44 ನೇ ಮಂಜೇಶ್ವರ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಮಹಾಗಣಪತಿಯ "ವಿಗ್ರಹ ರಚನಾ ಮುಹೂರ್ತ" ಹಾಗೂ ನೂತನ "ಗಣಪತಿ ಪೀಠದ ಸಮರ್ಪಣಾ ಕಾರ್ಯಕ್ರಮ"
ಜುಲೈ 24, 2024
0
44 ನೇ ಮಂಜೇಶ್ವರ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಮಹಾಗಣಪತಿಯ "ವಿಗ್ರಹ ರಚನಾ ಮುಹೂರ್ತ" ಹಾಗೂ ನೂತನ "ಗಣಪತಿ ಪೀಠದ ಸಮರ್ಪಣಾ ಕಾರ್ಯಕ್ರಮ"
ಮಂಜೇಶ್ವರ: ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಲಿರುವ 44 ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಮಹಾಗಣಪತಿಯ "ವಿಗ್ರಹ ರಚನಾ ಮುಹೂರ್ತ" ಹಾಗೂ ನೂತನ "ಗಣಪತಿ ಪೀಠದ ಸಮರ್ಪಣಾ ಕಾರ್ಯಕ್ರಮ" ಇಂದು ಬೆಳಗ್ಗೆ ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರದ ಪ್ರಧಾನ ಅರ್ಚಕರಾದ ತಿರುಮಲೇಶ ಆಚಾರ್ಯರವರು ವೈದಿಕ ಕಾರ್ಯವನ್ನು ನೆರವೇರಿಸಿದರು.ಈ ವೇಳೆ ನೂತನ ವಿಗ್ರಹ ಪೀಠದ ಸಮರ್ಪಣೆ ಕೂಡಾ ನಡೆಯಿತು. ವಿಗ್ರಹ ರಚನೆಗಾರರದ ಮಹೇಶ್ ಆಚಾರ್ಯ ಬಾಯಾರ್ ವಿಗ್ರಹ ರಚನೆಗೆ ಮುಹೂರ್ತ ಕಾರ್ಯವನ್ನು ನೆರವೇರಿಸಿದರು. ಈ ವೇಳೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ನ್ಯಾ. ನವೀನ್ ರಾಜ್ ಕೆ. ಜೆ,
ಪ್ರಧಾನ ಕಾರ್ಯದರ್ಶಿ ಸುರೇಶ್ ಗಾಣಿಂಜಾಲ್,
ಕೋಶಾಧಿಕಾರಿಯಾಗಿ ನರೇಂದ್ರ ಹೆಗಡೆ, ಪದಾಧಿಕಾರಿಗಳಾದ ಪದ್ಮನಾಭ ಕಡಪ್ಪರ, ಅವಿನಾಶ್ ಹೆಗ್ಡೆ, ಹರೀಶ್ ಶೆಟ್ಟಿ ಮಾಡ, ದೇವರಾಜ್ ಎಂ.ಎಸ್, ಭಾಸ್ಕರ ಬಿ.ಎಂ, ಚಂದ್ರಹಾಸ ಪೆಲಪ್ಪಾಡಿ, ರಮೇಶ್ ಕಟ್ಟೆ ಬಜಾರ್, ರಮೇಶ್ ಬಿ.ಎಂ, ನವೀನ್ ಕೌಡೂರು, ಶೇಷಪ್ಪ ಸಾಲ್ಯಾನ್ ವಾಮಂಜೂರು, ನವೀನ್ ಅಡಪ ಹೊಸಬೆಟ್ಟು, ಕೃಷ್ಣ ಜಿ. ಮಂಜೇಶ್ವರ, ಸುನಿಲ್ ಕುಮಾರ್ ಹೊಸಂಗಡಿ, ಶ್ರೀಮತಿ ಅನುಪಮ ನವೀನ್ ರಾಜ್, ಶ್ರೀಮತಿ ಆಶಾಲತಾ ಪೆಲಪ್ಪಾಡಿ, ಶ್ರೀ ಗಣಪತಿ ವಿಗ್ರಹ ಸೇವಾ ಕರ್ತೃ, ಹಾಗೂ ನೂತನ ವಿಗ್ರಹ ಪೀಠದ ಸೇವಾ ಕರ್ತೃ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವರ್ಷದ 44 ನೇ ಮಂಜೇಶ್ವರ ಗಣೇಶೋತ್ಸವವು ಸೆಪ್ಟೆಂಬರ್ ತಿಂಗಳ 7 ರಿಂದ 10 ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಲಿದ್ದು, 10 ರಂದು ವೈಭವದ ಶೋಭಾಯಾತ್ರೆ ನಡೆಯಲಿದೆ.





