Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ತಲಪಾಡಿ ಮಾರಿಯಾಶ್ರಮ ಚರ್ಚ್ ಬಳಿಯ ನಿವಾಸಿ ಪ್ಲಂಬಿಗ್ ಉದ್ಯೋಗಿ ಬ್ರಾಯನ್ ಪಿಂಟೋ (20) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ.

ತಲಪಾಡಿ ಮಾರಿಯಾಶ್ರಮ ಚರ್ಚ್ ಬಳಿಯ ನಿವಾಸಿ ಪ್ಲಂಬಿಗ್ ಉದ್ಯೋಗಿ ಬ್ರಾಯನ್ ಪಿಂಟೋ (20) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ.
ಮಂಜೇಶ್ವರ: ತಲಪಾಡಿ ಮಾರಿಯಾಶ್ರಮ ಚರ್ಚ್ ಬಳಿಯ ನಿವಾಸಿ ಬ್ರಾಯನ್ ಪಿಂಟೋ (20) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಲಪಾಡಿ ರಿಕ್ಷಾ ತಂಗುದಾಣದಲ್ಲಿ ರಿಕ್ಷಾ ಚಾಲಕರಾಗಿರುವ ಬೆನೆಟ್ ಪಿಂಟೋರ ಪುತ್ರನಾಗಿರುವ ಬ್ರಾಯನ್ ಪಿಂಟೋ ಊರಿನಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದನು. ಮೊನ್ನೆ ರಾತ್ರಿ ಮನೆಯಲ್ಲಿದ್ದ ಬ್ರಾಯನ್ ನಿನ್ನೆ ಬೆಳಗ್ಗೆ ಮನೆಯಲ್ಲಿ ಇರಲಿಲ್ಲ. ಇವರ ಮನೆ ಪಕ್ಕ ಇವರ ಇನ್ನೊಂದು ಮನೆಯಿದ್ದು, ಅಲ್ಲಿ ಈತ ಮನೆಯ ಪಕ್ಕಾಸ್ ಗೆ ಶಾಲು ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪರಿಸರದಲ್ಲಿ ವಾಕಿಂಗ್ ಹೋಗುವವರು ಘಟನೆಯನ್ನು ಕಂಡು ಮನೆಯವರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳೀಯರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡಿನ ಸರಕಾರಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಪ್ರಕರಣ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತದೇಹವನ್ನು ಇಂದು ಸಂಜೆ ಮನೆಗೆ ತರಲಾಗುವುದು ಬಳಿಕ ತಲಪಾಡಿ ಮರಿಯಾಶ್ರಮ ಚರ್ಚ್ ನಲ್ಲಿ ಧಪನ ಕಾರ್ಯಕ್ರಮ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತಪಟ್ಟ ಬ್ರಾಯನ್ ಪಿಂಟೋ ತಂದೆ, ತಾಯಿ: ಈನೆಟ್ ಪಿಂಟೋ, ಏಕ ಸಹೋದರಿ: ಬ್ರಿಯೊನ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.