ಕಾಸರಗೋಡು ಸಹೋದಯ ಟಾಪರ್ಸ್ ಮೀಟ್. ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸನ್ಮಾನ.
ವೆಳ್ಳರಿಕ್ಕುಂಡ್: ಕಾಸರಗೋಡು ಜಿಲ್ಲೆಯ 22 ಸಿಬಿಎಸ್‌ಇ ಶಾಲೆಗಳ 10 ನೇ ಹಾಗೂ 12 ನೇ ತರಗತಿಯ ಸಾರ್ವಜನಿಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಉದ್ದೇಶದಿಂದ ಕಾಸರಗೋಡು ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ವತಿಯಿಂದ ಟಾಪರ್ಸ್ ಮೀಟ್ ಕಾರ್ಯಕ್ರಮವನ್ನು ವೆಳ್ಳರಿಕ್ಕುಂಡ್‌ನ ಸೇಂಟ್ ಎಲಿಸಬೆತ್ ಕಾನ್ವೆಂಟ್ ಶಾಲೆಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ರಾಜಾಪುರಂ ಸೇಂಟ್ ಪಯಸ್ ಟೆಂಥ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿಜು ಜೋಸಫ್ ಉದ್ಘಾಟಿಸಿದರು. ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ಅಧ್ಯಕ್ಷರಾದ ಫಾ. ಜೋಸ್ ಕಲತ್ತಿಪರಂಬಿಲ್ ಅಧ್ಯಕ್ಷತೆ ವಹಿಸಿದರು. ಸೇಂಟ್ ಎಲಿಸಬೆತ್ ಕಾನ್ವೆಂಟ್ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಉದಯ ಉತ್ತುಪ್ಪನ್, ಸಹೋದಯ ಕಾರ್ಯದರ್ಶಿ ಫಾ. ಕೆ. ಸಿ. ಮ್ಯಾಥ್ಯೂ ಎಸ್.ಡಿ.ವಿ.ಬಿ ಹಾಗೂ ಏಂಜಲ್ ರಾಣಿ ಅಲ್ಬರ್ಟ್ ಉಪಸ್ಥಿತರಿದ್ದು ಮಾತನಾಡಿದರು. ಈ ವೇಳೆ 2025 – 26 ನೇ ಸಾಲಿನ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲಿ ಡಾನ್ ಬಾಸ್ಕೋ ಸೆಂಟ್ರಲ್ ಸ್ಕೂಲ್, ಮಂಜೇಶ್ವರದ ವಿದ್ಯಾರ್ಥಿನಿ ಹನಾ ಮರಿಯಂ ಅತ್ಯಧಿಕ ಅಂಕಗಳನ್ನು ಗಳಿಸಿದ್ದು, ವಿದ್ಯಾರ್ಥಿ ಅಲೆನ್ ಅಲ್ಫೋಸ್ ಮಾಹಿತಿ ತಂತ್ರಜ್ಞಾನ (ಐಟಿ) ವಿಷಯದಲ್ಲಿ ಶೇ.100 ಅಂಕಗಳನ್ನು ಪಡೆದ ಸಾಧನೆಗಾಗಿ ಕಾಸರಗೋಡು ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ವತಿಯಿಂದ ಸನ್ಮಾನಿಸಲಾಯಿತು.
