Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮುರತ್ತನೆ ನಿವಾಸಿ ರಾಜೇಶ್ (40) ಮನೆ ಹಿತ್ತಿಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.

ಮುರತ್ತನೆ ನಿವಾಸಿ ರಾಜೇಶ್ (40) ಮನೆ ಹಿತ್ತಿಲಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.
ಮಂಜೇಶ್ವರ: ಹೊಸಂಗಡಿ ಬಳಿಯ ಮೊರತ್ತನೆ ಅಂಗನವಾಡಿ ಬಳಿಯ ನಿವಾಸಿ ರಾಜೇಶ್ (40) ಎಂಬವರ ಮೃತದೇಹ ಮನೆ ಹಿತ್ತಿಲಿನಲ್ಲಿರುವ ನುಗ್ಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಂದು ಸಂಜೆ ಕಂಡು ಬಂದಿದ್ದಾರೆ. ಮೃತರು ಈ ಹಿಂದೆ ಸೆಂಟ್ರಿಂಗ್ ಕಾರ್ಮಿಕರಾಗಿದ್ದು, ಬಳಿಕ ಅಸೌಖ್ಯದಿಂದ ಮನೆಯಲ್ಲಿದ್ದರು. ತಾಯಿ: ಸರೋಜಿನಿ ಮನೆ ಬಳಿ ಇರುವ ಅಂಗನವಾಡಿಯಲ್ಲಿ ಕಾರ್ಮಿಕೆಯಾಗಿದ್ದು, ಇಂದು ಸಂಜೆ ಅಂಗನವಾಡಿಯಿಂದ ಕೆಲಸ ಮುಗಿಸಿ ಮನೆಗೆ ಬಂದಾಗ ಪುತ್ರ ರಾಜೇಶ್ ಮನೆಯಲ್ಲಿ ಇರಲಿಲ್ಲ. ಹುಡುಕಾಡಿದಾಗ ಮನೆ ಹಿತ್ತಲಿನಲ್ಲಿರುವ ನುಗ್ಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಮೃತದೇಹವನ್ನು ಶವ ಮಹಜರು ನಡೆಸಲು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ನಾಳೆ ಬೆಳಗ್ಗೆ 11.00 ಗಂಟೆಗೆ ಮನೆಗೆ ತರಲಾಗುವುದು. ಬಳಿಕ ಮೊರತ್ತನೆಯಲ್ಲಿರುವ ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ. ಮೃತರು ದಿ. ಕೃಷ್ಣಪ್ಪ ನಾಯ್ಕರ ಪುತ್ರನಾಗಿದ್ದು, ತಾಯಿ, ಪತ್ನಿ: ಗೀತ, ಏಕ ಪುತ್ರಿ ತನ್ಮಯಿ, ಸಹೋದರಿಯರಾದ: ಸವಿತಾ, ಜಯಮಾಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್. ಶೆಟ್ಟಿ ತೆರಳಿ ಮನೆಯವರನ್ನು ಸಂತೈಸಿ, ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ನಿಧನಕ್ಕೆ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಮುರತ್ತನೆ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.