Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕಿಡ್ನಿಗಳೆರಡು ವೈಫಲ್ಯಗೊಂಡ ಕೂಲಿ ಕಾರ್ಮಿಕರೋರ್ವರು ಚಿಕಿತ್ಸೆಗಾಗಿ ದಾನಿಗಳ ನೆರವು ಯಾಚನೆ.

ಕಿಡ್ನಿಗಳೆರಡು ವೈಫಲ್ಯಗೊಂಡ ಕೂಲಿ ಕಾರ್ಮಿಕರೋರ್ವರು ಚಿಕಿತ್ಸೆಗಾಗಿ ದಾನಿಗಳ ನೆರವು ಯಾಚನೆ. 

ಮಂಜೇಶ್ವರ: ಎರಡು ಕಿಡ್ನಿ ವೈಫಲ್ಯಗೊಂಡ ವ್ಯಕ್ತಿಯೋರ್ವರು ಚಿಕಿತ್ಸೆಗಾಗಿ ದಾನಿಗಳ ನೆರವನ್ನು ಯಾಚಿಸುತ್ತಿದ್ದಾರೆ. ಮೀಂಜ ಗ್ರಾಮ ಪಂಚಾಯತ್ ಗೊಳಪಟ್ಟ ಮಜಿಬೈಲು ಜಿ.ಎಲ್. ಪಿ ಶಾಲಾ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಮೂಲತಃ ಕುಂಬಳೆ ಶಾಂತಿಪಳ್ಳ ನಿವಾಸಿಯಾಗಿರುವ, ಕೂಲಿ ಕಾರ್ಮಿಕ ಅನಿಲ್ ಕುಮಾರ್ (42) ಎಂಬವರು ತನ್ನೆರಡು ಕಿಡ್ನಿ ವೈಫಲ್ಯಗೊಂಡು, ಪತ್ನಿ ಹಾಗೂ ಎರಡು ಮಕ್ಕಳೊಂದಿಗೆ ಸಂಕಷ್ಟಮಯ ಜೀವನ ನಡೆಸುವ ವ್ಯಕ್ತಿಯಾಗಿದ್ದಾರೆ. ದಿವಂಗತರಾದ ಗೋಪಾಲ್ - ಶಾಂತ ದಂಪತಿಗಳ ಪುತ್ರನಾದ ಅನಿಲ್ ರವರು ಪತ್ನಿ ಶ್ರಾವಣಿ ಹಾಗೂ ಮಕ್ಕಳಾದ ಶಾನಿಕ (5 ನೇ ತರಗತಿ ಮೀಯಾಪದವು ಶ್ರೀ ವಿದ್ಯಾವರ್ಧಕ ಶಾಲೆ), ಅನೀಶ್ (1 ನೇ ತರಗತಿ ಮಜಿಬೈಲ್ ಜಿ.ಎಲ್ ಪಿ ಶಾಲೆ) ಜೊತೆ ಕೂಲಿ ಕಾರ್ಮಿಕನಾಗಿ, ಕಡು ಬಡತನದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯಾಗಿದ್ದಾರೆ. ಕುಂಬಳೆ ಶಾಂತಿಪಳ್ಳದಲ್ಲಿರುವ ವೇಳೆ ತಂದೆ - ತಾಯಿ, ಸಹೋದರರ ಜೊತೆ ವಾಸಿಸುತ್ತಿದ್ದು, ಅವರನ್ನು ಅಗಲಿದ ಬಳಿಕ ಪತ್ನಿ ಹಾಗೂ ಪುಟ್ಟ ಮಕ್ಕಳ ಜೊತೆ ಮಜಿಬೈಲ್ ಗೆ ಬಂದು ನೆಲೆಸಿದ ಅನಿಲ್ ರವರು ಊರಿನಲ್ಲಿ ಕೂಲಿ ಕೆಲಸ ನಿರ್ವಹಿಸಿ, ಪುಟ್ಟ ಮಕ್ಕಳ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ದಿನಗೂಲಿ ವೇತನದಲ್ಲಿ ಸಿಗುವ ಅಲ್ಪ ಮೊತ್ತದಲ್ಲಿ ಸಂತೃಪ್ತ ಜೀವನ ನಡೆಸುತ್ತಿರುವ ವೇಳೆ ಅನಿಲ್ ರ ಜೀವನದಲ್ಲಿ ಸಿಡಿಲೆರಗಿದಹಂತಹ ಆಘಾತವೊಂದು ಎದುರಾಯಿತು. ಕಳೆದ 15 ದಿನದ ಹಿಂದೆ ಅನಿಲ್ ರಿಗೆ ತಲೆ ಸುತ್ತು ಬಂದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳಿದರು. ಈ ವೇಳೆ ಸ್ಕ್ಯಾನಿಂಗ್ ನಡೆಸಿದಾಗ ಕಿಡ್ನಿಗಳೆರಡು ವೈಫಲ್ಯಗೊಂಡ ಬಗ್ಗೆ ತಿಳಿಯಿತು. ಕೂಡಲೇ ವೈದ್ಯರು ಎರಡು ಕಿಡ್ನಿ ಬದಲಿಸಲು ತಿಳಿಸಿದ್ದು, ಇದಕ್ಕಾಗಿ 40 ಲಕ್ಷದಷ್ಟು ಹಣ ಬೇಕಾಗಿ ಬರಬಹುದೆಂದು ತಿಳಿಸಿದರು. ದಿಕ್ಕೇ ತೋಚದ ಅನಿಲ್ ರಿಗೆ ಇಬ್ಬರು ಮಕ್ಕಳು ಹಾಗೂ ಪತ್ನಿಯ ಬಗ್ಗೆ ಯೋಚಿಸಿ, ಇದೀಗ ಕಣ್ಣೀರು ಹಾಕುತ್ತಿದ್ದಾರೆ. ಸಿಗುವ ದಿನದ ಮೊತ್ತದಲ್ಲಿ ಮನೆಯ ಖರ್ಚು, ಇಬ್ಬರು ಮಕ್ಕಳ ಶಾಲಾ ಕರ್ಚು ವೆಚ್ಚಗಳು ಭರಿಸಲು ಅಸಾಧ್ಯವಾಗಿದೆ. ಈ ನಡುವೆ ಮುಂದೆ ನಡೆಯುವ ಡಯಾಲಿಸಿಸ್ ಚಿಕಿತ್ಸೆಗೆ ಪ್ರಾರಂಭಕ್ಕೆ 1 ಲಕ್ಷದಷ್ಟು ಮೊತ್ತ ಬೇಕಾಗಿ ಬರಲಿದೆ. ಅಲ್ಲದೆ ಮುಂದೆ ಪ್ರತೀ ವಾರ ನಡೆಯುವ ಡಯಾಲಿಸಿಸ್ ಚಿಕಿತ್ಸೆಗೆ ಸಾವಿರಾರು ರೂಪಾಯಿ ಮೊತ್ತ ಬೇಕಾಗಲಿದೆ. ಈ ಚಿಕಿತ್ಸೆಗೆ ಮೊತ್ತ ಭರಿಸಲು ಕೂಡಾ ನಿಶ್ಯಕ್ತರಾಗಿದ್ದಾರೆ. ಆದುದರಿಂದ ಇದೀಗ ಕೊನೆಗೆ ಅನಿಲ್ ರವರು "ನಮ್ಮ ಮಂಜೇಶ್ವರ ನ್ಯೂಸ್" ನ ಮೂಲಕ ಹೃದಯವಂತರ ನೆರವನ್ನು ಯಾಚಿಸುತ್ತಿದ್ದಾರೆ. ಇವರ ಮುಂದಿನ ಚಿಕಿತ್ಸೆಗೆ ಹೃದಯವಂತರು, ವಿವಿಧ ಸಮಾಜ ಸೇವಾ ಸಂಸ್ಥೆಗಳು ನೆರವನ್ನು ನೀಡಬೇಕಾಗಿದೆ.
ಸಹಾಯ ಹಸ್ತ ನೀಡುವವರು ಅನಿಲ್ ರವರ ಹೆಸರಿನಲ್ಲಿರುವ ಕೆನರಾ ಬ್ಯಾಂಕ್ ಮಂಜೇಶ್ವರ ಶಾಖೆಯ ಖಾತೆ ಸಂಖ್ಯೆ 
110059960594 (I.F.S.C Code: CNRB 0014212) ಸಲ್ಲಿಸಲು ಕೋರಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅನಿಲ್ ರವರ ಮೊಬೈಲ್ ಸಂಖ್ಯೆ 8129124042 ಗೆ ಸಂಪರ್ಕಿಸಲು ಕೋರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.