ಕಾಸರಗೋಡು: ಕೊಂಕಣಿ ಮಾತೃ ಭಾಷೆಯೊಂದಿಗೆ ಕಾಸರಗೋಡಿನ ಮಣ್ಣಿನಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ಇದೇ ಊರಿನಲ್ಲಿ ಹುಟ್ಟಿ ಬೆಳೆದ ಕೊಂಕಣಿ ಕ್ರೈಸ್ತ ಸಮುದಾದದಿಂದ ಈ ಬಾರಿ ಮಂಜೇಶ್ವರ ಮತ್ತು ಕಾಸರಗೋಡಿನ ವಿಧಾನಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಕಾಸಗೋಡು ಕೊಂಕಣಿ ಕ್ರಿಸ್ತಯನ್ ಅಸೋಸಿಯೇಶನ್ (KKCA) ಘೋಷಿಸಿದೆ. ಮಂಜೇಶ್ವರ ಮಂಡಲದಲ್ಲಿ ಸುಮಾರು ಎಂಟುಸಾವಿರ ಹಾಗೂ ಕಾಸರಗೋಡು ಮಂಡಲದಲ್ಲಿ ಐದುಸಾವಿರದಷ್ಟು ಮತದಾರರನ್ನು ಹೊಂದಿರುವ ಈ ಸಮುದಾಯವನ್ನು ಈ ಹಿಂದಿನ ಎಡರಂಗ ಹಾಗೂ ಐಕ್ಯರಂಗ ಸರಕಾರಗಳು ವಂಚಿಸಿವೆ. ಈ ಸಮುದಾಯದ ಮೂಲಭೂತ ಅಗತ್ಯವಾದ ಜಾತಿ ಪ್ರಮಾಣಪತ್ರವು ಲಭಿಸದಿರುವುದು ವಲಸಿಗರು ಎಂಬ ಕಾರಣವನ್ನು ನೀಡಿ ವಂಚಿಸುವುದು. ಚುಣಾವಣೆ ಸಂದರ್ಭದಲ್ಲಿ ಮಾತ್ರ ಸುಮುದಾಯದ ನೇತಾರರನ್ನು ಹಾಗೂ ಬಿಷಪ್ ರವರನ್ನು ಭೇಟಿಯಾಗಿ ಆಶ್ವಾಸನೆಗಳನ್ನು ನೀಡಿ ಮರೆಯುವುದು ಈ ಹಿಂದಿನ ಚುನಾವಣೆಗಳಲ್ಲಿ ಸಾಮಾನ್ಯವಾಗಿ ನಡೆದ ವಿಚಾರವಾಗಿದೆ. ಈ ವಿಚಾರಗಳಿಗೆ ಎದುರಾಗಿ ಈ ಬಾರಿ ಕಾಸರಗೋಡು ಮತ್ತು ಮಂಜೇಶ್ವರ ಮಂಡಲಗಳಲ್ಲಿ ತಮ್ಮ ಸಮುದಾಯದ ಪ್ರತಿಷ್ಠಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತಮ್ಮ ಮತ ಬಲವನ್ನು ತೋರ್ಪಡಿಷಲು ಈ ಸಮುದಾಯವು ಸಜ್ಜಾಗಿದೆ. ಸೂಕ್ತ ಅಭ್ಯರ್ಥಿಗಳನ್ನು ಈಗಾಲಲೇ ತೀರ್ಮಾನಿಸಲಾಗಿದೆ ಎಂದು KKCA ನೇತಾರರು ತಿಳಿಸಿದ್ದಾರೆ. ಈ ವಿಚಾರವಾಗಿ ಕೆಲವೇ ದಿನಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಭ್ಯರ್ಥಿಗಳನ್ನು ಘೋಷಿಸಿರುವುದಾಗಿ ತಿಳಿಸಲಾಗಿದೆ.
8:10:45

ಸರಿಯಾದ ನಿರ್ಧಾರ...
ಪ್ರತ್ಯುತ್ತರಅಳಿಸಿ