ಮಾರ್ಚ್ 01 ರಿಂದ 08 ರ ವರೆಗೆ ಮಂಜೇಶ್ವರ ಶ್ರೀ ಕೀರ್ತೇಶ್ವರ ಸದಾಶಿವ ದೇವಸ್ಥಾನದಲ್ಲಿ ಶ್ರೀ ಸದಾಶಿವ ಹಾಗೂ, ಪರಿವಾರ ದೇವರುಗಳಿಗೆ "ಪುನರ್ ಪ್ರತಿಷ್ಠಾ ಅಷ್ಟಬಂಧ ಬಹ್ಮಕಲಶೋತ್ಸವ" ದ ಸಂಭ್ರಮ.
ಫೆಬ್ರವರಿ 24, 2025
0
ಮಾರ್ಚ್ 01 ರಿಂದ 08 ರ ವರೆಗೆ ಮಂಜೇಶ್ವರ ಶ್ರೀ ಕೀರ್ತೇಶ್ವರ ಸದಾಶಿವ ದೇವಸ್ಥಾನದಲ್ಲಿ ಶ್ರೀ ಸದಾಶಿವ ಹಾಗೂ, ಪರಿವಾರ ದೇವರುಗಳಿಗೆ "ಪುನರ್ ಪ್ರತಿಷ್ಠಾ ಅಷ್ಟಬಂಧ ಬಹ್ಮಕಲಶೋತ್ಸವ" ದ ಸಂಭ್ರಮ.
ಮಂಜೇಶ್ವರ: ಸುಮಾರು 800 ವರ್ಷಗಳ ಇತಿಹಾಸವಿರುವ ಮಂಜೇಶ್ವರದ ಪ್ರಸಿದ್ಧವಾದ ಶ್ರೀ ಕೀರ್ತೇಶ್ವರ ಸದಾಶಿವ ದೇವಸ್ಥಾನದಲ್ಲಿ ಶ್ರೀ ಕೀರ್ತೇಶ್ವರ ಸದಾಶಿವ ದೇವರ ಹಾಗೂ ಪರಿವಾರ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬಹ್ಮಕಲಶೋತ್ಸವವು ಮಾರ್ಚ್ 01 ಶನಿವಾರದಿಂದ ಮೊದಲ್ಗೊಂಡು ಮಾರ್ಚ್ 08 ಶನಿವಾರದವರೆಗೆ ಬ್ರಹ್ಮ ಶ್ರೀ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿಗಳವರ ದಿವ್ಯ ಹಸ್ತದಿಂದ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರುಗಲಿದೆ. ಆ ಪ್ರಯುಕ್ತ
ಮಾರ್ಚ್ 1 ರಂದು ಶನಿವಾರ ಬೆಳಿಗ್ಗೆ ಗಂಟೆ 9.00ಕ್ಕೆ ತಂತ್ರಿವರೇಣ್ಯರ ಹಾಗೂ ಋತ್ವಿಜರ ಆಗಮನ, ಪೂರ್ಣ ಕುಂಭ ಸ್ವಾಗತ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಹ ವಾಚನ, ಗಣಪತಿ ಹೋಮ, ಬ್ರಹ್ಮಕೂರ್ಚಾ ಹೋಮ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಗಂಟೆ 5.00 ಕ್ಕೆ ಅಂಕುರ ಪೂಜೆ ಅರಣೆ ಮಥನ ಅಗ್ನಿ ಜನರ ಸಾಂಸ್ಕರ ಸಪ್ತ ಶುದ್ಧಿ ಪ್ರಾಸಾರ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಕಾರ ಬಲಿ, ರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. 02 ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 7 ಕ್ಕೆ ಅಂಕುರ ಪೂಜೆ ಗಣಪತಿ ಹೋಮ, ಬಿಂಬ ಶುದ್ದಿ, ಪ್ರಾಯಶ್ಚಿತ್ತ ಹೋಮಗಳು, ಶಾಂತಿ ಹೋಮಗಳು, ನವಗ್ರಹ ಶಾಂತಿ, ಸಂಹಾರ ತತ್ವ ಹೋಮ, ತತ್ವ ಕಲಶ ಪೂಜೆ ಸಂಹಾರ ತತ್ವ ಕಲಶಾಭಿಷೇಕ ಜೀವೋದ್ದಾಸನೆ ಕ್ರಿಯೆ, ಜೀವ ಕಲಶ ಕುಂಭೇಶ ಕರ್ಕರೀ ಪೂಜೆ, ಶಯ್ಯ ಪೂಜೆ ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ ಗಂಟೆ 2.17 ಕ್ಕೆ ಶ್ರೀ ಕೇತ್ರ ಉದ್ಯಾವರ ಮಾಡದ ಬಳಿಯಿಂದ ಹಸಿರು ವಾಣಿ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ, ಬಳಿಕ ಉದ್ಘಾಟನಾ ಸಭೆ ನಡೆಯಲಿದೆ. ಶ್ರೀ ಕ್ಷೇತ್ರ ಉದ್ಯಾವರ ಮಾಡದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಲ್ಚಪ್ಪಾಡ ಪ್ರಾರ್ಥನೆ ನೆರವೇರಿಸುವರು. ಶ್ರೀ ಕ್ಷೇತ್ರ ಮಾಡದ ಅಣ್ಣ ದೈವದ ಸೇವಕರಾದ ಬೀರು ಚೌಟರು, ತಮ್ಮ ದೈವದ ಪಾತ್ರಿ ತಿಮಿರಿ ಬೆಲ್ಚಪ್ಪಾಡ, ಮುಂಡತ್ತಾಯ ದೈವದ ಪಾತ್ರಿ ಮಂಜು ಬೆಲ್ಚಪ್ಪಾಡ, ಐಸ್ರಾಲು ಗುತ್ತಿನ
ಮಂಜು ಭಂಡಾರಿ ಯಾನೆ ಸುಕುಮಾರ ಶೆಟ್ಟಿ, ಮೋಯಿಸ್ರಾಲು ಗುತ್ತಿನ ತಿಮ್ಮ ಭಂಡಾರಿ, ಓಮಯ ಯು ಯಾನೆ ಮಂಜು ಉದ್ಯಾವರ ಮಾಡ, ಶ್ರೀಯಾನ್ ಕುಟುಂಬಸ್ಥರಾದ ಉದಯ ಪೂಜಾರಿ, ಸುರೇಂದ್ರ ಗುರಿಕಾರ ಪಡುಸ್ಥಾನ, ಸುನಿಲ್ ಗುರಿಕಾರ
02 ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 7 ಕ್ಕೆ ಅಂಕುರ ಪೂಜೆ ಗಣಪತಿ ಹೋಮ, ಬಿಂಬ ಶುದ್ದಿ, ಪ್ರಾಯಶ್ಚಿತ್ತ ಹೋಮಗಳು, ಶಾಂತಿ ಹೋಮಗಳು, ನವಗ್ರಹ ಶಾಂತಿ, ಸಂಹಾರ ತತ್ವ ಹೋಮ, ತತ್ವ ಕಲಶ ಪೂಜೆ ಸಂಹಾರ ತತ್ವ ಕಲಶಾಭಿಷೇಕ ಜೀವೋದ್ದಾಸನೆ ಕ್ರಿಯೆ, ಜೀವ ಕಲಶ ಕುಂಭೇಶ ಕರ್ಕರೀ ಪೂಜೆ, ಶಯ್ಯ ಪೂಜೆ ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ ಗಂಟೆ 2.17 ಕ್ಕೆ ಶ್ರೀ ಕೇತ್ರ ಉದ್ಯಾವರ ಮಾಡದ ಬಳಿಯಿಂದ ಹಸಿರು ವಾಣಿ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ, ಬಳಿಕ ಉದ್ಘಾಟನಾ ಸಭೆ ನಡೆಯಲಿದೆ. ಶ್ರೀ ಕ್ಷೇತ್ರ ಉದ್ಯಾವರ ಮಾಡದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಲ್ಚಪ್ಪಾಡ ಪ್ರಾರ್ಥನೆ ನೆರವೇರಿಸುವರು. ಶ್ರೀ ಕ್ಷೇತ್ರ ಮಾಡದ ಅಣ್ಣ ದೈವದ ಸೇವಕರಾದ ಬೀರು ಚೌಟರು, ತಮ್ಮ ದೈವದ ಪಾತ್ರಿ ತಿಮಿರಿ ಬೆಲ್ಚಪ್ಪಾಡ, ಮುಂಡತ್ತಾಯ ದೈವದ ಪಾತ್ರಿ ಮಂಜು ಬೆಲ್ಚಪ್ಪಾಡ, ಐಸ್ರಾಲು ಗುತ್ತಿನ
ಮಂಜು ಭಂಡಾರಿ ಯಾನೆ ಸುಕುಮಾರ ಶೆಟ್ಟಿ, ಮೋಯಿಸ್ರಾಲು ಗುತ್ತಿನ ತಿಮ್ಮ ಭಂಡಾರಿ, ಓಮಯ ಯು ಯಾನೆ ಮಂಜು ಉದ್ಯಾವರ ಮಾಡ, ಶ್ರೀಯಾನ್ ಕುಟುಂಬಸ್ಥರಾದ ಉದಯ ಪೂಜಾರಿ, ಸುರೇಂದ್ರ ಗುರಿಕಾರ ಪಡುಸ್ಥಾನ, ಸುನಿಲ್ ಗುರಿಕಾರ ಕೀರ್ತೇಶ್ವರ, ರಮೇಶ್ ಗುರಿಕಾರರು ಹೊಸಹಿತ್ತು,
ಶ್ರೀ ವೀರಭದ್ರ ಮಹಮ್ಮಾಯೀ ಕ್ಷೇತ್ರದ ಧೂಮಾವತಿ ದೈವದ ಪಾತ್ರಿ ವಸಂತ ಶೆಟ್ಟಿಗಾರ್, ಶ್ರೀ ಕ್ಷೇತ್ರ ಮಾಡದ ನಿಕಟ ಪೂರ್ವ ಆಡಳಿತ ಮೊಕ್ತೇಸರ ಡಾ. ಜಯಪಾಲ್ ಶೆಟ್ಟಿ, ತೂಮಿನಾಡು ಬ್ರಹ್ಮ ಶ್ರೀ ಮೊಗೇರ ಮಹಾಕಾಳಿ ಕ್ಷೇತ್ರದ ಜಯಂತ ಎಂ, ಉದ್ಯಾವರ ಶ್ರೀ ಭಗವತೀ ಕ್ಷೇತ್ರದ ರಘು ಕಾರ್ನವರು, ಕನಿಲ ಶ್ರೀ ಭಗವತೀ ಕ್ಷೇತ್ರದ ಮಂಜಪ್ಪ ಕಾರ್ನವರು ದಿವ್ಯ ಉಪಸ್ಥಿತರಿರುವರು. ಸಂಜೆ ಗಂಟೆ 5 ಕ್ಕೆ ಭದ್ರತ ಮಂಡಲ ಪೂಜೆ, ಧ್ಯಾನಾಧಿವಾಸ ಶಿರತತ್ವ ಹೋಮ, ಪ್ರತಿಷ್ಠಾ ಹೋಮ, ಅಧಿವಾಸ ಹೋಮ, ಅಂಕುರ ಪೂಜೆ, ರಾತ್ರಿ ಪೂಜೆ ಅನ್ನಸಂತರ್ಪಣೆ, ಸಂಜೆ ಗಂಟೆ 6.00 ಕ್ಕೆ ಶ್ರೀ ರವೀಶ್ ಭಟ್, ಪ್ರಧಾನ ಅರ್ಚಕರು, ಕೀರ್ತೇಶ್ವರವರ ಪ್ರಾಯೋಜಕತ್ವದಲ್ಲಿ ವಸುಂಧರಾ ಯಕ್ಷಗಾನ ಅಧ್ಯಯನ ಕೇಂದ್ರ ಮಂಜೇಶ್ವರ ಇವರ ವತಿಯಿಂದ "ಸುದರ್ಶನ ವಿಜಯ" ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ 7.30 ಕ್ಕೆ ಕು.ಅಧಿತಿ ಗಾಣಿಗ, ಟೀಮ್ ಬನ್ ವಾರಿ, ಕುಡುಪು, ಮಂಗಳೂರು ಇವರಿಂದ ಭಕ್ತಿಗಾನ ವೈಭವ ನಡೆಯಲಿದೆ. 3 ರಂದು ಶುಕ್ರವಾರ ಬೆಳಿಗ್ಗೆ ಗಂಟೆ 6.00 ಕ್ಕೆ ಗಣಪತಿ ಹೋಮ, ಅಂಕುರ ಪೂಜೆ, 7.26 ರ ಮೀನ ಲಗ್ನದಲ್ಲಿ ಶ್ರೀ ಸದಾಶಿವ ದೇವರ ಹಾಗೂ ಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ ಜೀವ ಕಲಶಾಭಿಷೇಕ, 08.06 ಕ್ಕೆ ಶ್ರೀ ಶಾಸ್ತಾವೇಶ್ವರ ದೇವರ ಪ್ರತಿಷ್ಠೆ, ಜೀವ ಕಲಶಾಭಿಷೇಕ, 8.56 ಕ್ಕೆ ಶ್ರೀ ದುರ್ಗಾ ದೇವಿಯ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಮಹಾ ಮೃತ್ಯುಂಜಯ ಹೋಮ, ನಿತ್ಯ ನೈಮಿತ್ಯಾಧಿಗಳು ನಿರ್ಣಯ, ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 5 ಕ್ಕೆ ಅಘೋರ ಹೋಮ, ಸುದರ್ಶನ ಹೋಮ, ದಿಶಾ ಹೋಮ, ಅಂಕುರ ಪೂಜೆ ರಾತ್ರಿ ಪೂಜೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳು ದೀಪ ಪ್ರಜ್ವಲನೆ ಗೈಯಲಿರುವರು. ಮಂಜೇಶ್ವರ ಗಾಣಿಗ ಯಾನೆ ಸಪಲ್ಯ ಸುಧಾರಕ ಸಂಘದ ಅಧ್ಯಕ್ಷ ಶ್ರೀ ತುಕರಾಮ್ ಕುಂಬ್ಳೆ ಅಧ್ಯಕ್ಷತೆ ವಹಿಸುವರು. ಕುಂಟಾರು ರವೀಶ ತಂತ್ರಿ, ಕ್ಷೇತ್ರದ ಶಿಲ್ಪಿ
ಬೆದ್ರಡ್ಕ ರಮೇಶ್ ಕಾರಂತರು, ಧರ್ಮದರ್ಶಿ ಯೋಗೀಶ್ ಭಟ್ ಜಪ್ಪಿನ ಮೊಗರು ಶುಭಾಶಂಶನೆಗೈಯುವರು, ಲೋಕ ಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಂಜೇಶ್ವರ ಶ್ರೀ ಮದನಂತೇಶ್ವರ ದೇವಸ್ಥಾನದ ಅಧ್ಯಕ್ಷ ಟಿ. ಗಣಪತಿ ಪೈ, ಮಂಜೇಶ್ವರ ಕಾಶಿ ಮಠ ಸಂಸ್ಥಾನಮ್ ನ ಅಧ್ಯಕ್ಷ ಎಂ.ಜೆ ಕಿಣಿ, ಮಂಜೇಶ್ವರ ಗಾಣಿಗ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಎಂ ಕಮಲಾಕ್ಷ ಬಿ.ಸಿ ರೋಡ್, ಮಂಜೇಶ್ವರ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಳ, ಉದ್ಯಾವರ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ಉದಯ ಕಾರ್ನವರ್, ಮಂಗಳೂರು ತಾಲೂಕು ಗಾಣಿಗ ಸಂಘದ ಅಧ್ಯಕ್ಷ ನಾರಾಯಣ ಕಣ್ಣೂರು,
ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ಯದುನಂದನ ಆಚಾರ್ಯ ಕಡಂಬಾರು, ಬಂಗ್ರ ಮಂಜೇಶ್ವರ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷ ಹರಿಶ್ಚಂದ್ರ ಶೆಟ್ಟಿಗಾರ್,
ಮಂಗಳೂರು ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಕೇಶವ ಮಳಲಿ, ಬಂಗ್ರಮಂಜೇಶ್ವರ ಶ್ರೀ ಮಲರಾಯ ಕ್ಷೇತ್ರದ ಮೊಗವೀರ ಸಂಘದ ಅಧ್ಯಕ್ಷ ಗಣೇಶ್ ಸಾಲಿಯಾನ್, ಮಂಜೇಶ್ವರ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ, ನಟ ರಘು ಭಟ್ ಮಂಜೇಶ್ವರ,
ಬಾಕುಡ ಸಮಾಜ ಮಂಜೇಶ್ವರ ಅಧ್ಯಕ್ಷ ಗುರುವಪ್ಪ, ಮಂಜೇಶ್ವರ ಮುಗೇರ ದೈವಸ್ಥಾನ ಅಧ್ಯಕ್ಷ ಲೋಕೇಶ್
ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 8.30 ರಿಂದ ಗುರು ಶ್ರೀ ಬಾಲಕೃಷ್ಣ ಮಂಜೇಶ್ವರ ನಾಟ್ಯ ನಿಲಯ ಅವರ ಶಿಷ್ಯರಿಂದ ನೃತ್ಯ ರಂಜನೆ "ಶಿವಾಂಜಲಿ" ನಾದ ನೃತ್ಯ ಪ್ರಿಯಂ ನಡೆಯಲಿದೆ. 04 ರಂದು ಮಂಗಳವಾರ ಬೆಳಿಗ್ಗೆ ಗಂಟೆ 7.00 ಕ್ಕೆ ಅಂಕುರ ಪೂಜೆ, 108 ಕಾಯಿ ಮಹಾಗಣಪತಿ ಹೋಮ, ತ್ರಿಕಾಲ ಪೂಜೆ, ಪವಮಾನ ಹೋಮ, ಶತರುದ್ರಾಭಿಷೇಕ, ಮಹಾರುದ್ರಯಾಗ, ಮಹಾಪೂಜೆ ಅನ್ನಸಂತರ್ಪಣೆ, ಬೆಳಿಗ್ಗೆ ಗಂಟೆ 10.ಕ್ಕೆ ಕೀರ್ತೇಶ್ವರ ಮಹಿಳಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ, ಸಂಜೆ ಗಂಟೆ 5.00 ಕ್ಕೆ ಶೂಲಿನಿ ಹೋಮ, ಮಹಾಬಲಿ ಪೀಠ ಪ್ರತಿಷ್ಠೆ ನಾಗದೇವರ ಬನದಲ್ಲಿ ವಾಸ್ತು ಪೂಜೆ, ಕಲಶಾಧಿವಾಸ ಅಧಿವಾಸ ಹೋಮ, ಅಂಕುರ ಪೂಜೆ, ರಾತ್ರಿ ಪೂಜೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6.00ಕ್ಕೆ ಮಾತೆಯರ ಸಮಾವೇಶ ಮಾತೃ ಸಂಗಮ ನಡೆಯಲಿದ್ದು, ಶ್ರೀ ಕ್ಷೇತ್ರ ಒಡಿಯೂರಿನ ಪರಮ ಪೂಜ್ಯ ಶ್ರೀ ಶ್ರೀ ಸಾದ್ವಿ ಮಾತಾನಂದಮಂಯೀ ಆಶೀರ್ವಚನ ನೀಡಲಿರುವರು.
ವಿಶ್ವ ಹಿಂದೂ ಪರಿಷತ್
ಕಣ್ಣೂರು ವಿಭಾಗ ಮಾತೃ ಶಕ್ತಿ ಪ್ರಮುಖ್ ಶ್ರೀಮತಿ ಮೀರಾ ಆಳ್ವ ದೀಪ ಪ್ರಜ್ವಲನೆ, ಶ್ರೀ ಕೀರ್ತೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ರೇವತಿ ಶೈಲೇಶ್ ಅಧ್ಯಕ್ಷತೆ ವಹಿಸಲಿರುವರು. ಶ್ರೀಮತಿ ಶಿಲ್ಪ ಸೂಪರಿಡೆಂಟ್ ಆಪ್ ಪೊಲೀಸ್, ಕಾಸರಗೋಡ್,
ಶ್ರೀಮತಿ ಡಾ. ಬಿ.ವಿ ವಾಸಂತಿ ಅಮರ್ IAS ವಿಶೇಷ ಜಿಲ್ಲಾಧಿಕಾರಿಗಳು, ಬೆಂಗಳೂರು, ಡಾ. ಕೆ.ವಿ. ಮಾಲಿನಿ, ನಿವೃತ ಪ್ರಾಂಶುಪಾಲೆ, ಕೆನರಾ ಕಾಲೇಜು, ಮಂಗಳೂರು, ಶ್ರೀಮತಿ ಶಶಿಕಲಾ ಸುವರ್ಣ
ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಜೇಶ್ವರ ತಾಲೂಕು, ಶ್ರೀಮತಿ ಅಶ್ವಿನಿ ಎಮ್. ಎಲ್ ರಾಷ್ಟ್ರೀಯ ಮಹಿಳಾ ಮೋರ್ಚಾ ಸದಸ್ಯೆ, ಪ್ರೊ. ಸುಜಾತ ಸರಕಾರಿ ಕಾಲೇಜು ಕಾಸರಗೋಡು, ಶ್ರೀಮತಿ ಜೀನ್ ಲವಿನಾ ಮೊಂತೇರೋ ಅಧ್ಯಕ್ಷರು ಮಂಜೇಶ್ವರ ಗ್ರಾಮ ಪಂಚಾಯತ್, ಶ್ರೀಮತಿ ಕೃಷ್ಣವೇಣಿ ಮುಖ್ಯೋಪಾಧ್ಯಾಯಿನಿ, ಶ್ರೀ ವಿದ್ಯಾವರ್ಧಕ ಜಿ.ಎಸ್.ಎಸ್ ಕೊಡ್ಲಮೊಗರು, ಶ್ರೀಮತಿ ರೇಖಾ ಪ್ರೇಮ್ ದಾಸ್ ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 8.30 ಕ್ಕೆ ಶ್ರೀ ಕೀರ್ತೇಶ್ವರ ಮಹಿಳಾ ಮಂಡಳಿಯವರಿಂದ ನೃತ್ಯ ಸಂಗಮ, ನಾಟ್ಯ ಮಯೂರ ಡಾ. ಶ್ರೀಕಾಂತ್ ಕೊಂಡಾಣ ನೇತೃತ್ವದ ನಾಲ್ವಡಿ ಕೃಷ್ಣರಾಜ ಒಡೆಯರು ಪ್ರಶಸ್ತಿ ವಿಜೇತ ತಂಡ ಯಶಸ್ವಿ ಡಾನ್ಸ್ ಗ್ರೂಪ್ ಬೇರಿಕೆ ರಕ್ತಶ್ವರಿ ಕಟ್ಟೆ ಇವರಿಂದ "ನೃತ್ಯ ವೈಭವ" ನಡೆಯಲಿದೆ. 05 ರಂದು ಬುಧವಾರ ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹೋಮ, ಅಂಕುರ ಪೂಜೆ, ತತ್ವ ಹೋಮ, ತತ್ವಕಲಶ, ಚಂಡಿಕಾಯಾಗ, ನಾಗದೇವರಿಗೆ ಕಲಶಾಭಿಷೇಕ, ಬ್ರಹ್ಮಕಲಶ ಮಂಡಲ ರಚನೆ, ಮಹಾಪೂಜೆ, ಅನ್ನಸಂತರ್ಪಣೆ, ಬೆಳಿಗ್ಗೆ ಗಂಟೆ 10.00 ಕ್ಕೆ ಶ್ರೀ ಶಾಸ್ತಾವೇಶ್ವರ ಭಜನಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ,
ಸಂಜೆ ಗಂಟೆ 6.00 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಎಡನೀರು ಜಗದ್ಗುರು ಶ್ರೀ ಶಂಕರಾಚಾರ್ಯ ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀವರ್ಚನ ನೀಡಲಿರುವರು. ಮಂಜೇಶ್ವರ ಶ್ರೀ ಶನೈಶ್ಚರ ಮಂದಿರದ
ಧರ್ಮದರ್ಶಿ ಶ್ರೀ ಕೃಷ್ಣ ಭಟ್ ದೀಪ ಪ್ರಜ್ವಲನೆ, ಶ್ರೀ ವಿಶ್ವನಾಥ್ ಪೊಯ್ಯಕಂಡ ಆಡಳಿತ ಮೋಕೇಸರರು, ಶ್ರೀ ಕೀರ್ತೇಶ್ವರ ಸದಾಶಿವ ದೇವಸ್ಥಾನ ಸಮಾರಂಭದ ಅಧ್ಯಕ್ಷತೆ ವಹಿಸುವರು. ಶ್ರೀ ವಸಂತ ಪೈ ಉದ್ಯಮಿ ಬದಿಯಡ್ಕ, ಶ್ರೀ ಸೋಮಶೇಖರ್ ಎಮ್. ಎನ್. ಉಪಾಧ್ಯಕ್ಷರು, ಶ್ರೀ ಕ್ಷೇತ್ರ ಕನಿಲ, ಶ್ರೀ ಕೆ.ಆರ್. ಜಯಾನಂದ ಅಧ್ಯಕ್ಷರು ತುಳು ಅಕಾಡೆಮಿ, ಕೇರಳ ಸರಕಾರ, ಶ್ರೀ ಸೂರ್ಯನಾರಾಯಣ ಗಾಣಿಗ ಅಧ್ಯಕ್ಷರು ಉಡುಪಿ ಜಿಲ್ಲಾ ಸೋಮ ಕ್ಷತ್ರಿಯ ಗಾಣಿಗ ಸಂಘ ಬಾರ್ಕೂರು, ಶ್ರೀ ರಾಮಚಂದ್ರ ಬಡಾಜೆ ಅಧ್ಯಕ್ಷರು ಮಂಜೇಶ್ವರ ಸರ್ವಿಸ್ ಕೋ ಆಪ್ ಬ್ಯಾಂಕ್, ಶ್ರೀ ವೆಂಕಟೇಶ್ ಅಧ್ಯಕ್ಷರು ಕರಾವಳಿ ಕ್ರೆಡಿಟ್ ಕೋ ಆಪ್ ಸೊಸೈಟಿ, ಮಂಗಳೂರು, ಶ್ರೀ ಅನಿಲ್ ಕುಮಾರ್ ಎಮ್ ಜನರಲ್ ಮ್ಯಾನೆಜರ್ ಕರಾವಳಿ ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ, ಮಂಗಳೂರು, ಶ್ರೀ ವಿಶ್ವನಾಥ ಮಡಿವಾಳ ಪಾಲ್ ಅಧ್ಯಕ್ಷರು, ಬಂಟರ ಸಂಘ, ಮಂಜೇಶ್ವರ, ಶ್ರೀ ಹರಿರಾಮಚಂದ್ರ ಅಧ್ಯಕ್ಷರು ಗಾಣಿಗ ಸಂಘ ಪುತ್ತೂರು ತಾಲೂಕು, ಶ್ರೀ ಸಂಜೀವ ಅಡ್ಯಾರ್ ಅಧ್ಯಕ್ಷರು ಸಫಲ ಸೌಹಾರ್ದ ಸಹಕಾರಿ ಸಂಘ, ಗುರುಪುರ ಕೈಕಂಬ, ಶ್ರೀ ಕಿರಣ್ ಶೆಟ್ಟಿ ಆಡಳಿತ ಮೋಕೇಸರರು ಉದ್ಯಾವರ ಮಾಡ, ಶ್ರೀ ನರಸಪ್ಪ ಸಪಲ್ಯ (ಪ್ರಭಾರ ಅಧ್ಯಕ್ಷರು ಗಾಣಿಗ ಸಂಘ ಬಂಟ್ವಾಳ ತಾಲೂಕು, ಶ್ರೀ ಶಶಿಧರ್ ಶೆಟ್ಟಿ ಆಡಳಿತ ಮೋಕೇಸರರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಮ್ಮದ ಮನೆ, ಮಂಜೇಶ್ವರ, ಶ್ರೀ ರಮೇಶ್ ಎಸ್. ಮಾಜಿ ಅಧ್ಯಕ್ಷರು ಮಂಗಳೂರು ಪ್ರಾಧಿಕಾರ, ಶ್ರೀ ವಿಶ್ವನಾಥ ಶೆಟ್ಟಿ ಅಧ್ಯಕ್ಷರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಕುಂಜತ್ತೂರು, ಶ್ರೀ ರಾಜೇಶ್ ಉಳಿಯ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ, ಶ್ರೀ ಧರ್ಮರಸರ ಕ್ಷೇತ್ರ, ಉಳಿಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕೀರ್ತಿ ಕಲಾ ವೃಂದ ಕೀರ್ತೇಶ್ವರ
ಪಾಯೋಜಕತ್ವದಲ್ಲಿ ಶ್ರೀ ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ 'ಶಿವದೂತ ಗುಳಿಗೆ' ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ. 06 ರಂದು ಗುರುವಾರ ಬೆಳಿಗ್ಗೆ ಗಂಟೆ 6.00 ಕ್ಕೆ ಅಂಕುರ ಪೂಜೆ, ಗಣಪತಿ ಹೋಮ, ಗಂಟೆ 7.56 ರ ಮೀನ ಲಗ್ನದಲ್ಲಿ ಮಹಾಗಣಪತಿ, ಶಾಸ್ತಾ ದೇವರಿಗೆ ಬ್ರಹ್ಮಕಲಶಾಭಿಷೇಕ, 11.10 ಕ್ಕೆ ವೃಷಭ ಲಗ್ನದಲ್ಲಿ ಶ್ರೀ ದುರ್ಗಾ ದೇವಿಯ ಬ್ರಹ್ಮಕಲಶಾಭಿಷೇಕ, ಶ್ರೀ ಶಿವ ಸಹಸ್ರನಾಮಾವಳಿ ಯಾಗ, ರಕೇಶ್ವರಿ ದೈವಗಳ ಕಲಶಾಭಿಷೇಕ, ಮಹಾಪೂಜೆ ಅನ್ನಸಂತರ್ಪಣೆ, 12.00 ಕ್ಕೆ ಶ್ರೀ ಗುರುಕೃಪ ಭಜನಾ ಮಂಡಳಿ, ಉಳಿಯತಡ್ಕ, ಮಧೂರು, ಕಾಸರಗೋಡು ಇವರಿಂದ ಭಜನಾ ಸಂಕೀರ್ತನೆ, ಸಂಜೆ 5 ಕ್ಕೆ ಬ್ರಹ್ಮ ಕಲಶಾಧಿವಾಸ, ಅಧಿವಾಸ ಹೋಮ, ದುರ್ಗಾಪೂಜೆ, ಕುಂಭೇಶ ಕರ್ಕರಿ ಪೂಜೆ, ರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶ್ರೀ ಶ್ರೀ ವಿಜಯಾನಂದ ಸ್ವಾಮೀಜಿ, ಬೈಲಹೊಂಗಲ ಆಶೀವರ್ಚನ
ನೀಡಲಿರುವರು. ಶ್ರೀ ರಾಘವೇಂದ್ರ ಶಾಸ್ತ್ರಿಗಳು ಶಿಲೆ ಶಿಲೆ ಮೋಕ್ರೇಸರರು, ಶ್ರೀ ಕ್ಷೇತ್ರ ಶರವು, ಮಂಗಳೂರು, ಬ್ರಹ್ಮಶ್ರೀ ವೇದ ಮೂರ್ತಿ ಸುಬ್ರಮಣ್ಯ ಅಡಿಗ ಅನುವಂಶಿಕ ಮೊಕ್ತೇಸರರು ಶ್ರೀ ಮೂಕಾಂಬಿಕ ಕ್ಷೇತ್ರ ಕೊಲ್ಲೂರು, ಶ್ರೀ ರವೀಶ್ ಭಟ್, ಪ್ರಧಾನ ಅರ್ಚಕರು ಶ್ರೀ ಕೀರ್ತೇಶ್ವರ ಸದಾಶಿವ ದೇವಸ್ಥಾನ ದೀಪ ಪ್ರಜ್ವಲನೆಗೈಯಲಿರುವರು. ಶ್ರೀ ಸತೀಶ್ ಉಚ್ಚಿಲ ಕೋಶಾಧಿಕಾರಿ, ಬ್ರಹ್ಮಕಲಶೋತ್ಸವ ಸಮಿತಿ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ಶ್ರೀ ರಾಜಮೋಹನ್ ಉಣ್ಣಿತ್ತಾನ್ ಮಾನ್ಯ ಲೋಕಸಭಾ ಸದಸ್ಯರು, ಕಾಸರಗೋಡು ಜಿಲ್ಲೆ, ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟಿ ಮಾನ್ಯ ಲೋಕಸಭಾ ಸದಸ್ಯರು, ದ.ಕ.ಜಿಲ್ಲೆ, ಶ್ರೀ ಮೋಹನ್ ಶೆಟ್ಟಿ, ತೂಮಿನಾಡು ಗೌರವಾಧ್ಯಕ್ಷರು ಬ್ರಹ್ಮ ಕಲಶೋತ್ಸವ ಸಮಿತಿ, ಶ್ರೀ ಪ್ರಕಾಶ್ ಕುಂಪಲ ಯುವ ಉದ್ಯಮಿ, ಬೆಂಗಳೂರು, ಶ್ರೀ ಲಾಂಚು ಲಾಲ್ ತೊಕ್ಕೊಟ್ಟು ಚಲನ ಚಿತ್ರ ನಿರ್ಮಾಪಕರು, ಅಸ್ತ್ರಗ್ರೂಪ್, ಶ್ರೀ ಗೋಪಾಲ ಶೆಟ್ಟಿ, ಅರಿಬೈಲು ಧಾರ್ಮಿಕ ಮುಂದಾಳು ಮತ್ತು ಉದ್ಯಮಿ, ಶ್ರೀ ನಾರಾಯಣ ಹೆಗ್ಡೆ, ಕೋಡಿಬೈಲು ಅಧ್ಯಕ್ಷರು, ಐಲ ದುರ್ಗಾಪರಮೇಶ್ವರಿ ಕ್ಷೇತ್ರ, ಶ್ರೀ ನವೀನ್ ರಾಜ್ ನ್ಯಾಯವಾದಿ, ಕಾಸರಗೋಡು, ಶ್ರೀ ಪದ್ಮನಾಭ, ಕಡಪ್ಪರ ಅಧ್ಯಕ್ಷರು, ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ, ಶ್ರೀ ಕೇಶವ ಮಾಟುಂಗ ಉದ್ಯಮಿ ಮುಂಬಯಿ, ಶ್ರೀ ಶಿವರಾಮ ಉದ್ಯಮಿ ಮುಂಬಯಿ, ಮುಖ್ಯ ಅತಿಥಿಗಳಾಗಿರುವರು. ರಾತ್ರಿ 8.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ
ಕೂಲ್ ಗೈಸ್ ಕೀರ್ತೇಶ್ವರ
ಪ್ರಾಯೋಜಕತ್ವದಲ್ಲಿ ಚೈತನ್ಯ ಕಲಾವಿದರು, ಬೈಲೂರು ಇವರಿಂದ 'ಅಷ್ಟಮಿ' ಎಂಬ ತುಳು ಸಾಂಸಾರಿಕ ನಾಟಕ ಪ್ರದರ್ಶನಗೊಳ್ಳಲಿದೆ. 07 ರಂದು ಶುಕ್ರವಾರ ಬೆಳಿಗ್ಗೆ ಗಂಟೆ 6.00 ಕ್ಕೆ ಗಣಪತಿ ಹೋದು, ಗಂಟೆ 8.59 ರ ಮೀನ ಲಗ್ನದಲ್ಲಿ ಶ್ರೀ ಸದಾಶಿವ ದೇವರಿಗೆ 505 ಬ್ರಹ್ಮ ಕಲಶಾಭಿಷೇಕ ಪ್ರಸನ್ನ ಪೂಜೆ 10.30 ಕ್ಕೆ ಮಹಾಪೂಜೆ, ಶ್ರೀ ದೇವರ ಬಲಿ, ಪಲ್ಲಪೂಜೆ, ರಾಜಾಂಗಣ ಪ್ರಸಾದ ವಿತರಣೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಗಂಟೆ 12.00 ಕ್ಕೆಅಂತರ್ ರಾಷ್ಟ್ರೀಯ ಖ್ಯಾತಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಯರಾಮ ಕೆ. ಮತ್ತು ಬಳಗ ಇವರಿಂದ ಸ್ಯಾಕ್ಸೋಪೋನ್ ವಾದನ, ಮಧ್ಯಾಹ್ನ ಗಂಟೆ 1.00 ಕ್ಕೆ ಓಜ ಸಾಹಿತ್ಯ ಕೂಟ, ಬಂಗ್ಲ ಮಂಜೇಶ್ವರ ಇವರಿಂದ
ಭಜನಾ ಸಂಕೀರ್ತನೆ, ಸಂಜೆ ಗಂಟೆ 7.00 ಕ್ಕೆ ಶ್ರೀ ಸದಾಶಿವ ದೇವರ ಉತ್ಸವ ಬಲಿ ಹೊರಡುವುದು, ವಸಂತ ಕಟ್ಟೆಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 30 ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಂ ದಕ್ಷಿಣ ಗಾಣಗಾಪುರ ಒಡಿಯೂರು, ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಪೂರ್ಣಾನಂದ ಪುರಿ, ಮಹಾ ಸ್ವಾಮೀಜಿ ಶ್ರೀ ಕ್ಷೇತ್ರ ಶೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠ, ಬೆಂಗಳೂರು ಆಶೀವರ್ಚನ ನೀಡಲಿರುವರು. ಶ್ರೀ ಸದಾಶಿವ ಶೆಟ್ಟಿ ಕುಳೂರು ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಉದ್ಯಮಿ ದೀಪ ಪ್ರಜ್ವಲನೆಗೈಯಲಿರುವರು. ಪೂಜ್ಯಶ್ರೀ ದೇವು ಮೂಲ್ಯಣ್ಣ, ಧರ್ಮದರ್ಶಿಗಳು ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರ ಉಳ್ಳಾಲ ಶುಭಾಶಂಶನೆಗೈಯಲಿರುವರು.ಶ್ರೀ ಕೆ.ಕೆ. ಶೆಟ್ಟಿ ಆರ್ಯಭಟ ಪ್ರಶಸ್ತಿ ವಿಜೇತ ಉದ್ಯಮಿ, ಅಹಮ್ಮದ್ ನಗರ, ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ, ಶ್ರೀ ಕೀರ್ತೇಶ್ವರ ಸದಾಶಿವ ದೇವಸ್ಥಾನ, ಮಂಜೇಶ್ವರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು. ಶ್ರೀ ರಂಗ ಐತಾಳ್, ಜ್ಯೋತಿಷ್ಯರು, ಶ್ರೀ ಶ್ರೀನಿವಾಸ್ ಸಪಲ್ಯ ಅಧ್ಯಕ್ಷರು ಸಾಪಲ್ಯ ಸೇವಾ ಸಮಿತಿ, ಮುಂಬಯಿ, ಶ್ರೀ ರಾಜಶೇಖರ್ ಗಾಣಿಗ ಅಧ್ಯಕ್ಷರು ಅಖಿಲ ಕರ್ನಾಟಕ ಗಾಣಿಗ ಸಂಘ, ಬೆಂಗಳೂರು, ಶ್ರೀ ಸಂಜಯ್ ರಾವ್ ಮ್ಯಾನಜಿಂಗ್ ಡೈರೆಕ್ಟರ್, ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್, ಶ್ರೀ ಭಾಸ್ಕರ ಎಡಪದವು ನಿರ್ದೇಶಕರು ಅಖಿಲ ಕರ್ನಾಟಕ ಗಾಣಿಗ ಸಂಘ, ಬೆಂಗಳೂರು, ಶ್ರೀ ಮಾಧವ ಮಾವೆ ಉದ್ಯಮಿ ಮತ್ತು ರಾಜಕಾರಣಿ, ಶ್ರೀ ಬಲರಾಮ್ ಭಟ್ ಆಡಳಿತ ಮೊಕ್ತೇಸರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಡಾಜೆ, ಶ್ರೀ ಯು.ಬಿ ಪ್ರಭಾಕರ್ ಆಂಜನೇಯ ಫೈನಾನ್ಸ್, ಮಂಜೇಶ್ವರ, ಶ್ರೀ ಹರಿಶ್ಚಂದ್ರ ಮಂಜೇಶ್ವರ ಉಪಾಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ, ಪ್ರಭಾರ ಅಧ್ಯಕ್ಷರು, ಮಂಜೇಶ್ವರ ತಾಲೂಕು ಗಾಣಿಗ ಯಾನೆ ಸಪಲ್ಯ ಸುಧಾರಕ ಸಂಘ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ರಾತ್ರಿ ಗಂಟೆ 9.00 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಗಾಣಿಗ ಯಾನೆ ಸಪಲ್ಯ ಸುಧಾರಕ ಸಂಘ, ಮಂಜೇಶ್ವರ ಇವರ ಪ್ರಾಯೋಜಕತ್ವದಲ್ಲಿ
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಉರ್ವ ಚಿಲಿಂಬಿ, ಮಂಗಳೂರು ಆಶ್ರಿತ, ಸಾಯಿ ಶಕ್ತಿ ಕಲಾ ಬಳಗ ಇವರಿಂದ "ಜೋಡು ಜೀಟಿಗೆ" ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ. 08 ರಂದು ಶನಿವಾರ ಬೆಳಿಗ್ಗೆ ಗಂಟೆ 8.30 ಕ್ಕೆ ಶ್ರೀ ಭೂತ ಬಲಿ ಉತ್ಸವ ಹೊರಡುವುದು, ದರ್ಶನ ಬಲಿ, ರಾಜಾಂಗಣ ಪ್ರಸಾದ, ಕಲಶಾಭಿಷೇಕ, ಮಧ್ಯಾಹ್ನ 12.30 ಕ್ಕೆ
ಮಹಾಪೂಜೆ ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಬ್ರಹ್ಮಕಲಶೋತ್ಸವದ ಎಲ್ಲಾ ದಿನಗಳ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಭ್ರಾಮರಿ ಭಕ್ತಿ ಟಿವಿ ಯೂಟ್ಯೂಬ್ ಚಾನೆಲ್ ನಲ್ಲಿ https://youtube.com/@bharamaribhakthitv?si=lJ-FtB4nAG-EKN3B ವೀಕ್ಷಿಸಬಹುದಾಗಿದೆ.


