Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಶ್ರೀಕಾಂತ ಕಾಸರಗೋಡು ಅವರಿಗೆ ಪ್ರಶಸ್ತಿ ಪ್ರದಾನ.

ಶ್ರೀಕಾಂತ ಕಾಸರಗೋಡು ಅವರಿಗೆ ಪ್ರಶಸ್ತಿ ಪ್ರದಾನ. 

ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿಯನ್ನು ಬಹುಮುಖ ಪ್ರತಿಭಾವಂತ ಛಾಯಾಗ್ರಾಹಕ ಶ್ರೀಕಾಂತ ಕಾಸರಗೋಡು ಅವರಿಗೆ ನೀಡಲಾಯಿತು. ಕುಡಾಲುಮೇರ್ಕಳ ಸುಬ್ಬಯಕಟ್ಟೆ ಅನುದಾನಿತ ವಿದ್ಯಾಲಯದಲ್ಲಿ ನಡೆದ ದತ್ತಿನಿಧಿ ಪ್ರಶಸ್ತಿ ಪ್ರದಾನ ಮತ್ತು ಕನ್ನಡ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಹಸ್ತಾಂತರಿಸಲಾಯಿತು. ಕರ್ನಾಟಕ ಸರಕಾರದ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿಮರದ , ಕರ್ನಾಟಕ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಮ್ ಶಹೀದ್ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯನಿರತ ಕನ್ನಡ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾಧ್ಯಕ್ಷ ಎ ಆರ್ ಸುಬ್ಬಯಕಟ್ಟೆ , ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು , ಜಿಲ್ಲಾ ಪಂಚಾಯತು ಸದಸ್ಯ ಸೋಮಶೇಖರ ,ಪ್ರದೀಪ ಕುಮಾರ್ ಕಲ್ಕೂರ , ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ. ಕೆ ಯು ಡಬ್ಲ್ಯೂ ಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಉಳಿಯತ್ತಡ್ಕ ಸಹಿತ ಗಣ್ಯರು ಉಪಸ್ಥಿತರಿದ್ದರು. ಕನ್ನಡ ಮಲೆಯಾಳ ಪ್ರಮುಖ ಪತ್ರಿಕೆಗಳಿಗೆ ಛಾಯಾಚಿತ್ರಗಳನ್ನು ಸಕಾಲಿಕವಾಗಿ ಸುದೀರ್ಘ ಕಾಲದಿಂದ ಒದಗಿಸುತ್ತಾ ಬಂದಿರುವ ಶ್ರೀಕಾಂತ ಕಾಸರಗೋಡು ಅವರು ಕೇರಳ ಸರಕಾರದ ವಾರ್ತಾ ಇಲಾಖೆಯ ಕಾಸರಗೋಡು ಜಿಲ್ಲಾ ಕೇಂದ್ರದ ಫೊಟೊಗ್ರಾಫ಼ರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಂಚಾಲಕರಾಗಿದ್ದಾರೆ. ಆಲ್ ಕೇರಳಾ ಫೊಟೊಗ್ರಾಫ಼ರ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರಾಗಿದ್ದು ಪ್ರಕೃತ ಈಸ್ಟ್ ಯುನಿಟ್ ಕೋಶಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.