Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ರೈಲು ಅಪಘಾತದಲ್ಲಿ ಮೃತಪಟ್ಟ ಮನೀಶ್ ಕೀರ್ತೆಶ್ವರರವರ ಕುಟುಂಬಕ್ಕೆ ತಲಪಾಡಿಯ ಕೇರಳ ಲಾಟರಿ ಮಜ್ದೂರು ಸಂಘದ ಕಾರ್ಮಿಕರಿಂದ ನೆರವು ಹಸ್ತಾಂತರ.

ಮಂಜೇಶ್ವರ: ಇತ್ತೀಚೆಗೆ ರೈಲು ಅಪಘಾತದಲ್ಲಿ ಅಕಾಲವಾಗಿ ಮೃತಪಟ್ಟ ಮಂಜೇಶ್ವರ ಕೀರ್ತೇಶ್ವರ ನಿವಾಸಿ ಮನೀಶ್ ಕೀರ್ತೆಶ್ವರರವರ ಸ್ಮರಣಾರ್ಥ ಕೇರಳ ಲಾಟರಿ ಮಜ್ಡೂರ್ ಸಂಘ ತಲಪಾಡಿ ಘಟಕದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ತಲಪಾಡಿಯಲ್ಲಿ ನಡೆಯಿತು. ಬಿ.ಎಂ.ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಯಶವಂತಿ ಬೆಜ್ಜ, ಕೇರಳ ಲಾಟರಿ ಮಜ್ದೂರು ಸಂಘ ಜಿಲ್ಲಾ ಕಾರ್ಯದರ್ಶಿ ಬಾಬುಮೋನ್ ಚೆರ್ಕಳರವರು ಭಾಗವಹಿಸಿ ನುಡಿನಮನ ಸಲ್ಲಿಸಿದರು. ಈ ವೇಳೆಯಲ್ಲಿ ಅಗಲಿದ ಮನೀಶ್ ರವರ ಕುಟುಂಬಕ್ಕೆ ಕಾರ್ಮಿಕರು ಸ್ವಯಂಪ್ರೇರಿತರಾಗಿ ಸಂಗ್ರಹಿಸಿದ ಒಟ್ಟು ಮೊತ್ತವನ್ನು ಹಸ್ತಾಂತರಿಸಲಾಯಿತು. ಬಿ.ಎಂ.ಎಸ್ ಕೇರಳ ಲಾಟರಿ ತಲಪಾಡಿ ಎರಡನೇ ಯೋಜನೆಯಡಿ ಈ ಸೇವಾ ಕಾರ್ಯ ನೆರವೇರಿಸಲಾಯಿತು. ಒಟ್ಟು 45 ಕಾರ್ಮಿಕರು ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಿದ್ದರು. ಕಾರ್ಯಕ್ರಮದಲ್ಲಿ ಭಾಸ್ಕರ ಮಂಜೇಶ್ವರ ಸ್ವಾಗತಿಸಿ, ಸುಕೇಶ್ ಬೆಜ್ಜ ಧನ್ಯವಾದವಿತ್ತರು. ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ಪ್ರದೀಷ್ ತಲಪಾಡಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘಟನೆಯ ಸದಸ್ಯರಾದ ನಾರಾಯಣ, ಭಾಸ್ಕರ ಶೆಟ್ಟಿಗಾರ್, ಭಾಸ್ಕರ ಶೆಟ್ಟಿ, ಶ್ರೀಧರ ಶೆಟ್ಟಿ, ವನಿತಾ, ಶಮಿತ, ಪ್ರಭಾಕರ ಶೆಟ್ಟಿ, ಸುಜಿತ್, ಸಂದೇಶ, ಅನಿಲ್, ಶೈಲೇಶ್, ರವೀಂದ್ರ ಶೈಲೇಶ್ ತಲಪಾಡಿ , ಆನಂದ, ಪ್ರಕಾಶ್ ಶೆಟ್ಟಿ, ಹರೀಶ್, ಜಯರಾಮ್ ಎಂಬವರು ಪುಷ್ಪಾರ್ಚನೆ ಮಾಡಿ ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು. ರೈಲು ಅಪಘಾತದಲ್ಲಿ ದೇವರ ಪಾದ ಸೇರಿದ ಸಹೋದರ ಮನೀಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ದುಃಖದಲ್ಲಿರುವ ಕುಟುಂಬಕ್ಕೆ ಭಗವಂತ ಧೈರ್ಯ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.