ಮಂಜೇಶ್ವರದ ಉದ್ಯಮಿ, ಚಿತ್ರನಟ, ರಾಯರ ಪರಮ ಭಕ್ತ ರಘು ಭಟ್ ಮಂಜೇಶ್ವರ್ ರ ‘ರಾಯರ ದರ್ಶನ’ ಆಲ್ಬಂ ಸಾಂಗ್ ಮಂತ್ರಾಲಯದಲ್ಲಿ ಬಿಡುಗಡೆ. ಅದ್ದೂರಿ ಸಂಗೀತ ಸಂಜೆ ಕಾರ್ಯಕ್ರಮ.
ರಾಯಚೂರು: ಅಪರೋಕ್ಷ ಜ್ಞಾನಿಗಳಾದ, ಕಲಿಯುಗದ ಕಾಮಧೇನು, ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ನಿನ್ನೆ ಸಂಗೀತ ಸಂಜೆ ಕಾರ್ಯಕ್ರಮದೊಂದಿಗೆ ಮಂಜೇಶ್ವರದ ಯುವ ಉದ್ಯಮಿ, ಚಿತ್ರನಟ, ರಾಯರ ಪರಮ ಭಕ್ತ ರಘು ಭಟ್ ಮಂಜೇಶ್ವರ್ ರವರ ಚೊಚ್ಚಲ ನಿರ್ಮಾಣದ ‘ರಾಯರ ದರ್ಶನ’ ಆಲ್ಬಂ ಸಾಂಗ್ ಬಿಡುಗಡೆ ನಡೆಯಿತು. ಮಂತ್ರಾಲಯ ರಾಯರ ಮಠದ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಅದ್ಧೂರಿಯಾದ ಸಂಗೀತ ಸಂಜೆ ಕಾರ್ಯಕ್ರಮದ ವೇಳೆ ರಾಯರ ಮಠ ಹಾಗೂ ಗುರು ರಾಯರು ಮತ್ತು ಪ್ರಸ್ತುತ ಪೀಠಾಧಿಪತಿಗಳ ಕುರಿತಾದ ಸಂಪೂರ್ಣ ರಾಯರ ಮಠದಲ್ಲಿ ಚಿತ್ರೀಕರಣಗೊಂಡ ‘ರಾಯರ ದರ್ಶನ’ ಅಲ್ಬಂ ಸಾಂಗ್ ಬಿಡುಗಡೆ ಮಾಡಲಾಯಿತು. ಸಂಗೀತ ನಿರ್ದೇಶಕರಾದ ಅಜನೀಶ್ ಬಿ ಲೋಕನಾಥ್, ಸಿ.ಆರ್. ಬಾಬಿ ಹಾಗೂ ಎಬಿಬಿಎಸ್ ಸ್ಟೂಡಿಯೋ ನೇತೃತ್ವದಲ್ಲಿ ಲಕ್ಷ್ಮೀ ಗಣೇಶ ಪ್ರೊಡಕ್ಷನ್‌ನಿಂದ ತಯಾರಾದ ಅಲ್ಬಂ ಸಾಂಗ್ ಇದಾಗಿದ್ದು, ರಾಯರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಬಟನ್ ಒತ್ತುವ ಮೂಲಕ ಅಲ್ಬಂ ಸಾಂಗ್ ನ್ನ ಪ್ರಥಮ ಬಾರಿಯಾಗಿ ವೇದಿಕೆಯಲ್ಲಿರುವ ಬೃಹತ್ ಎಲ್. ಇ .ಡಿ ಪರದೆಯಲ್ಲಿ ಬಿಡುಗಡೆ ಮಾಡಿ, ಮಂಜೇಶ್ವರದ ರಘುಭಟ್ ರ ಸಮರ್ಥ ಸಾಧನೆಯನ್ನು ಶ್ಲಾಘಿಸಿ, ಗೌರವಿಸಿ, ರಾಯರ ಅನುಗ್ರಹದ ಮಂತ್ರಾಕ್ಷತೆ ನೀಡಿ ಹರಸಿ, ಹಾರೈಸಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಆಯೋಜಕರಾದ ರಘು ಭಟ್ ಮಂಜೇಶ್ವರ, ಪತ್ನಿ ಸುಗುಣ ರಘು ಭಟ್ ಮಂಜೇಶ್ವರ, ಕನ್ನಡ ಚಿತ್ರರಂಗದ ಹಿರಿಯ ನಟರಾದ ಶ್ರೀನಾಥ್, ತಾರಾ, ಗಿರಿಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ಸುಧಾರಾಣಿ , ನೆನಪಿರಲಿ ಪ್ರೇಮ್ ಸೇರಿದಂತೆ ಹಲವಾರು ಹಿರಿತೆರೆ, ಕಿರುತೆರೆ ಕಲಾವಿದರು ಭಾಗವಹಿಸಿದ್ದರು. ಸಂಗೀತ ಸಂಜೆ ಕಾರ್ಯಕ್ರಮದಲ್ಲಿ, ಮಂಜೇಶ್ವರದ ಅಂತರಾಷ್ಟ್ರೀಯ ಸೆಕ್ಸ್ ಫೋನ್ ವಾದಕ ಶ್ರೀ ಜಯರಾಮ ಮಂಜೇಶ್ವರ ರವರ ಸೆಕ್ಸ್ ಫೋನ್ ವಾದನ, ಕರಾವಳಿಯ ಹುಲಿವೇಷ ಪ್ರದರ್ಶನ, ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಸೇರಿದಂತೆ ವಿವಿಧ ಕಲಾವಿದರು ಹಾಡು, ನೃತ್ಯಗಳ ಮೂಲಕ ಕಲಾ ಪ್ರದರ್ಶನ ನೀಡಿದರು.
