3D ಆನಿಮೇಶನ್ ಉದ್ಯೋಗಿ ಬಂಗ್ರ ಮಂಜೇಶ್ವರ ಸಸಿಹಿತ್ಲು ನಿವಾಸಿ ಗೌತಮ್ (23) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ.
ಜುಲೈ 24, 2024
0
3D ಆನಿಮೇಶನ್ ಉದ್ಯೋಗಿ ಬಂಗ್ರ ಮಂಜೇಶ್ವರ ಸಸಿಹಿತ್ಲು ನಿವಾಸಿ ಗೌತಮ್ (23) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ.
ಮಂಜೇಶ್ವರ: ಬಂಗ್ರ ಮಂಜೇಶ್ವರ ಸಸಿಹಿತ್ಲು ನಿವಾಸಿ ಗೌತಮ್ (23) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 4 ವರ್ಷಗಳಿಂದ ಉಡುಪಿಯಲ್ಲಿರುವ 3D ಆನಿಮೇಶನ್ ಕಂಪೆನಿಯೊಂದಿದರಲ್ಲಿ ದುಡಿಯುತ್ತಿದ್ದನು. ನಿನ್ನೆ ಮನೆಯಲ್ಲಿಯೇ ಇದ್ದು ಮಧ್ಯಾಹ್ನ ಊಟಕ್ಕೆಂದು ಮನೆಯವರು ಮನೆಯ ಮೇಲ್ಮಹಡಿಗೆ ಬಂದು ಕರೆದಾಗ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಸ್ಥಳೀಯರನ್ನು ಕರೆಸಿ ಬಾಗಿಲು ತೆರೆದು ನೋಡಿದಾಗ ಫ್ಯಾನ್ ಗೆ ಶಾಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸುವ ಹಾದಿ ಮದ್ಯೆ ನಿಧನರಾಗಿದ್ದು, ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಇಂದು ಅಪರಾಹ್ನ 12 ಗಂಟೆಗೆ ಮನೆಗೆ ತರಲಾಗುವುದು. ಬಳಿಕ ಗುಡ್ಡೆಕ್ಕೇರಿ ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತಪಟ್ಟ ಗೌತಮ್ ತಂದೆ ಶೇಖರ್ ಈ ಹಿಂದೆ ನಿಧನರಾಗಿದ್ದಾರೆ. ತಾಯಿ: ಸತ್ಯಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

