ಮಳೆ ಹಿನ್ನಲೆ ಕಾಸರಗೋಡು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ನಾಳೆ ರಜೆ. ಕಾಲೇಜುಗಳಿಗೆ ಹಾಗೂ ಪೂರ್ವ ಘೋಷಿತ ಪರೀಕ್ಷೆಗೆ ಅನ್ವಯವಿಲ್ಲ. - ಜಿಲ್ಲಾಧಿಕಾರಿ.
ಜುಲೈ 14, 2024
0
ಮಳೆ ಹಿನ್ನಲೆ ಕಾಸರಗೋಡು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ನಾಳೆ ರಜೆ. ಕಾಲೇಜುಗಳಿಗೆ ಹಾಗೂ ಪೂರ್ವ ಘೋಷಿತ ಪರೀಕ್ಷೆಗೆ ಅನ್ವಯವಿಲ್ಲ. - ಜಿಲ್ಲಾಧಿಕಾರಿ.
ಕಾಸರಗೋಡು: ಕಳೆದ 24 ಗಂಟೆಗಳಲ್ಲಿ ಕಾಸರಗೋಡು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಭಾರಿ ಮಳೆ ದಾಖಲಾಗಿದೆ. ಮುಂಗಾರು ತೀವ್ರಗೊಳ್ಳುತ್ತಿರುವುದರಿಂದ ನಾಳೆ ಭಾರಿ ಮಳೆ ಇದೆಯೆಂಬ ಮಾಹಿತಿಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದ್ದು, "ರೆಡ್ ಅಲರ್ಟ್" ನ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ಮುಂಜಾಗೃತೆ ಕ್ರಮವಾಗಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳು, ರಾಜ್ಯ, ಸಿಬಿಎಸ್‌ಇ, ಐಸಿಎಸ್ಸಿ ಶಾಲೆಗಳು, ಕೇಂದ್ರೀಯ ಶಾಲೆಗಳು, ಅಂಗನವಾಡಿಗಳು, ಮದ್ರಸಾಗಳಿಗೆ ನಾಳೆ (ಜುಲೈ 15, 2024 ಸೋಮವಾರ) ಜಿಲ್ಲಾಧಿಕಾರಿ ಕೆ. ಇಂಪಶೇಖರನ್ ರಜೆ ಘೋಷಣೆ ಮಾಡಿದ್ದಾರೆ. ರಜಾ ದಿನದಿಂದ ಕಳೆದುಹೋದ ಕಲಿಕಾ ಸಮಯವನ್ನು ನಿಯಂತ್ರಿಸಲು ಶಿಕ್ಷಣ ಸಂಸ್ಥೆಗಳಿಗೆ ಆಯಾಯ ಶಾಲೆಯ ಮುಖ್ಯಸ್ಥರು ಕ್ರಮ ಕೈಗೊಳ್ಳಬೇಕು. ನಾಳೆಯ ರಜೆ ಕಾಲೇಜುಗಳಿಗೆ ಅನ್ವಯಿಸುವುದಿಲ್ಲ. ಪೂರ್ವ ಘೋಷಿತ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


