ಕುಂಬಳೆ: ಕುಂಬಳೆ ದೇವಸ್ಥಾನ ರಸ್ತೆಯಲ್ಲಿರುವ ಗೀತಾ ಜ್ಯುವೆಲ್ಲರಿ ಮಾಲಕರೂ, ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿದ್ದ, ಕುಂಬಳೆ ಹೈಸ್ಕೂಲ್ ಬಳಿಯ ನಿವಾಸಿ, ಕೆ. ಜನಾರ್ಧನ ಆಚಾರ್ಯ ಕುಂಬಳೆ (86) ಇಂದು ಸಂಜೆ ಕುಂಬಳೆ ಪೇಟೆಗೆ ಬಂದ ವೇಳೆ ಹೃದಯಾಘಾತಗೊಂಡು ಸ್ಥಳೀಯ ಸರಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾದರು. ಮೃತರು ಪತ್ನಿ: ವೇದಾವತಿ, ಮಕ್ಕಳಾದ: ಮನೋಹರ, ಗೀತಾ, ವಸಂತ, ಸೊಸೆಯಂದಿರಾದ: ವಿಜಯಲಕ್ಷ್ಮಿ (ಅನು), ನಿರ್ಮಲ, ವಿದ್ಯಾಜ್ಯೋತಿ, ಅಳಿಯ: ದುರ್ಗಾದಾಸ್, ಸಹೋದರರಾದ: ಲಕ್ಷ್ಮಣ ಆಚಾರ್ಯ, ಗೋಪಾಲಕೃಷ್ಣ ಆಚಾರ್ಯ, ಮೊದಲಾದವರನ್ನು ಅಗಲಿದ್ದಾರೆ. ಮೃತರ ಮಕ್ಕಳ ಪೈಕಿ ಉದಯ ಆಚಾರ್ಯರು ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 9.00 ಗಂಟೆಗೆ ಕುಂಬಳೆ ಕುಂಟಗೆರಡ್ಕದ ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಇಂದು ಸಂಜೆ ಕುಂಬಳೆ ಪೇಟೆಗೆ ತೆರಳಿದ್ದ ಜನಾರ್ಧನ ಆಚಾರ್ಯರಿಗೆ ಹೃದಯಾಘಾತವುಂಟಾಯಿತು. ಕೂಡಲೇ ಸ್ಥಳೀಯರು ಕುಂಬಳೆಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ನಿಧನ ಸಂಭವಿಸಿದೆ. ಮೃತರು ಕಳೆದ 45 ವರ್ಷಗಳಿಂದ ಕುಂಬಳೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ರಸ್ತೆಯಲ್ಲಿ "ಗೀತಾ ಜ್ಯುವೆಲ್ಲರಿ" ಎಂಬ ಆಭರಣ ಮಳಿಗೆಯನ್ನು ಹೊಂದಿ, ಜನಜನಿತರಾಗಿದ್ದಾರೆ. ಅಲ್ಲದೇ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, 2007 ರಲ್ಲಿ ನಡೆದ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಹಗಲು ರಾತ್ರಿ ಎನ್ನದೇ ಸಂಪೂರ್ಣವಾಗಿ ತೊಡಗಿಸಿಕೊಂಡು, ಕ್ಷೇತ್ರದ ಅಭಿವೃದ್ಧಿಗೆ ಭಾಜನರಾಗಿದ್ದರು. ಮೃತರ ನಿಧನಕ್ಕೆ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿ, ಮಹಿಳಾ ಸಂಘ, ಗಾಢವಾದ ಸಂತಾಪ ಸೂಚಿಸಿದ್ದಾರೆ.
8:10:45
