Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ನಿವೃತ್ತರಾದ ಕಾಸರಗೋಡು ಜಿಲ್ಲಾ ಸಹಕಾರಿ ಸಂಘದ ಜಂಟಿ ನಿಬಂಧಕ ಶ್ರೀ ವಿ. ಚಂದ್ರನ್ ರಿಗೆ ಬೀಳ್ಕೊಡುಗೆ.

ನಿವೃತ್ತರಾದ ಕಾಸರಗೋಡು ಜಿಲ್ಲಾ ಸಹಕಾರಿ ಸಂಘದ ಜಂಟಿ ನಿಬಂಧಕ ಶ್ರೀ ವಿ. ಚಂದ್ರನ್ ರಿಗೆ ಬೀಳ್ಕೊಡುಗೆ.

ಕುಂಬಳೆ : ಸೇವೆಯಿಂದ ನಿವೃತ್ತರಾದ ಕಾಸರಗೋಡು ಜಿಲ್ಲಾ ಸಹಕಾರಿ ಸಂಘದ ಜಂಟಿ ನಿಬಂಧಕ ಶ್ರೀ ವಿ. ಚಂದ್ರನ್ ಅವರನ್ನು ಮಂಜೇಶ್ವರ ತಾಲೂಕು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವೇದಿಕೆಯ ಆಶ್ರಯದಲ್ಲಿ ಕುಂಬಳೆ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಶಾಲು ಹೊದಿಸಿ,ಫಲ ವಸ್ತು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಬೀಳ್ಕೊಡುಗೆ ಸಮಾರಂಭವನ್ನು ಸಹಕಾರಿ ಸಂಘದ ಸಹಾಯಕ ನಿಬಂಧಕ ಶ್ರೀ ರವೀಂದ್ರ ಉದ್ಘಾಟಿಸಿದರು. ಕುಂಬಳೆ ಕೃಷಿ ಸುಧಾರಣಾ ಸಹಕಾರಿ ಸಂಘದ ಕಾರ್ಯದರ್ಶಿ ಶ್ರೀ ಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ ಕಾರ್ಯದರ್ಶಿ ಶ್ರೀ ರಾಜನ್ ನಾಯರ್ ಸ್ವಾಗತಿಸಿದರು. ಮಂಗಲ್ಪಾಡಿ ಸಹಕಾರಿ ಬ್ಯಾಂಕಿನ ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಧನ್ಯವಾದ ಅರ್ಪಿಸಿದರು.
ಸಹಕಾರಿ ಸಂಘ ಜನರಲ್ ವಿಭಾಗದಿಂದ ಲೆಕ್ಕಪರಿಶೋಧನಾ ವಿಭಾಗಕ್ಕೆ ವರ್ಗಾವಣೆಯಾಗುತ್ತಿರುವ ಸಹಕಾರಿ ಸಂಘದ ವಿಶೇಷ ದರ್ಜೆಯ ನಿರೀಕ್ಷಕ ಶ್ರೀ ವಿ. ಸುನೀಲ್ ಕುಮಾರ್ ಮತ್ತು ಸಹಕಾರಿ ಸಂಘದ ಜೂನಿಯರ್ ನಿರೀಕ್ಷಕ ಶ್ರೀ ಜಯರಾಮ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸರ್ಕಲ್ ಸಹಕಾರಿ ಯೂನಿಯನ್ ಸದಸ್ಯ ಶ್ರೀ ಪ್ರದೀಪ್ ಕುಮಾರ್, ಮಂಜೇಶ್ವರ ಸಹಕಾರಿ ಸಂಘದ ಸಹಾಯಕ ನಿಬಂಧಕ ಕಛೇರಿ ಅಧೀಕ್ಷಕ ಶ್ರೀ ರಾಜೇಶ್, ಜೂನಿಯರ್ ಇನ್ಸ್ಪೆಕ್ಟರ್ ಗಳಾದ ಶ್ರೀ ಅರುಣ್, ಕುಮಾರಿ ಸುಮನ್, ಅಂಗಡಿ ಮೊಗರು ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಶ್ರೀ ವಿಠ್ಠಲ್ ರೈ, ಮಜಿಬೈಲು ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಶ್ರೀ ಉದಯ್ ಕುಮಾರ್ ಶೆಟ್ಟಿ, ಪೆರ್ಲ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಶ್ರೀ ಪ್ರಭಾಕರ್, ಶ್ರೀ ರಾಮಕೃಷ್ಣ ರೈ, ಪೈವಳಿಕೆ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಶ್ರೀ ಕೇಶವ ಬಾಯಿಕಟ್ಟೆ,ಶ್ರೀಮತಿ ಜೀಜ, ಶ್ರೀ ಜಯರಾಮ ಕೊಡ್ಲ ಮೊಗರು ಮೊದಲಾದವರು ಈ ಸಂದರ್ಭದಲ್ಲಿ ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.