Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಇಚ್ಲಂಗೋಡು ಶ್ರೀ ಕೋಮಾರು ಚಾಮುಂಡಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ದಿನಾಂಕ ನಿರ್ಧಾರ, ಆಮಂತ್ರಣ ಪತ್ರಿಕೆ ಬಿಡುಗಡೆ.

ಇಚ್ಲಂಗೋಡು ಶ್ರೀ ಕೋಮಾರು ಚಾಮುಂಡಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ದಿನಾಂಕ ನಿರ್ಧಾರ, ಆಮಂತ್ರಣ ಪತ್ರಿಕೆ ಬಿಡುಗಡೆ.
ಮಂಜೇಶ್ವರ: ಬಾಕುಡ ಸಮಾಜದ ಕಟ್ಟುಪಾಡಿನಂತೆ ಶ್ರೀ ಕೋಮಾರು ಚಾಮುಂಡಿ ದೈವಸ್ಥಾನ ಇಚ್ಲಂಗೋಡು ಇಲ್ಲಿನ ವಾರ್ಷಿಕ ನೇಮೋತ್ಸವದ ದಿನಾಂಕ ನಿರ್ಧರಿಸುವ ಕಾರ್ಯಕ್ರಮ (ಕುದಿ ಹಾಕುವುದು) ನಡೆಯಿತು.
ವಾರ್ಷಿಕ ನೇಮೋತ್ಸವ ( ನಾಗ ಬೆಮ್ಮೆರೆ ಸೇವೆ ) ದ ಆಮಂತ್ರಣ ಪತ್ರಿಕೆಯನ್ನು ಶ್ರೀ ದೈವದ ಸನ್ನಿಧಿಯಲ್ಲಿ ಹಿರಿಯರ , ಕಾರ್ನವರ ಮತ್ತು ಆಡಳಿತ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಯ ಕುಮಾರ್ ಕಾರ್ನವರು, ರಾಜು ಹಿರಿಯವರು, ಕೃಷ್ಣ ಬೇಕೂರು, ಅಮರನಾಥ್ ಕಡಂಬಾರ್, ವಿಶ್ವನಾಥ್ ಅಂಗಡಿಪದವು, ಪದ್ಮನಾಭ ಕೋಡಿಬೈಲು, ಬಾಬು ಅಡ್ಕತಬೈಲು, ರಾಜೇಶ್ ಮಾಸ್ಟರ್ ಕೊಡ್ಲಮೊಗರು, ಗಿರೀಶ್ ಕುಂಜತ್ತೂರು, ಅಶೋಕ್ ಸೋಂಕಾಲ್, ರಮೇಶ್ ಪತ್ವಾಡಿ, ನಾರಾಯಣ ಮಡಂದೂರು, ಜಗನ್ನಾಥ ಕೋಡಿಬೈಲು, ಜಿತೇಂದ್ರ ಕುಂಜತ್ತೂರು, ಯತಿರಾಜ್ ಇಡಿಯ, ಧನುಷ್ ಪೊಯ್ಯಕಂಡ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ವಿವರ ಈ ಕೆಳಗಿನಂತಿದೆ.👇
ಇದನ್ನೇ ವೈಯುಕ್ತಿಕ ಆಮಂತ್ರಣವೆಂದು ಭಾವಿಸಿ, ಆಗಮಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ ಆಡಳಿತ ಸಮಿತಿ ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.