ಬೆಂಗಳೂರು ರವಿಂದ್ರ ಕಲಾಕ್ಷೇತ್ರದಲ್ಲಿ ದಲಿಯನ ಡೋಲು ಯಶಸ್ವಿ ಪ್ರದರ್ಶನ.
ಕಾಸರಗೋಡು ಗಡಿನಾಡ ಕನ್ನಡಿಗರ ಧ್ವನಿ ದಲಿಯನ ಡೋಲಿ ನ ಮೂಲಕ ಬೆಂಗಳೂರಿನಲ್ಲಿ ಮಾರ್ಧನಿ.
'ರಂಗಸಂಭ್ರಮ 2026 ' ರಂಗಭೂಮಿಯ ಪ್ರಸಿದ್ಧ ವೇದಿಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿತು. ಉದಯ ಸಾರಂಗ ರಚಿಸಿ ನಿರ್ದೇಶಿಸಿದ ಸ್ವರ್ಗ ಭೂಮಿಕಾ ಸಂಡೇ ಥಿಯೇಟರ್ ಪ್ರದರ್ಶಿಸಿದ 'ದಲಿಯನ ಡೋಲು' ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಗ್ರಾಮೀಣ ರಂಗಭೂಮಿಯನ್ನು ಪೋಷಿಸುತ್ತಿರುವ ಈ ತಂಡದಲ್ಲಿ ವಿವಿಧ ವಲಯದ ಪ್ರತಿಭಾನ್ವಿತರು ಒಟ್ಟು ಸೇರಿರುವುದು ಸಂಡೇ ಥಿಯೇಟರ್ ನ ವಿಶೇಷತೆ. ಜಾನಪದ ಸೊಗಡಿನ ಸಂಸ್ಕಾರದ ಸೆಳೆ ಜಾಗತೀಕರಣದ ಮಾಯಾಲೋಕದಲ್ಲಿ ಹೋರಾಡುವ ಕಥಾಹಂದರವನ್ನು ಹೊಂದಿದ ಈ ನಾಟಕ ನೋಡುಗರಿಗೆ ಆಪ್ತವಾಗುವಂತೆ ಮಾಡಿದೆ.ಪ್ರತೀ ದೃಶ್ಯಗಳು ಕೌತುಕವನ್ನು ಸೃಷ್ಠಿಸುವುದೇ ಇದರ ಪ್ರಧಾನ ಭೂಮಿಕೆಯಾಗಿದೆ.ಈ ನಾಟಕದಲ್ಲಿ ದಲಿಯ ಕಥಾ ಪಾತ್ರದಲ್ಲಿ ಪ್ರಸ್ತುತ ಪಂಚಾಯತ್ ಸದಸ್ಯರಾಗಿರುವ ರಾಮಚಂದ್ರ ಮೊಳಕ್ಕಾಲ್, ಮಾಯಾವಿಯಾಗಿ ಯುವ ಉದ್ಯಮಿ ರಾಜೇಶ್ ಸ್ವರ್ಗ, ಊರಿನ ಜಮೀನ್ದಾರಿಯಾಗಿ ಉಪನ್ಯಾಸಕಿಯಾಗಿರುವ ಕವಯತ್ರಿ ನವ್ಯಾಶ್ರೀ ಸ್ವರ್ಗ, ಮಂಜನಾಗಿ ಬ್ಯಾಡ್ಮಿಂಟನ್ ಕೋಚ್ ಆಗಿರುವ ಕೃಷ್ಣ ಮೋಹನ ಪೊಸೊಳ್ಯ , ಊರಿನ ಜನಗಳಾಗಿ ರಂಗ ಕರ್ಮಿ ಅಶೋಕ್ ಕೊಡ್ಲಮೊಗರು ,ಗುಣಾಜೆ ಅಂಗನವಾಡಿ ಅಧ್ಯಾಪಿಕೆ ಸುಮತಿ, ಕು.ವೈಷವಿ ಪೊಸೊಳ್ಯ, ಪೂರ್ಣಿಮ ಪಾತ್ರಗಳಿಗೆ ಜೀವ ನೀಡಿದರು. ಸಂಗೀತ ಮಾ. ಕಾರ್ತಿಕ್ ಪೆರಿಕ್ಕಾನ, ಮಾ.ವೈಷವ್,ಮಾ. ಮೋಕ್ಷಿತ್ ಮಾಡಿದರು. ರಂಗಪರಿಕರ ಪ್ರಸಾಧನ ಕಿರಣ್ ಕಲಾಂಜಲಿ ಮಾಡಿದರು . ನಾಟಕ ತಂಡದ ಸಂಯೋಜಕರಾಗಿ ಕವಿ ಶ್ರೀನಿವಾಸ ಪೆರಿಕ್ಕಾನನವರು ಕಾರ್ಯ ನಿರ್ವಹಿಸಿದರು. ಶಂಕರ ಸ್ವಾಮಿ ಕೃಪಾ ಸಹಕರಿಸಿದರು.
