣ್ ಶೆಟ್ಟಿ, ಬಾಡೂರು ಗ್ರಾಮಾಧಿಕಾರಿ ಇಬ್ರಾಹಿಂ, ವರ್ಕಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಿ. ಅನಿಲ್ ಕುಮಾರ್, ಜಿಯೊಲಾಜಿಸ್ಟ್ ಸಿಬ್ಬಂದಿಗಳಾದ ವಿಜಯ, ಅಶ್ವತಿ ಮಂಜೇಶ್ವರ ತಾಲೂಕು ಕಚೇರಿ ಸಿಬ್ಬಂದಿ ನೌಷಾದ್ ಎಸ್ ಹಾಗೂ ರಾಜಕೀಯ ಸಾಮಾಜಿಕ ವ್ಯಕ್ತಿಗಳು ಉಪಸ್ಥಿತರಿದ್ದರು. ಬಜಿಲಾಡಿ ಎಂಬ ಎತ್ತರದ ಗುಡ್ಡೆ ಪ್ರದೇಶದ ಕೆಳಗಡೆ ಹಲವಾರು ಮನೆಗಳಿವೆ.
ಸುರಿಯುತ್ತಿರುವ ಮಳೆಗೆ ಗುಡ್ಡೆ ಪ್ರದೇಶದಲ್ಲಿರುವ ರಸ್ತೆಯಲ್ಲಿ ಸುಮಾರು 2 ಫೀಟ್ ನೆಲ ಕುಸಿದು ಹೋಗಿತ್ತು. ಅಲ್ಲದೆ ಪಕ್ಕದಲ್ಲಿರುವ ಗುಡ್ಡೆ ಕೂಡಾ ಕುಸಿಯುವ ಭೀತಿಯಲ್ಲಿದ್ದು, ಈ ಪರಿಸರ ಪ್ರದೇಶ ಇದೀಗ ಅಪಾಯದಲ್ಲಿದ್ದೆ. ಇಲ್ಲಿ 5 ಮನೆಗಳಿದ್ದು, ಮನೆಯವರು ಭಯ ಭೀತರಾಗಿದ್ದರು. ಈ ಬಗ್ಗೆ "ನಮ್ಮ ಮಂಜೇಶ್ವರ" ನ್ಯೂಸ್ ನಿನ್ನೆ ಚಿತ್ರ ಸಹಿತ ಸಮಗ್ರ ವರದಿಯನ್ನು ಬಿತ್ತರಿಸಿ, ಅಧಿಕಾರಿಗಳ ಗಮನ ಸೆಳೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.