Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಬೆಂಗಳೂರು ತುಳು ಕೂಟದ ಅಧ್ಯಕ್ಷ, ತುಳು ಸಂಘಟಕ, ಹಿಂದೂಪರ ಸಂಘಟನೆಗಳ ಕಾರ್ಯಕರ್ತ, ಸಾಮಾಜಿಕ, ಧಾರ್ಮಿಕ ಮುಂದಾಳು ಸುಂದರ್ ರಾಜ್ ರೈ (58) ಹೃದಯಘಾತದಿಂದ ನಿಧನ.

ಬೆಂಗಳೂರು ತುಳು ಕೂಟದ ಅಧ್ಯಕ್ಷ, ತುಳು ಸಂಘಟಕ, ಹಿಂದೂಪರ ಸಂಘಟನೆಗಳ ಕಾರ್ಯಕರ್ತ, ಸಾಮಾಜಿಕ, ಧಾರ್ಮಿಕ ಮುಂದಾಳು ಸುಂದರ್ ರಾಜ್ ರೈ (58) ಹೃದಯಘಾತದಿಂದ ನಿಧನ.

ಬೆಂಗಳೂರು: ಬೆಂಗಳೂರು ತುಳು ಕೂಟದ ಅಧ್ಯಕ್ಷ, ತುಳು ಸಂಘಟಕ, ಹಿಂದೂಪರ ಸಂಘಟನೆಗಳ ಕಾರ್ಯಕರ್ತ, ಸಾಮಾಜಿಕ, ಧಾರ್ಮಿಕ ಮುಂದಾಳು ಸುಂದರ್ ರಾಜ್ ರೈ (58) ಹೃದಯಘಾತದಿಂದ ಸ್ವ - ಗೃಹದಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಮೃತರು ಮೂಲತಃ ಪುತ್ತೂರು ಕುಂಬ್ರ ನಿವಾಸಿಯಾಗಿದ್ದು ಕಳೆದ 35 ವರ್ಷಗಳಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸಿಸುತ್ತಿದ್ದಾರೆ. ಹಿಂದೂಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಸುಂದರ ರಾಜ್ ರೈ ಯವರು ಧಾರ್ಮಿಕ ಹಿತ ಚಿಂತನೆಯುಳ್ಳವರಾಗಿದ್ದರು. ತುಳು ಉಳಿವಿಗಾಗಿ ಬೆಂಗಳೂರಿನ ತುಳುಕೂಟದ ಮೂಲಕ ಅವಿರತವಾಗಿ ಹೋರಾಟಗಳನ್ನು ಮಾಡುತ್ತಿದ್ದರು. ಅಲ್ಲದೆ ವಿವಿಧ ಕಾರ್ಯಕ್ರಮಗಳನ್ನ ಆಯೋಜನೆ ಮಾಡುತ್ತಿದ್ದರು. ಕ್ಯಾಟರಿಂಗ್ ಉದ್ಯಮವನ್ನು ಮಾಡುತ್ತಿದ್ದ ಸುಂದರ್ ರಾಜ್ ರೈ ಪತ್ನಿ, ಪುತ್ರಿಯೊಂದಿಗೆ ಮಲ್ಲೇಶ್ವರಂನಲ್ಲಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ಸ್ವ- ಗೃಹದಲ್ಲಿ ಹೃದಯಘಾತಗೊಂಡು ಕೂಡಲೇ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ನಿಧನರಾದರು. ಇದೀಗ ಮೃತದೇಹವನ್ನು ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ನ ರಾಣಿ ಅಬ್ಬಕ್ಕ ಮೈದಾನದಲ್ಲಿರಿಸಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಇಂದು ರಾತ್ರಿ 9:00 ಗೆ ಹುಟ್ಟೂರು ಪುತ್ತೂರಿಗೆ ಆಂಬುಲೆನ್ಸ್ ಮೂಲಕ ಕೊಂಡುಯ್ಯಲು ನಿರ್ಧರಿಸಲಾಗಿದ್ದು. ನಾಳೆ ಬೆಳಗ್ಗೆ ಮನೆಗೆ ತಲುಪಲಿದೆ. ಬಳಿಕ ಅಂತಿಮಕ್ರಿಯೆಯ ವಿಧಿ ವಿಧಾನಗಳು ನಡೆಯಲಿವೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಬಿಜೆಪಿ ಕರ್ನಾಟಕ ರಾಜ್ಯ ಗೋ ಸಂರಕ್ಷಣಾ ಸಮಿತಿ ಮಾಜಿ ಅಧ್ಯಕ್ಷರಾಗಿ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಬೆಂಗಳೂರಿನಲ್ಲಿ ಚಿರಪರಿಚಿತರಾಗಿದ್ದ ಸುಂದರ ರಾಜ್ ರೈ ಅವರು ಮುಂದಿನ ಡಿಸೆಂಬರ್ ತಿಂಗಳ 26 27 ರಂದು ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಕುಣಿತ ಭಜನಾ ಕಾರ್ಯಕ್ರಮನ್ನು ಆಯೋಜಿಸಿದ್ದರು. ಇದಕ್ಕಾಗಿ ರೂಪರೇಷೆಗಳನ್ನು ತಯಾರಿಸಿ, ಈ ಕಾರ್ಯದಲ್ಲಿ ತಲ್ಲೀನರಾಗಿದ್ದರು. ಈ ನಡುವೆ ಇಂದು ಬೆಳಿಗ್ಗೆ ಸ್ವ-ಗೃಹದಲ್ಲಿ ಹೃದಯಾಘಾತಗೊಂಡು, ನಿಧನರಾದರು. ಮೃತರ ನಿಧನಕ್ಕೆ ಸೃಷ್ಟಿ ಕಲಾ ಭೂಮಿ ಬೆಂಗಳೂರು - ಕಾಸರಗೋಡು ಘಟಕದ ಗೌರವಾಧ್ಯಕ್ಷ ಕಾಂತರಾಜ್ ಎಂ.ಜೆ, ಸಂಸ್ಥಾಪಕ, ಅಧ್ಯಕ್ಷ: ಸಂಕಬೈಲು ಮಂಜುನಾಥ ಆಡಪ್ಪ, ಪದಾಧಿಕಾರಿಗಳಾದ: ನಾಗರಾಜ ಆಚಾರ್ಯ ನಿಡ್ಡೋಡಿ ಕಿನ್ನಿಗೋಳಿ, ಕಮಲೇಶ್ ಸುವರ್ಣ ಅಡ್ಕ ಬಂದ್ಯೋಡ್ ಗಾಢವಾದ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.