ಆನೆಗುಂದಿ ಶ್ರೀಗಳ ಚಾತುರ್ಮಾಸ್ಯದ ಶುಭ ವೇಳೆ ಪಡುಬಿದ್ರಿ ನಿವಾಸಿ ಉಚ್ಚಿಲ ವಿಶ್ವನಾಥ ಆಚಾರ್ಯ ದಂಪತಿಗಳಿಂದ ಪೊಂಗನೂರು ತಳಿಯ ಹಸುಗಳನ್ನು ಜಗದ್ಗುರುಗಳವರಿಗೆ ಸಮರ್ಪಣೆ. "ಗೌರಿ" ಮತ್ತು "ಶಂಕರ" ಎಂದು ನಾಮಕರಣ.
ಜುಲೈ 25, 2024
0
ಆನೆಗುಂದಿ ಶ್ರೀಗಳ ಚಾತುರ್ಮಾಸ್ಯದ ಶುಭ ವೇಳೆ ಪಡುಬಿದ್ರಿ ನಿವಾಸಿ ಉಚ್ಚಿಲ ವಿಶ್ವನಾಥ ಆಚಾರ್ಯ ದಂಪತಿಗಳಿಂದ ಪೊಂಗನೂರು ತಳಿಯ ಹಸುಗಳನ್ನು ಜಗದ್ಗುರುಗಳವರಿಗೆ ಸಮರ್ಪಣೆ. "ಗೌರಿ" ಮತ್ತು "ಶಂಕರ" ಎಂದು ನಾಮಕರಣ.
ಉಡುಪಿ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ ಪಡುಕುತ್ಯಾರುವಿನಲ್ಲಿ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 20 ನೇ ಚಾತುರ್ಮಾಸ್ಯದ ಶುಭ ವೇಳೆ ಪಡುಬಿದ್ರಿ ನಿವಾಸಿ ಉಚ್ಚಿಲ ವಿಶ್ವನಾಥ ಆಚಾರ್ಯ, ಶ್ರೀಮತಿ ಚಂದ್ರಕಲಾ ವಿ. ಆಚಾರ್ಯ ದಂಪತಿಗಳು ಪೊಂಗನೂರು ತಳಿಯ ಹಸುಗಳನ್ನು ಜಗದ್ಗುರುಗಳವರಿಗೆ ಇಂದು ಸಮರ್ಪಿಸಿದರು. ಆನೆಗುಂದಿ ಶ್ರೀಗಳವರು ಗೌರಿ ಮತ್ತು ಶಂಕರ ಎಂದು ನಾಮಕರಣ ಮಾಡಿ ಹಸುಗಳನ್ನು ಮಹಾಸಂಸ್ಥಾನದ ಶ್ರೀ ಸರಸ್ವತೀ ಗೋಶಾಲೆಗೆ ಸೇರ್ಪಡೆಗೊಳಿಸಿದರು. ಈ ಸಂದರ್ಭದಲ್ಲಿ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ಅಸೆಟ್ ಅಧ್ಯಕ್ಷ ಬಿ. ಸೂರ್ಯಕುಮಾರ್ ಹಳೆಯಂಗಡಿ ಉಪಸ್ಥಿತರಿದ್ದರು.