Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ ಶಾಸಕರೆ.. ಶಿರೂರಲ್ಲಿ ನಿಮ್ಮ ಹುಡುಕಾಟ ಸಾಕು ಮಂಜೇಶ್ವರ ದ ಜನತೆ ನಿಮ್ಮನ ಹುಡುಕುತಿದ್ದಾರೆ. - ಆದರ್ಶ ಬಿ.ಎಂ.

ಮಂಜೇಶ್ವರ ಶಾಸಕರೆ.. ಶಿರೂರಲ್ಲಿ ನಿಮ್ಮ ಹುಡುಕಾಟ ಸಾಕು ಮಂಜೇಶ್ವರ ದ ಜನತೆ ನಿಮ್ಮನ ಹುಡುಕುತಿದ್ದಾರೆ. - ಆದರ್ಶ ಬಿ.ಎಂ.
ಮಂಜೇಶ್ವರ: ಶಿರೂರಲ್ಲಿ ಉಂಟಾದ ಭೂ..ಕುಸಿತ. ಮತ್ತು ನಂತರದ ಬೆಳವಣಿಗೆ. ಶಿರೂರು ಭೂ ಕುಸಿತ ಪ್ರಕರಣ ಹುಡುಕಾಟ ದಾರಿ ತಪ್ಪಿದೆಲ್ಲಿ..? ಯಾರು ಕಾರಣ..? ಯಾರು ಹೊಣೆ..? ಘಟನೆಯ ಬಳಿಕ ಯಾವುದೇ ನಿಪುನತೆ ಇಲ್ಲದೆ, ತಾಂತ್ರಿಕ ಜ್ಞಾನ ತಿಳಿಯದೆ ಅದ ಆಚಾತುರ್ಯ ಕ್ಕೆ ಹೊಣೆ ಯಾರು..? ಸೈನ್ಯ, ನೇವಿ, NDRF, SDRF, ಇರುವಾಗ... ರಂಜಿತ್ ಇಸ್ರೇಲಿ ಅಂತಹ ಅರೇ.. ಜ್ಞಾನಿಗೆ ತನ್ನ ಇಚ್ಛೆಯಂತೆ ಪ್ರವರ್ತಿಸಲು ಅನುಮತಿ ನೀಡಿದವರು ಯಾರು..? ಮಂಜೇಶ್ವರ ಶಾಸಕರಿಗೆ ಅಲ್ಲಿನ ಹುಡುಕಾಟದ ನೇತೃತ್ವ ನೀಡಿದವರು ಯಾರು..? ಮಂಜೇಶ್ವರ ಶಾಸಕರಿಗೆ ಅಲ್ಲಿ ಏನು ಕೆಲಸ..? ತಾನು ಗೆದ್ದ ಕ್ಷೇತ್ರದಲ್ಲಿ ಇರುವ ಅನೇಕ ಜೀವಂತ ಸಮಸ್ಯೆಗಳಿಗೆ ಕಣ್ಣಿದು ಕುರುಡನಂತೆ ವರ್ತಿಸುವ ಶಾಸಕರೇ... ಶಿರೂರಲ್ಲಿ ನಿಮ್ಮ ನಾಟಕ ಸಾಕು ಟಿವಿ ಮಾಧ್ಯಮಗಳ ಮುಂದೆ ನಿಂತು ಲೈವ್ ಕಾಮೆಂಟ್ರಿ ಅಗತ್ಯವಿಲ್ಲ. ನಿಮ್ಮ ಪ್ರಚಾರದ ಗಿಲು... ಮಂಜೇಶ್ವರದಲ್ಲಿ ಜನತೆ ಪರದಾಡುವಂತಾಗಿದೆ.
ನಿಮ್ಮ ಮಂಡಲದ ತಲಪಾಡಿ, ಕಣ್ವತೀರ್ಥ, ಮನಿಮುಂಡ, ಶಾರದಾ ನಗರ, ಶಿವಾಜಿ ನಗರ, ಕುಂಬಳೆ ಕಡಪುರ ಸಮುದ್ರ ಕೊರೆದ ಅಬ್ಬರದಿಂದ ರಸ್ತೆಗಳೇ ಕೊಚ್ಚಿ ಹೋಗಿವೆ, ಕುಂಜತ್ತೂರು, ಕುಂಡುಕೊಳಕೆ ಪ್ರದೇಶಗಳಲ್ಲಿ 25 ಕ್ಕೂ ಅಧಿಕ ಮನೆಗಳು ನೀರಿನಿಂದ ಆವೃತವಾಗಿದೆ, ಮಂಜೇಶ್ವರ ಹೆದ್ದಾರಿ ಹೋರಾಟ ಸಮಿತಿ 150 ದಿನಗಳಿಂದ ಹೋರಾಟ ಮಾಡುತ್ತಿದೆ, ತ್ಯಾಜ್ಯದಿಂದ ಗಬ್ಬೆದು ನಾರುತ್ತಿದೆ, ಉಪ್ಪಳ ಟ್ರಾಫಿಕ್ ಸಮಸ್ಯೆ, ಕುಂಬಳೆ ಪಂಚಾಯತ್ ಹಗರಣ, ಏನ್ಮಾಕಜೆ ಎoಡೋಸಲ್ಪಾನ್ ಸಮಸ್ಯೆ, ಪೈವಳಿಕೆ ಪಂಚಾಯತ್ ಅಧಿಕಾರಿಗಳಿಲ್ಲದೆ ಸ್ತಬ್ದವಾಗಿದೆ, ಗಡಿ ಭಾಗದಲ್ಲಿ ಮಾಫಿಯ ತಾಂಡವ, ಕಳ್ಳತನ ಪ್ರಕರಣ, ಟೋಲ್ ಸಮಸ್ಯೆ ಪೊಲೀಸ್ ಠಾಣೆಯಲ್ಲಿ ಪೋಲೀಸರ ಕೊರತೆ, ಮಳೆ ಗಾಳಿಯಿಂದ ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಮನೆಯ ಮುಂದೆಯೇ ವಿದ್ಯುತ್ ಕಂಬ ನೆಲದಲ್ಲಿದೆ. ಸರಕಾರದ ಪೆನ್ಸನ್ ಇಲ್ಲ, ಲೈಫ್ ಯೋಜನೆ ಜಾರಿ ಆಗುತ್ತಿಲ್ಲ, ನಿಮ್ಮ ಕ್ಷೇತ್ರದಲ್ಲಿ ಆತ್ಮಹತ್ಯೆ ಪ್ರಕರಣಗಳು ಜಾಸ್ತಿ ಆಗುತ್ತಿದೆ, ಪೋಸ್ಟ್ ಮಟo ಮಾಡಲು ಮಂಗಲ್ಪಾಡಿಯಲ್ಲಿ ಸೌಕರ್ಯ ಇಲ್ಲ, ಆಸ್ಪತ್ರೆ ಗಳಲ್ಲಿ ಸಿಬಂದಿಗಳಿಲ್ಲ, ಕ್ಯಾನ್ಸರ್ ತಾಂಡವ ವಾಡುತ್ತಿದೆ, ಯಾವುದೇ ಹೊಸ ಯೋಜನೆಗಳಿಲ್ಲ, ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಮಂಜೇಶ್ವರ ಶಾಸಕ AKM ಅಶ್ರಫ್ ರವರ ಕಾರ್ಯವೈಖರಿ ಯನ್ನು ಕಟು ಶಬ್ದ ಗಳಿಂದ ಟೀಕಿಸಿದ್ದಾರೆ. ಜನರ ಸಮಸ್ಯೆಗೆ ಸ್ಪಂದನೆ ನೀಡದ ಶಾಸಕರೆ.. ಅಧಿವೇಶನದಲ್ಲೂ ಗೈರು ಹಾಜರಾಗಿ ತಾವು ಶಿರೂರಲ್ಲಿ ನಿಂತು ಮಾಡುತ್ತಿರುವ ನಾಟಕ ಯಾವ ಪ್ರಚಾರಕಾಗಿ..? Tv ಮಾಧ್ಯಮ ಗಳಿಗೆ live ಕಾಮೆಂಟ್ರಿ ನೀಡುವ ಅಗತ್ಯ ವಿಲ್ಲ. ಜೋಕರ್ ಆಗುವ ಬದಲು ಮೇಕರ್ ಆಗಿ.. ಎಂದು ಆದರ್ಶ್ ಹೇಳಿದರು. ಸ್ವಂತ ಕ್ಷೇತ್ರದ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕೆಂದು ನಿಮ್ಮ ಜೊತೆ ಅಲ್ಲಿರುವ ಶಾಸಕ ಸತೀಶ್ ಕೃಷ್ಣರನ್ನು ನೋಡಿ ಕಲಿಯಿರಿ. ನೀವು ಊರಲ್ಲಿ ಇರುವುದೇ ಅಪರೂಪ ತಿಂಗಳಲ್ಲಿ 15 ದಿನ ವಿದೇಶ ಪ್ರವಾಸ, ಉಳಿದ ದಿನ ಇತರ ರಾಜ್ಯದಲ್ಲಿ ವಾಸ್ತವ್ಯ,. ನಿಮ್ಮನು ಗೆಲ್ಲಿಸಿದ ಜನತೆ ಮಾತ್ರ ಅತಂತ್ರ ಸ್ಥಿತಿಯಲ್ಲಿದ್ದಾರೆ. ನೈನ್ಯ ಹುಡುಕುತಿರುವಾಗ ನಿಮ್ಮ ಸಹಕಾರ ಅವರಿಗೆ ಅಗತ್ಯವಿಲ್ಲ. ಶಿರೂರಲ್ಲಿ ನಿಮ್ಮ ಹುಡುಕಾಟದ ನಾಟಕ ನಿಲ್ಲಿಸಿ.. ಯಾಕೆಂದರೆ ಮಂಜೇಶ್ವರದ ಜನತೆ ನಿಮ್ಮನ ಹುಡುಕುತಿದ್ದಾರೆ. ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಲೇವಡಿ ಮಾತುಗಳನ್ನು ಮಾಧ್ಯಮಗಳ ಮುಂದೆ ಆಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.