Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಣಿಪಾಲದ MIT ಯಲ್ಲಿ ಸಂಶೋಧನೆ: ಮಂಗಲ್ಪಾಡಿ ಪ್ರತಾಪನಗರದ ನಿತೀಶ್ ಕುಮಾರ್ ಅವರಿಗೆ ಪಿಎಚ್.ಡಿ (Ph.D.) ಪದವಿ.

ಮಣಿಪಾಲದ MIT ಯಲ್ಲಿ ಸಂಶೋಧನೆ: ಮಂಗಲ್ಪಾಡಿ ಪ್ರತಾಪನಗರದ ನಿತೀಶ್ ಕುಮಾರ್ ಅವರಿಗೆ ಪಿಎಚ್.ಡಿ (Ph.D.) ಪದವಿ.
 
ಮಂಜೇಶ್ವರ: ಪ್ರಸಿದ್ಧ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (MIT) ಗಣಿತ ವಿಭಾಗದಲ್ಲಿ (School of Basic Sciences) ಸಂಶೋಧನೆ ನಡೆಸುತ್ತಿದ್ದ ಉಪ್ಪಳ ಬಳಿಯ ಮಂಗಲ್ಪಾಡಿ ಗ್ರಾಮ ಪಂಚಾಯತ್ ಗೊಳಪಟ್ಟ ಮಂಗಲ್ಪಾಡಿ ಪ್ರತಾಪನಗರ ನಿವಾಸಿ ನಿತೀಶ್ ಕುಮಾರ್ ಅವರು ತಮ್ಮ ಪಿಎಚ್.ಡಿ (Ph.D.) ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿ, ಅಧಿಕೃತವಾಗಿ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಇವರು ತಮ್ಮ ಈ ಮಹತ್ವದ ಸಂಶೋಧನಾ ಪ್ರಬಂಧವನ್ನು ಮಣಿಪಾಲ MIT ಯ ಗಣಿತ ವಿಭಾಗದ ಪ್ರಾಧ್ಯಾಪಕರಾದ ಡಾ. ವಾದಿರಾಜ ಭಟ್ಟ ಜಿ. ಆರ್. ಅವರ ಮುಖ್ಯ ಮಾರ್ಗದರ್ಶನದಲ್ಲಿ ಹಾಗೂ ಸಹ - ಪ್ರಾಧ್ಯಾಪಕರಾದ ಡಾ. ಪ್ರಸನ್ನ ಪೂಜಾರಿ ಅವರ ಸಹ - ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮಂಗಲ್ಪಾಡಿ ಪ್ರತಾಪನಗರ ನಿವಾಸಿಯಾದ ಶ್ರೀ ರಾಧಾಕೃಷ್ಣ ಆಚಾರ್ಯ,  ದಿವಂಗತ ಉಮಾವತಿ ಆಚಾರ್ಯ ಅವರ ಪುತ್ರರಾದ ನಿತೀಶ್ ಕುಮಾರ್ ಅವರು, ಗಣಿತ ವಿಭಾಗದಲ್ಲಿ "R - CLOSED SETS AND VALUE SETS OVER FINITE FIELDS WITH APPLICATIONS" ಎಂಬ ಅತ್ಯಂತ ಸಂಕೀರ್ಣ ಹಾಗೂ ಮಹತ್ವದ ವಿಷಯದ ಮೇಲೆ ಸುದೀರ್ಘ ಸಂಶೋಧನೆ ನಡೆಸಿ ಈ ಸಾಧನೆಗೈದಿದ್ದಾರೆ. ವರ್ಷಗಳ ನಿರಂತರ ಕಠಿಣ ಪರಿಶ್ರಮ ಹಾಗೂ ಗಣಿತ ಕ್ಷೇತ್ರದ ಮೇಲಿನ ಅಪಾರ ಆಸಕ್ತಿಯ ಪ್ರತಿಫಲವಾಗಿ ಇಂದು ಅವರಿಗೆ ಈ ಉನ್ನತ ಗೌರವ ಲಭಿಸಿದೆ. ಇವರ ಈ ಶೈಕ್ಷಣಿಕ ಸಾಧನೆಯು ಯುವ ಪೀಳಿಗೆಗೆ ಪ್ರೇರಣೆಯಾಗಿದೆ.
ಇವರ ಸಹೋದರ ಸುಜಿತ್ ಪ್ರತಾಪ್ ಬಿಜೆಪಿ ದಕ್ಷಣ ಕನ್ನಡ ಜಿಲ್ಲಾ ಕಾರ್ಯದರ್ಶಿಯಾಗಿಯೂ, ಮಂಗಳೂರು ಕಂಬಳದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ನಿತೀಶ್ ಕುಮಾರ್ ಅವರ ನಿರಂತರ ಶ್ರಮ ಮತ್ತು ಛಲವನ್ನು ಶ್ಲಾಘಿಸುತ್ತಾ, ಅವರ ಮುಂದಿನ ಉಜ್ವಲ ಭವಿಷ್ಯ ಹಾಗೂ ಶೈಕ್ಷಣಿಕ ಜೀವನಕ್ಕೆ ಊರಿನ ಸಮಸ್ತ ನಾಗರಿಕರು, ಹಿತೈಷಿಗಳು ಮತ್ತು ಮಿತ್ರರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.