Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ವಯನಾಡ್ ದುರಂತವನ್ನು ನಿವಾರಿಸುವಲ್ಲಿ ಪಂಚಾಯತ್‌ಗಳು ಮಾದರಿಯಾಗಬೇಕು. - ಪಿ.ಡಿ.ಪಿ.

ವಯನಾಡ್ ದುರಂತವನ್ನು ನಿವಾರಿಸುವಲ್ಲಿ ಪಂಚಾಯತ್‌ಗಳು ಮಾದರಿಯಾಗಬೇಕು. - ಪಿ.ಡಿ.ಪಿ.
ಮಂಜೇಶ್ವರ: ದೇಶವನ್ನೇ ತಲ್ಲಣಗೊಳಿಸಿರುವ ವಯನಾಡು ದುರಂತದಿಂದ ಆಗಿರುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಪತ್ತನ್ನು "ರಾಷ್ಟ್ರೀಯ ವಿಪತ್ತು" ಎಂದು ಘೋಷಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಈ ಪರಿಸ್ಥಿತಿಯಲ್ಲಿ ವಯನಾಡು ಮುಂಡಕಾಯಂ ಸೇರಿದಂತೆ ಆ ಭಾಗದಲ್ಲಿ ಭೂಕುಸಿತ ಹಾಗೂ ಮಳೆಯಿಂದ ಉಂಟಾದ ನಷ್ಟದಿಂದ ನಿವೇಶನ ಕಳೆದುಕೊಂಡಿರುವ ಕುಟುಂಬವೊಂದಕ್ಕೆ ಗ್ರಾಮ ಪಂಚಾಯತಿಯ ಪರಿಹಾರ ಕಾರ್ಯದ ಅಂಗವಾಗಿ ಮನೆ ನೀಡುವಂತೆ ಪಿಡಿಪಿ ಮನವಿ ಮಾಡಿದೆ. ಈ ನಿಲುವು ತಳೆಯಲು ಅಗತ್ಯ ಆದಾಯ ಹೊಂದಿರುವ ರಾಜ್ಯದ ಎಲ್ಲ ಪಂಚಾಯತ್ ಗಳಿಗೂ ಮಂಜೇಶ್ವರ ಗ್ರಾಮ ಪಂಚಾಯತ್ ಮಾದರಿಯಾಗಬೇಕು ಎಂದು ಪಿ.ಡಿ.ಪಿ ಮಂಜೇಶ್ವರ ಆಗ್ರಹಿಸಿದೆ. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನಾ ಲವೀನ್ ಮಂತೆರೋ ಅವರಿಗೆ ಪಿ.ಡಿ.ಪಿ ಮಂಜೇಶ್ವರ ಪಂಚಾಯತ್ ಸಮಿತಿ ನೀಡಿದ ಮನವಿಯಲ್ಲಿ ಈ ಬೇಡಿಕೆಯನ್ನು ಪ್ರಸ್ತಾಪಿಸಲಾಗಿದೆ. ಮನವಿ ಸ್ವೀಕರಿಸಿದ ಗ್ರಾ.ಪಂ.ಅಧ್ಯಕ್ಷರು ಸದ್ರಿ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಗಣಿಸಲಾಗುವುದು ಎಂದು ತಿಳಿಸಿ ಕೂಡಲೇ ಪಂಚಾಯತ್ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ ಎಂದು ಪಿಡಿಪಿ ಮಂಜೇಶ್ವರ ಪಂಚಾಯತ್ ಪದಾಧಿಕಾರಿಗಳು ತಿಳಿಸಿದರು. ಪಿಡಿಪಿ ನೇತಾರರಾದ ಮೊಹಮ್ಮದ್ ಹನೀಫಾ ಪೋಸೋಟ್, ಇಬ್ರಾಹಿಂ ತೋಕೆ, ಮುನೀರ್ ಪೊಸೋಟ್, ಅಬ್ದುಲ್ಲ, ಅಬ್ದುಲ್ ರವೂಫ್ ಚುಳ್ಳಿ ಮತ್ತಿತರರು ಮನವಿ ನೀಡಿದ ತಂಡದಲ್ಲಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.