ಕಡಂಬಾರು ಚೆಂಬಪದವು ನಿವಾಸಿ ಶ್ರೀಮತಿ ಪಾರ್ವತಿ ಆಚಾರ್ಯ (89) ನಿಧನ.
ಜುಲೈ 26, 2024
0
ಕಡಂಬಾರು ಚೆಂಬಪದವು ನಿವಾಸಿ ಶ್ರೀಮತಿ ಪಾರ್ವತಿ ಆಚಾರ್ಯ (89) ನಿಧನ.
ಮಂಜೇಶ್ವರ: ಕಡಂಬಾರು ಚೆಂಬಪದವು ನಿವಾಸಿ ದಿ. ಬಿ. ಎಂ ಸುಬ್ರಾಯ ಆಚಾರ್ಯರ ಧರ್ಮಪತ್ನಿ ಶ್ರೀಮತಿ ಪಾರ್ವತಿ (89) ಪ್ರಾಯಪ್ರಬುದ್ಧರಾಗಿ ಇಂದು ಅಪರಾಹ್ನ ಸ್ವ - ಗೃಹದಲ್ಲಿ ನಿಧನಾದರು. ಮೃತರು ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘದ ಮಾಜಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಮಕ್ಕಳಾದ ಬಿ.ಎಂ ಶ್ರೀನಿವಾಸ್ ಆಚಾರ್ಯ, ಬಿ.ಎಂ ಅನಂತ ಆಚಾರ್ಯ, ಬಿ.ಎಂ ಯದುನಂದನ ಆಚಾರ್ಯ "ಎಸ್.ಕೆ ಸೌಂಡ್ಸ್" (ಅಧ್ಯಕ್ಷರು: ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನ ಮಂಜೇಶ್ವರ.) ಬಿ
ಎಂ ಸತೀಶ್ ಆಚಾರ್ಯ ಮುಂಬೈ, ಬಿ.ಎಂ ಪ್ರವೀಣ ಆಚಾರ್ಯ ಕುಂಬಳೆ, ನಾಗವೇಣಿ ಕಾಸರಗೋಡು, ನಳಿನಾಕ್ಷಿ ಮಲಾಡ್ ಮುಂಬೈ, ಹೇಮಲತಾ ಅರ್ಲಪದವು, ಅಳಿಯಂದಿರಾದ ಭಾಸ್ಕರ ಆಚಾರ್ಯ ಕಾಸರಗೋಡು, ಪಾಂಡುರಂಗ ಆಚಾರ್ಯ ಮಾಲಾಡ್ ಮುಂಬೈ, ಯಶವಂತ ಆಚಾರ್ಯ ಅರ್ಲಪದವು, ಸೊಸೆಯಂದಿರು ಮೊಮ್ಮಕ್ಕಳು, ಮರಿ ಮಕ್ಕಳು, ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ (27 - 07 - 2024 ಶನಿವಾರ) ಅಪಾರಾಹ್ನ 12 ಗಂಟೆಗೆ ಹೊಸಂಗಡಿ ರಾಮತ್ತಮಜಲ್ ನಲ್ಲಿರುವ ಸಾರ್ವಜನಿಕ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರ ನಿಧನಕ್ಕೆ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ಕ್ಷೇತ್ರದ ಆಡಳಿತ ಸಮಿತಿ, ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘ, ಓಜ ಸಾಹಿತ್ಯ ಕೂಟ, ಶ್ರೀ ಗುರುಸೇವಾ ಪರಿಷತ್ ಗಾಢವಾದ ಸಂತಾಪ ಸೂಚಿಸಿದ್ದಾರೆ.

