ಭಾರೀಗಾಳಿ ಮಳೆ: ಹೆಂಚು ಹಾಸಿದ ಮನೆಗೆ ಮರ ಬಿದ್ದು ಸಂಪೂರ್ಣ ಹಾನಿ: ಟೀಮ್ ಕಲ್ಕಿ ಮಂಜೇಶ್ವರದಿಂದ ಸಂಪೂರ್ಣ ದುರಸ್ತಿ.
ಮಂಜೇಶ್ವರ: ಹೊಸಂಗಡಿ ಬಳಿಯ ಮಜಿಬೈಲು ನಿವಾಸಿ ಶ್ರೀ ಕೇಶವ ಹಾಗೂ ಶ್ರೀಮತಿ ಲಲಿತಾ ದಂಪತಿಗಳ ಹೆಂಚು ಹಾಸಿದ ಮನೆಗೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮನೆಯ ಮೇಲ್ಛಾವಣಿಗೆ ಮರ ಬಿದ್ದು, ಮನೆಗೆ ಹಾನಿಯುಂಟಾಗಿದ್ದು,
ಈ ಸಂಕಷ್ಟದ ಸಂದರ್ಭದಲ್ಲಿ ವಿಷಯವನ್ನರಿತ ಕಲ್ಕಿ ಮಂಜೇಶ್ವರ ತಂಡವು ತಕ್ಷಣ ಸ್ಪಂದಿಸಿ ಮನೆ ದುರಸ್ತಿ ಕಾರ್ಯಕ್ಕೆ ನೆರವಾಗಿ ಮಾನವೀಯತೆ ಮೆರೆದಿದೆ. ಸುಮಾರು 70,000 ವೆಚ್ಚದಲ್ಲಿ ದುರಸ್ತಿ ಕಾರ್ಯ ನೆರವೇರಿದ್ದು, ಈ ಮಹತ್ಕಾರ್ಯಕ್ಕೆ ಟೀಮ್ ನ ಸಹೃದಯಿ ದಾನಿಗಳು ಹಾಗೂ ಚಕ್ರವರ್ತಿ ಹೊಸಂಗಡಿ ಸಂಸ್ಥೆ ಸಹಕರಿಸಿದ್ದು, ಇವರೆಲ್ಲರಿಗೂ ಟೀಮ್ ಕಲ್ಕಿ ಹೃತ್ಪೂರ್ವಕ ಕೃತಜ್ಞತೆಗಳನ್ನ ಸಲ್ಲಿಸಿದ್ದಾರೆ. ಅದೇ ರೀತಿ ಈ ಸಹಾಯ ಕಾರ್ಯದಲ್ಲಿ ಉಪಸ್ಥಿತರಿದ್ದು ಪ್ರೋತ್ಸಾಹ ನೀಡಿದ ಯುವ ನಾಯಕ ಹಾಗೂ ಚಲನಚಿತ್ರ ನಟ ಭವೀಶ್ ಶೆಟ್ಟಿ ಎಕ್ಕೂರು, ಮಂಜೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹರೀಶ್ಚಂದ್ರ ಮಂಜೇಶ್ವರ, ಟೀಮ್ ಕಲ್ಕಿ ಮುಖ್ಯಸ್ಥರಾದ ಅಖಿಲ್ ಶೆಟ್ಟಿ, ಟೀಮ್ ಕಲ್ಕಿ ಮಂಜೇಶ್ವರ ಸಂಸ್ಥಾಪಕರಾದ
