Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ತೀವ್ರ ಭೂಕುಸಿತ ಭೀತಿಯಲ್ಲಿರುವ ಕತ್ತರಿಕೋಡಿ ಪ್ರದೇಶಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಶ್ರೀ ಇಂಬಶೇಖರನ್ ಭೇಟಿ.

ತೀವ್ರ ಭೂಕುಸಿತ ಭೀತಿಯಲ್ಲಿರುವ ಕತ್ತರಿಕೋಡಿ ಪ್ರದೇಶಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಶ್ರೀ ಇಂಬಶೇಖರನ್ ಭೇಟಿ.
ವರ್ಕಾಡಿ: ತೀವ್ರ ಭೂಕುಸಿತ ಭೀತಿಯಲ್ಲಿರುವ ವರ್ಕಾಡಿ ಗ್ರಾಮ ಪಂಚಾಯತ್ ನ ಕತ್ತರಿಕೋಡಿ ಪ್ರದೇಶಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಶ್ರೀ ಇಂಬಶೇಖರನ್ ಭೇಟಿ ನೀಡಿದರು.
ಆನೆಕಲ್ಲು ನದಿಗೆ ಅಭಿಮುಖವಾಗಿರುವ ಕತ್ತರಿಕೋಡಿ ಕಿರು ಬೆಟ್ಟ ಪ್ರದೇಶದ ವಿವಿಧೆಡೆ ಮಣ್ಣು ಕುಸಿದಿದೆ. ಧಾರಾಕಾರ ಒರತೆಯ ಕಾರಣ ಸಣ್ಣ ಸಣ್ಣ ಕಲ್ಲುಗಳು ಮತ್ತು ಮಣ್ಣು ಕೆಳಗೆ ಸರಿಯುತ್ತಿವೆ. ಕತ್ತರಿಕೋಡಿ ಹರಿಶ್ಚಂದ್ರ ನಾಯ್ಕರ ಹಳೆ ಮನೆ ಹಾಗೂ ನಿರ್ಮಾಣ ಹಂತದಲ್ಲಿರುವ ಮನೆ ಸಂಪೂರ್ಣ ಹಾನಿಗೀಡಾಗಿವೆ. ಪ್ರಸನ್ನ ನಾಯ್ಕರ ಮನೆ ಪರಿಸರದಲ್ಲಿ ಗುಡ್ಡ ಜರಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಆರು ಪ್ರದೇಶದ ಆರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲಾಗಿತ್ತು.
ಸ್ಥಳಾಂತರಗೊಂಡವರು ಇನ್ನೊಂದು ಸೂಚನೆ ಲಭಿಸುವ ತನಕ ಇಲ್ಲಿ ವಾಸ್ತವ್ಯ ಮಾಡಬಾರದೆಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಭೇಟಿ ಸಂದರ್ಭದಲ್ಲಿ ಮಂಜೇಶ್ವರ ತಹಶೀಲ್ದಾರ್, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್, ಸದಸ್ಯರಾದ ಶ್ರೀ ಉಮ್ಮರ್ ಬೋರ್ಕಳ, ಪಂಚಾಯತ್ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್, ಜಿಯೋಲಜಿಸ್ಟ್, ವಿಲೇಜ್ ಆಫೀಸರ್ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.