Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಅಸೌಖ್ಯದಿಂದ ಬಳಲುತ್ತಿದ್ದ ವರ್ಕಾಡಿ ಕಾಪಿರಿ ಶಾಲಾ ಬಳಿಯ ಮಡಿಕ ನಿವಾಸಿ, ಬಿಜೆಪಿ ಎಸ್.ಸಿ. ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನ ಮಾಜಿ ನಿರ್ದೇಶಕ ಕೃಷ್ಣಪ್ಪ ಮಡಿಕ (47) ನಿಧನ.

ಅಸೌಖ್ಯದಿಂದ ಬಳಲುತ್ತಿದ್ದ ವರ್ಕಾಡಿ ಕಾಪಿರಿ ಶಾಲಾ ಬಳಿಯ ಮಡಿಕ ನಿವಾಸಿ, ಬಿಜೆಪಿ ಎಸ್.ಸಿ. ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನ ಮಾಜಿ ನಿರ್ದೇಶಕ ಕೃಷ್ಣಪ್ಪ ಮಡಿಕ (47) ನಿಧನ.
ಮಂಜೇಶ್ವರ: ಅಸೌಖ್ಯದಿಂದ ಬಳಲುತ್ತಿದ್ದ ವರ್ಕಾಡಿ ಕಾಪಿರಿ ಶಾಲಾ ಬಳಿಯ ಮಡಿಕ ನಿವಾಸಿ, ಬಿಜೆಪಿ ಎಸ್.ಸಿ. ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ, ವರ್ಕಾಡಿ ಸರ್ವಿಸ್ ಕೊ ಆಪರೇಟಿವ್ ಬ್ಯಾಂಕ್ ನ ಮಾಜಿ ನಿರ್ದೇಶಕ ಕೃಷ್ಣಪ್ಪ ಮಡಿಕ (47) ನಿನ್ನೆ ರಾತ್ರಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ದಿ. ಕೊರಗ - ದಿ. ಐತೆ ದಂಪತಿಗಳ ಪುತ್ರನಾಗಿದ್ದು, ಸಹೋದರ - ಸಹೋದರಿಯರಾದ ಶೇಖರ, ಗುರುವ, ಕಮಲ, ಲಲಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಅವಿವಾಹಿತರಾಗಿದ್ದು, ಮೇಸ್ತ್ರಿ ಕೆಲಸದ ಕಾಂಟ್ರಾಕ್ಟರಾಗಿದ್ದರು. ಮೃತರು ಸರಳ ಸಜ್ಜನಿಕೆಯ, ವ್ಯಕ್ತಿತ್ವದ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಸಾಮಾಜಿಕ ರಂಗದಲ್ಲಿ ಸರ್ವರ ಪ್ರೀತಿಗೆ ಪಾತ್ರರಾಗಿದ್ದರು. ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಇವರು ತಳಮಟ್ಟದಿಂದ ಸಂಘ ಪರಿವಾರದ ಸಂಘಟನೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ, ಸ್ಥಳೀಯ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದರು. ವರ್ಕಾಡಿ ಶ್ರೀ ಕಾವಿ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ದಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ, ಬಿಜೆಪಿ ಮಂಜೇಶ್ವರ ಮಂಡಲ ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ಹಾಗೂ ಸಹಕಾರ ಭಾರತಿಯಿಂದ ವರ್ಕಾಡಿ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಅಸೌಖ್ಯದಿಂದ ಬಳಲುತ್ತಿರುವ ವೇಳೆ ಇವರ ಚಿಕಿತ್ಸೆ ಮೊತ್ತಕ್ಕಾಗಿ ಸ್ಥಳೀಯರು ವಾಟ್ಸಾಪ್ ಗ್ರೂಪ್ ರಚಿಸಿ, ಹಣ ಸಂಗ್ರಹಿಸಲಾಗಿತ್ತು. ಮೃತರ ಮನೆಗೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳ ನೇತಾರರು ಆಗಮಿಸಿ, ಅಂತಿಮ ನಮನ ಸಲ್ಲಿಸಿ, ಮೃತರ ಮನೆಯವರನ್ನು ಸಂತೈಸಿ ಸಂತಾಪ ಸೂಚಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.