ಮಿಯಪದವು: ಬಿಜೆಪಿ ಎಂದರೆ ಅಭಿವೃದ್ಧಿ, ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿ, ಮೋದಿಯವರಿಗೆ ಶಕ್ತಿ ತುಂಬಲು ಕೇರಳದ ಗ್ರಾಮಗಳಲ್ಲಿ ತಾವರೆ ಅರಳಬೇಕಿದೆ. ಎಂದು ಮುಸ್ಲಿಂ ಲೀಗ್ ಮಾಜಿ ನೇತಾರ ಇತ್ತೀಚಿಗೆ ಮೋದಿ ಅಭಿಮಾನಿಯಾಗಿ ಬಿಜೆಪಿ ಸೇರ್ಪಡೆಗೊಂಡ ಸಲೀಲ್ ಮಾಸ್ಟರ್ ಹೇಳಿದರು. ಮೀoಜ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಅತಿಥಿಯಾಗಿ ಭಾಗವಹಿಸಿದರು. ಕಾಂಗ್ರೆಸ್ ಎಂಬುವುದು ಕಾಸರಗೋಡು ಜಿಲ್ಲೆಯಲ್ಲಿ ನರಸತ್ತ ಪಕ್ಷ ಮುಸ್ಲಿಂ ಲೀಗ್ ನ ಬೆದರಿಕೆಗಳಿಗೆ ಬೆದರಿ ಕಾಂಗ್ರೆಸ್ ಇಂದು ನಾಶವಾಗಿದೆ.
ಎಡರಂಗ ಹಾಗು ಮುಸ್ಲಿಂ ಲೀಗ್
ಒಂದೇ ನಾಣ್ಯದ ಎರಡು ಮುಖಗಳು, ಮುಸ್ಲಿಂ ಲೀಗ್ ತನ್ನ ಮತದಾರರನ್ನು ಬೆಳೆಯಲು ಬಿಡುವುದಿಲ್ಲ ಮುಸ್ಲಿಂ ಲೀಗ್ ಕೆಲವು ಕುಟುಂಬಗಳ ಸ್ವದಿನದಲ್ಲಿ ಕಾರ್ಯನಿರ್ವಹಿಸುವ ಪಕ್ಷ, ಮುಸ್ಲಿಂ ಲೀಗ್ ನಿರಂತರ ಗೆಲ್ಲುವ ಮಂಜೇಶ್ವರ ವಿ.ಸಭಾ ವ್ಯಾಪ್ತಿ ಕೇರಳದಲ್ಲೇ ಅತ್ಯಂತ ಹಿಂದುಳಿದ ಪ್ರದೇಶ ಇಲ್ಲಿ ವಿದ್ಯಭ್ಯಾಸ, ಅರೋಗ್ಯ, ಉದ್ಯೋಗಕ್ಕೆ ಈಗಲೂ ಜನತೆ ಮಂಗಳೂರನ್ನು ಅಶ್ರಯ ಪಡಬೇಕಾದ ಪರಿಸ್ಥಿತಿ.
ಮುಸ್ಲಿಂ ಜನರನ್ನು ಬೆದರಿಸಿ ತನ್ನ ವೋಟ್ ಬ್ಯಾಂಕ್ ರಾಜಕೀಯ ಮಾಡುವ ಮುಸ್ಲಿಂ ಲೀಗ್ ನಿಂದ ವಿದ್ಯಾವಂತ ಜನತೆ ಹೊರ ಹೋಗುತ್ತಿದ್ದಾರೆ.
ಎಂದು ಸಲೀಲ್ ಮಾಸ್ಟರ್ ಹೇಳಿದರು. ಬಿಜೆಪಿಯ ಗೆಲುವು ಅಭಿವೃದ್ಧಿಯ ಸಂಕೇತವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.
