Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಹೊಸಂಗಡಿ ಇನ್ಫೆಂಟ್ ಜೀಸಸ್ ಸೈರೊ ಮಲಬಾ‌ರ್ ಚರ್ಚ್ ನಲ್ಲಿ ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜೂನ್ 28 ರಂದು.

ಹೊಸಂಗಡಿ ಇನ್ಫೆಂಟ್ ಜೀಸಸ್ ಸೈರೊ ಮಲಬಾ‌ರ್ ಚರ್ಚ್ ನಲ್ಲಿ ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜೂನ್ 28 ರಂದು.
ಮಂಜೇಶ್ವರ: ಇನ್ಫೆಂಟ್ ಜೀಸಸ್ ಸೈರೊ ಮಲಬಾ‌ರ್ ಚರ್ಚ್‌ ಹೊಸಂಗಡಿ ಇದರ ವತಿಯಿಂದ ಈ ತಿಂಗಳ 28 ರಂದು ಆದಿತ್ಯವಾರ ಬೆಳಗ್ಗೆ 10.30 ಕ್ಕೆ ಚರ್ಚ್ ಗೆ ಒಳಪಟ್ಟ ವಿವಿಧ ವಲಯಗಳಲ್ಲಿರುವ ಎಸ್.ಎಸ್.ಎಲ್.ಸಿ, ಪ್ಲಸ್ ಟು, ಪ್ರೊಫೆಷನಲ್ ಕೋರ್ಸ್ ಗಳಲ್ಲಿ ಅತ್ಯಧಿಕ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಣ್ಣೂರು ಯೂನಿವರ್ಸಿಟಿ ಮಂಜೇಶ್ವರ ಕ್ಯಾಂಪಸ್ ನಲ್ಲಿ (ಸ್ಕೂಲ್ ಆಫ್ ಲೀಗಲ್ ಸ್ಟಡೀಸ್) ಎಲ್.ಎಲ್. ಬಿಯಲ್ಲಿ ಉನ್ನತ ಪದವಿ (ಫಸ್ಟ್ ಕ್ಲಾಸ್) ಯನ್ನು ಪಡೆದ ಚರ್ಚ್ ನ ಧರ್ಮಗುರು ಫಾದರ್ ಲೂಯಿ ಮರಿಯಾ ದಾಸ್ ಇವರನ್ನ ಗೌರವಿಸಲಾಗುವುದು. ಅದೇ ರೀತಿ ಮಂಜೇಶ್ವರ ಶಾಸಕರಾಗಿ ಮೂರು ಬಾರಿ ಆಯ್ಕೆಯಾದ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ರವನ್ನು ಸನ್ಮಾನಿಸಲಾಗುವುದು ಎಂದು ಚರ್ಚ್ ನ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.