ಶಬರಿಮಲೆ ಲೂಟಿ ಮಾಡಿದ ಪಕ್ಷಕ್ಕೆ ವೋಟ್ ನೀಡಬೇಡಿ - ಕಿಶೋರ್ ಕುಮಾರ್.
ಮಿಯಪದವು: ಕೇರಳದಲ್ಲಿ ಎಡರಂಗ ಮತ್ತು ಕಾಂಗ್ರೆಸ್, ಮುಸ್ಲಿಂ ಲೀಗ್ ಪಕ್ಷಗಳಿಗೆ ಪಕ್ಷ ತತ್ವ ಸಿದ್ದಂತಗಳಿಲ್ಲ ಅವರದ್ದು ಅಧಿಕಾರಕಾಗಿ ಅವಕಾಶ ರಾಜಕಾರಣ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಗ್ರಾಮ ಗ್ರಾಮಗಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಆಡಳಿತ ಬಿಜೆಪಿಗೆ ನೀಡಬೇಕು. ಶಬರಿಮಲೆಯಲ್ಲಿ ಲೂಟಿ ಮಾಡಿ ಜೈಲು ಸೇರಿರುವ ಎಡರಂಗಕ್ಕೆ ಅಸ್ತಿಕ ಬಂಧುಗಳು ವೋಟ್ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬರಬೇಕು. ಎಂದು ಕರ್ನಾಟಕ ವಿಧಾನಪರಿಷತ್ ಸದಸ್ಯ ಬಿಜೆಪಿ ನೇತಾರ ಕಿಶೋರ್ ಕುಮಾರ್ ಹೇಳಿದರು. ಅವರು ಮೀoಜ ಪಂಚಾಯತ್ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟನೆ ಮಾಡಿ ಮಾತನಾಡಿದರು. ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಬೆಜ್ಜ ಚಂದ್ರಹಾಸ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಮುಖಂಡರಾದ ಮಾದು ವಲಪಿಲ್ಲ, ಸಲೀಲ್ ಮಾಸ್ಟರ್, ಪದ್ಮನಾಭ ರೈ, ಮುಂದಿಲ ಶಂಕರ ನಾರಾಯಣ, ಹಾಗೂ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಕರುಣಾಕರ ರೈ ಸ್ವಾಗತಿಸಿ, ಕೃಷ್ಣ ಬೆಜ್ಜ ಧನ್ಯವಾದ ನೀಡಿದರು.
