ಎರ್ನಾಕುಲಂ: ಗಂಭೀರ ಹಾಸ್ಯ ಕಥಾಪತ್ರಗಳ ಮೂಲಕ ಜನಮನಗೆದ್ದ ಮಲಯಾಳಂ ಸಿನಿಮಾ ರಂಗದ ಜನಪ್ರಿಯ ನಟ ಸಲೀಂ ಕುಮಾರ್ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಡಿದ್ದಾರೆ. ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಮೂರು ದಶಕಗಳಿಗೂ ಹೆಚ್ಚು ಕಾಲ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಲೀಂರವರು, 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆರಂಭದಲ್ಲಿ ಮಿಮಿಕ್ರಿ ಕಲಾವಿದರಾಗಿ ಗುರುತಿಸಿಕೊಂಡು, ನಂತರ ಅತ್ಯುತ್ತಮ ನಟ ಹಾಗೂ ಹಾಸ್ಯನಟನಾಗಿ ಜನಪ್ರಿಯರಾದರು. 2010 ರಲ್ಲಿ ತೆರೆಕಂಡ 'ಅದಾಮಿಂಡೆ ಮಗನ್ ಅಬು' ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಅಲ್ಲದೆ, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ ಚಿತ್ರರಂಗದಲ್ಲಿ ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ದೇಶಕರಾಗಿಯೂ ಯಶಸ್ಸುಗಳಿಸಿದ್ದರು. ಅವರ ನಿರ್ದೇಶನದ 'ಕರುತ ಜೂತನ್' ಚಿತ್ರಕ್ಕೆ ಅತ್ಯುತ್ತಮ ಕಥೆಗಾಗಿ ರಾಜ್ಯ ಪ್ರಶಸ್ತಿ ಲಭಿಸಿದೆ.
8:10:45
