ಕುಂಬಳೆ ನಾರಾಯಣ ಮಂಗಲಂ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ಫೆಬ್ರವರಿ 27 ಗುರುವಾರದಿಂದ ಮಾರ್ಚ್ 02 ರವಿವಾರದ ತನಕ ಐದು ವರ್ಷಗಳಿಗೊಮ್ಮೆ ನಡೆಯುವ "ನಡಾವಳಿ ಮಹೋತ್ಸವ".
ಫೆಬ್ರವರಿ 25, 2025
0
ಕುಂಬಳೆ ನಾರಾಯಣ ಮಂಗಲಂ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ಫೆಬ್ರವರಿ 27 ಗುರುವಾರದಿಂದ ಮಾರ್ಚ್ 02 ರವಿವಾರದ ತನಕ ಐದು
ವರ್ಷಗಳಿಗೊಮ್ಮೆ ನಡೆಯುವ "ನಡಾವಳಿ ಮಹೋತ್ಸವ".
ಕುಂಬಳೆ: ನಾರಾಯಣ ಮಂಗಲಂ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ಫೆಬ್ರವರಿ 27 ಗುರುವಾರದಿಂದ ಮಾರ್ಚ್ 02 ರವಿವಾರದ ತನಕ ಉಪ್ಪಳ, ಕೊಂಡೆವೂರು ಶ್ರೀಶ್ರೀಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳ ಶುಭಾಶೀರ್ವಾದದೊಂದಿಗೆ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಾಲುಬೀಡು ಪ್ರಕಾಶ ಕಡಮಣ್ಣಾಯರ ದಿವ್ಯ ಕಾರ್ಮಿಕತ್ವದಲ್ಲಿ ಐದು ವರ್ಷಗಳಿಗೊಮ್ಮೆ ನಡೆದುಕೊಂಡು ಬರುತ್ತಿರುವ ನಡಾವಳಿ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಯಲಿದೆ ಎಂದು ಕ್ಷೇತ್ರದಲ್ಲಿ ಇಂದು ಅಪರಾಹ್ನ ಕರೆದ ಪತ್ರಿಕಾಗೋಷ್ಠಿಯಲ್ಲಿ ಉತ್ಸವ ಸಮಿತಿ ಸಂಘಟಕರಾದ ರವಿ ನಾಯ್ಕಪ್ ಮಾಹಿತಿ ನೀಡಿದರು. ಪ್ರತೀ ದಿನ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅಲ್ಲದೆ ಬೆಳಗ್ಗೆ ಮದ್ಯಾಹ್ನ, ಸಂಜೆ, ರಾತ್ರಿ ವೇಳೆ ಸರ್ವ ಭಕ್ತರಿಗೆ ಉಪಹಾರ, ಅನ್ನ ಸಂತರ್ಪಣೆ ವಿತರಣೆಗೊಳ್ಳಲಿದೆ ಎಂದು ತಿಳಿಸಿದ್ದಾರೆ. 27 ರಂದು ಬೆಳಗ್ಗೆ ಗಂಟೆ 7:30 ಕ್ಕೆ ಶ್ರೀಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಾಲುಬೂಡು ಪ್ರಕಾಶ ಕಡಮಣ್ಣಾಯ ಅವರಿಗೆ ಪೂರ್ಣಕುಂಭ ಸ್ವಾಗತ. 8:00 ಸಾಮೂಹಿಕ ಪ್ರಾರ್ಥನೆ, 12 ತೆಂಗಿನಕಾಯಿ ಗಣಪತಿ ಹೋಮ 9:00 : ನವಕಾಭಿಷೇಕ, ದೈವಗಳಿಗೆ ತಂಬಿಲ, 10:00 ಉಗ್ರಾಣ ಮುಹೂರ್ತ, 10:30 ಭಜನೆ : ಶ್ರೀ ಚೀರುಂಬಾ ಭಗವತಿ ಮಹಿಳಾ ಸಮಿತಿ, ನಾರಾಯಣಮಂಗಲ, 11:15 : ಭಜನೆ : ಶ್ರೀ ಚೀರುಂಬಾ ಭಗವತೀ ಮಹಿಳಾ ಸಮಿತಿ, ತೆರುವತ್, ಕಾಸರಗೋಡು, ಮಧ್ಯಾಹ್ನ 12:00 ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ 2:00 ರಿಂದ : ಹರಿಕಥಾ ಸತ್ಸಂಗ, ಸಾಯಂಕಾಲ 5 ಕ್ಕೆ ಶ್ರೀಮತಿ ಧನ್ಯಶ್ರೀ ಎನ್.ಎಸ್. ಪಡಾರು (ಕೀರ್ತನ ಕುಟೀರ) ಮತ್ತು ಬಳಗ, 5.00 : ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಸಹಿತ ಆಕರ್ಷಕ ಶೋಭಾಯಾತ್ರೆಯು ವಿವಿಧ ಸ್ತಬ್ಧಚಿತ್ರ, ಬ್ಯಾಂಡು - ವಾದ್ಯಘೋಷ, ವೇಷಭೂಷಣಗಳೊಂದಿಗೆ ಹೊರಟು ರಾತ್ರಿ 8:30ಕ್ಕೆ ಶ್ರೀಕ್ಷೇತ್ರಕ್ಕೆ ತಲುಪುವುದು (ದಾರಿಯುದ್ದಕ್ಕೂ ವಿವಿಧ ಸಂಘ ಸಂಸ್ಥೆಗಳ ಹೊರೆಕಾಣಿಕೆಗಳು ಮೆರವಣಿಗೆಯೊಂದಿಗೆ ಸೇರಿಕೊಳ್ಳುವುದು) ರಾತ್ರಿ 8:00 : ಪೂಜೆ, ಪ್ರಸಾದ ವಿತರಣೆ, 8:30 : ಅನ್ನಸಂತರ್ಪಣೆ, 'ತುಳುವೆರೆ ಉಡಲ್' ಜೋಡುಕಲ್ಲು ಇದರಿಂದ ತುಳು ವಿನೂತನ ಶೈಲಿಯ ನಾಟಕ 'ತನಿಯಜ್ಜೆ' ಸೇವಾ ಪ್ರಾಯೋಜಕರು : ಶ್ರೀ ಚೀರುಂಬಾ ಭಗವತೀ ಕ್ಷೇತ್ರ, ನಾರಾಯಣಮಂಗಲ ಇದರ ಕಾಸರಗೋಡು ಪ್ರಾದೇಶಿಕ ಸಮಿತಿ. 28-02-2025 ಬೆಳಗ್ಗೆ ಗಂಟೆ 9:00 : ಮಹಾ ಚಂಡಿಕಾ ಹೋಮ ಆರಂಭ, ಮಧ್ಯಾಹ್ನ 12:00 : ಹೋಮ ಪೂರ್ಣಾಹುತಿ, ಸೇವಾ ಪ್ರಾಯೋಜಕರು : ಡಾ| ಕೆ. ಮೋಹನದಾಸ್, ಬೆಂಗಳೂರು1.00 : ಮಹಾಪೂಜೆ, ಪ್ರಸಾದ ವಿತರಣೆ, 1:30 : ಅನ್ನಸಂತರ್ಪಣೆ, ಅಪರಾಹ್ನ 2:00ರಿಂದ : ಭಜನಾ ಸಂಧ್ಯಾ : ಶ್ರೀ ಶಾಸ್ತಾ ಬಳಗ, ನಾಯ್ಕಾಪು, 5:00 ಮೆಗಾ ತಿರುವಾದಿರ ನೃತ್ಯ ಪ್ರದರ್ಶನ (ಸುಮಾರು 150ರಷ್ಟು ಮಹಿಳೆಯರಿಂದ) ಶ್ರೀಮತಿ ಸುಶುಪ್ತಿ ಅನಿಲ್ ನೇತೃತ್ವದಲ್ಲಿ ಶ್ರೀ ಚೀರುಂಬಾ ಭಗವತೀ ಮಹಿಳಾ ಸಮಿತಿ, ನಾರಾಯಣಮಂಗಲ ಇವರಿಂದ, 5:30 : ಲಲಿತಾ ಸಹಸ್ರ ನಾಮಾರ್ಚನೆ ಶ್ರೀ ಚೀರುಂಬಾ ಭಗವತೀ ಮಹಿಳಾ ಸಮಿತಿಯವರಿಂದ, 7:00ರಿಂದ : 'ಲಕುಮಿ' ತಂಡದ ಕುಸಾಲ ಕಲಾವಿದರು, ಮಂಗಳೂರು ಇವರಿಂದ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ವಿಭಿನ್ನ ಅಭಿನಯದ ಹಾಸ್ಯಮಯ ನಾಟಕ "ಒರಿಯಾಂಡಲಾ ಸರಿಬೋಡು" ಸೇವಾ ಪ್ರಾಯೋಜಕರು : ಶ್ರೀ ಭಗವತೀ ಫ್ರೆಂಡ್ಸ್ ಕ್ಲಬ್, ನಾರಾಯಣಮಂಗಲಂ, ರಾತ್ರಿ 8:00 : ಪೂಜೆ, ಪ್ರಸಾದ ವಿತರಣೆ, 8:30 : ಅನ್ನಸಂತರ್ಪಣೆ, 01-03-2025 ಬೆಳಗ್ಗೆ ಗಂಟೆ 10:00 : ಭಜನೆ : ಶ್ರೀ ಚೀರುಂಬಾ ಭಗವತೀ ಮಹಿಳಾ ಸಮಿತಿ, ಚೆರುಗೋಳಿ, ಮಂಗಲ್ಪಾಡಿ, 10:45 : ಭಜನೆ : ಕುಕ್ಕಾಡಿ ಕ್ಷೇತ್ರ, ಅಶೋಕ ನಗರ, ಮಂಗಳೂರು, ಮಧ್ಯಾಹ್ನ 12:00 : ಮಹಾಪೂಜೆ, ಪ್ರಸಾದ ವಿತರಣೆ, 1:00 ಅನ್ನಸಂತರ್ಪಣೆ, ಅಪರಾಹ್ನ 1.30 ರಿಂದ : ಕರ್ನಾಟಕ ಶಾಸ್ತ್ರೀಯ ಸಂಗೀತ ವಿದುಷಿ ಸ್ಮಿತಾ ನಿತ್ಯಾನಂದ ಬೆಂಗಳೂರು ಮತ್ತು ಬಳಗ, ಸೇವಾ ಪ್ರಾಯೋಜಕರು :ಮಧು ಬೇಬಿಶೇಖರ್, ಬೆಂಗಳೂರು ಅಪರಾಹ್ನ 3:30 : ಶ್ರೀ ದಾನಮಾರ್ತಾಂಡವರ್ಮ ರಾಜ XIII ಯಾನೆ ರಾಮಂತರಸುಗಳು ಮಾಯಿಪ್ಪಾಡಿ ಆರಮನೆ ಅವರಿಗೆ ಪೂರ್ಣಕುಂಭ ಸ್ವಾಗತ, 4:00: ಧಾರ್ಮಿಕ ಸಭೆ ನಡೆಯಲಿದ್ದು, ಸ್ವಾಗತ : ಶ್ರೀ ಎಂ. ಪ್ರಮೋದ್ ಕುಮಾರ್ ಅತ್ತಾವರ, ಮಂಗಳೂರು, ಅಧ್ಯಕ್ಷರು, ಉತ್ಸವ ಸಮಿತಿ, ಪ್ರಾಸ್ತಾವಿಕ : ಶ್ರೀ ಏನ್ ಪ್ರಭಾಕರ ಕೂಡ್ಲು, ಅಧ್ಯಕ್ಷರು, ಕ್ಷೇತ್ರ ಆಡಳಿತ ಸಮಿತಿ, ಅಧ್ಯಕ್ಷತೆ : ಡಾ| ಕೆ. ಮೋಹನದಾಸ್, ಬೆಂಗಳೂರು, ಗೌರವಾಧ್ಯಕ್ಷರು, ಉತ್ಸವ ಸಮಿತಿ, ಧಾರ್ಮಿಕ ಭಾಷಣ : ಶ್ರೀ ಕೆ. ಬಾಲನ್ ಮಾಸ್ತರ್, ಪರಪ್ಪ, ಸನ್ಮಾನಿಸುವವರು ಡಾ. ಕೆ ನಾರಾಯಣ, ಬೆಂಗಳೂರು, ರಾಜ್ಯ ಸಭಾ ಸದಸ್ಯರು, ಸನ್ಮಾನ : ಶ್ರೀ ಸದಾಶಿವ ಶೆಟ್ಟಿ, ಕೂಳೂರು, ಕನ್ಯಾನ (ಹಿರಿಯ ಧಾರ್ಮಿಕ ಮುಖಂಡರು, ಸಮಾಜ ಸೇವಕರು, 2024ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ ವಿಜೇತರು) ಶ್ರೀ ಕೆ.ಕೆ. ಶೆಟ್ಟಿ, ಕುತ್ತಿಕ್ಕಾರು (ಹಿರಿಯ ಧಾರ್ಮಿಕ ಮುಖಂಡರು, ಸಮಾಜ ಸೇವಕರು, 2024ರ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು), ಕ್ಷೇತ್ರಾಭಿವೃದ್ಧಿಗಾಗಿ ಅಹರ್ನಿಶಿ ದುಡಿದ ಹಿರಿಯ ಸದಸ್ಯರಿಗೆ ಗೌರವಾಭಿನಂದನೆ : ಶ್ರೀ ಕೆ. ರಾಮಚಂದ್ರ ಸೋಮೇಶ್ವರ, ಶ್ರೀ ಎಂ. ನಾರಾಯಣ ಮೈಲಿಕಲ್ಲು, ಶ್ರೀ ಚಂದ್ರಶೇಖರ ಕುಂಟಿಂಗೇರಡ್ಕ, ಶ್ರೀ ಬಿ.ಪಿ ನಾರಾಯಣ ಮಂಗಳೂರು, ಗೌರವ ಉಪಸ್ಥಿತಿ : ಶ್ರೀ ದಾನಮಾರ್ತಾಂಡವರ್ಮ ರಾಜ XIII ಯಾನೆ ರಾಮಂತರಸುಗಳು, ಮಾಯಿಪ್ಪಾಡಿ ಅರಮನೆ, ಬ್ರಹ್ಮಶ್ರೀ ಉಳಾಲುಬೂಡು ಪ್ರಕಾಶ ಕಡಮಣ್ಣಾಯ, ಶ್ರೀಕ್ಷೇತ್ರದ ತಂತ್ರಿವರ್ಯರು ಶ್ರೀ ಚಂದ್ರಶೇಖರ ಕೆ., ಎಳೆ ಚೆಟ್ಟಿಯಾರ್, ಶ್ರೀಕ್ಷೇತ್ರ, ಅತಿಥಿಗಳು : ನ್ಯಾಯವಾದಿ ಬಿ. ಸುಬ್ಬಯ್ಯ ರೈ, ಇಚ್ಚಂಪಾಡಿ ಮನೆ, ಶ್ರೀ ಕೆ. ಲಕ್ಷ್ಮಣ ನೋಂಡ, ಕೋಟೆಕುಂಜ ಮನೆ, ಶ್ರೀ ಬಿ. ಗೋಪಾಲಕೃಷ್ಣ ಪೈ, ಬದಿಯಡ್ಕ, ಧಾರ್ಮಿಕ ಮುಖಂಡರು, ಶ್ರೀ ವಿ.ವಿ. ರಾಮಚಂದ್ರನ್, ಅಧ್ಯಕ್ಷರು, 14 ನಗರ ಕ್ಷೇತ್ರ ಸಂರಕ್ಷಣ, ಶ್ರೀ ಕ್ಷಿತಿ ಮದ್ದೂರು, ಆಡಳಿತ ಮೊತ್ತೇಸರರು, ಕುಕ್ಕಾಡಿ ಕ್ಷೇತ್ರ ಶ್ರೀ ಹರಿಪ್ರಸಾದ್ ಎಂ.ಎಸ್. ಅಧ್ಯಕ್ಷರು, ಶ್ರೀ ಚೀರುಂಬಾ ಭಗವತೀ ಕ್ಷೇತ್ರ, ಚಂದನಡ್ಕ, ಕಾಡಗ, ಶ್ರೀ ಹರೀಶ್ ಕೋಟೆಕ್ಕಣಿ ಅಧ್ಯಕ್ಷರು, ಶ್ರೀ ಚೀರುಂಬಾ ಭಗವತೀ ಕ್ಷೇತ್ರ, ತೆರುವತ್, ಶ್ರೀ ಕೆ.ಪಿ. ನಾರಾಯಣ ಪಟ್ಲ ಅಧ್ಯಕ್ಷರು, ಶ್ರೀ ಚೀರುಂಬಾ ಭಗವತೀ ಕ್ಷೇತ್ರ, ಚೆರುಗೋಳಿ, ಶ್ರೀ ಐತ್ತಪ್ಪ ಕುಲಾಲ್ ಅಧ್ಯಕ್ಷರು, ಶ್ರೀ ಚೀರುಂಬಾ ಭಗವತೀ ಭಜನಾ ಮಂಡಳಿ, ಶ್ರೀಮತಿ ಗುಲಾಬಿ ಲಕ್ಷ್ಮಣ, ಅಧ್ಯಕ್ಷೆ, ಶ್ರೀ ಚೀರುಂಬಾ ಭಗವತೀ ಮಹಿಳಾ ಸಮಿತಿ, ಡಾ| ಮಂಜುನಾಥ ಶೆಟ್ಟಿ, ಯುನೈಟೆಡ್ ಹಾಸ್ಪಿಟಲ್, ಡಾ| ಸಂಧ್ಯಾ ಪ್ರದೀಪ್, ಯು.ಕೆ., ಶ್ರೀಮತಿ ಸರೋಜಿನಿ ಗೋವರ್ಧನ್, ಮಂಗಳೂರು, ಧನ್ಯವಾದ : ಶ್ರೀ ನರೇಂದ್ರ ಬದಿಯಡ್ಕ, ಕಾರ್ಯದರ್ಶಿ, ಕ್ಷೇತ್ರ ಆಡಳಿತ ಸಮಿತಿ, ಕಾರ್ಯಕ್ರಮ ನಿರೂಪಣೆ: ಶ್ರೀ ರವಿ ನಾಯ್ಕಾಪು, ಪ್ರಧಾನ ಸಂಚಾಲಕರು, ಉತ್ಸವ ಸಮಿತಿ, ಸಂಜೆ 6:00: ಕೋಲ್‌ಕಳಿ ನೃತ್ಯ ಪ್ರದರ್ಶನ (ಸುಮಾರು 150ರಷ್ಟು ಮಹಿಳೆಯರಿಂದ) ಶ್ರೀಮತಿ ಸುಶುಪ್ತಿ ಅನಿಲ್ ನೇತೃತ್ವದಲ್ಲಿ ಶ್ರೀ ಚೀರುಂಬಾ ಭಗವತೀ ಮಹಿಳಾ ಸಮಿತಿ, ನಾರಾಯಣಮಂಗಲಂ ಇವರಿಂದ, ನಡಾವಳಿ ಉತ್ಸವ ಆರಂಭ 7:00 : ವಿವಿಧ ಬ್ಯಾಂಡು ವಾದ್ಯಘೋಷಗಳೊಂದಿಗೆ ಭಂಡಾರ ಮೆರವಣಿಗೆ ಶ್ರೀಕ್ಷೇತ್ರದ ಭಂಡಾರ ಮನೆಯಿಂದ ಹೊರ ಹೊರಡುವುದು, 8:00 : ಶ್ರೀಕ್ಷೇತ್ರಕ್ಕೆ ಭಂಡಾರ ಆಗಮನ 8:15ರಿಂದ : ಶ್ರೀ ದೇವಿಯ ನೃತ್ಯೋತ್ಸವ (ಬಾಲಸುಬ್ರಹ್ಮಣ್ಯ ಮುಜುಂಗಾವು ಇವರಿಂದ) 8:30 :ಅನ್ನಸಂತರ್ಪಣೆ, 8:30 ರಿಂದ ರಾಗತರಂಗಿಣಿ (ಅಮೋಘ ಸಂಗೀತ ರಸಮಂಜರಿ) ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಕೆ. ರಮೇಶ್ಚಂದ್ರ ಬೆಂಗಳೂರು ಮತ್ತು ಬಳಗ ಸೇವಾ ಪ್ರಾಯೋಜಕರು : ಶ್ರೀ ಚಿರುಂಬಾ ಭಗವತೀ ಭಜನಾ ಮಂಡಳಿ ನಾರಾಯಣಮಂಗಲಂ ಹಾಗೂ ಯುವ ದೇವಾಂಗ, ಕುಂಬಳೆ ಘಟಕ, ರಾತ್ರಿ 10:30 :ಶ್ರೀ ವಿಷ್ಣುಮೂರ್ತಿ ತೊಡಕಞಿಲ್ 02-03-2025 ಆದಿತ್ಯವಾರ ಪ್ರಾತಃಕಾಲ 2:30 : ಬಲಿಪೂಜೆ ಮತ್ತು ದೇವರ ನೃತ್ಯೋತ್ಸವ (ಬಾಲಸುಬ್ರಹ್ಮಣ್ಯ ಮುಜುಂಗಾವು ಇವರಿಂದ) 5:30 : ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ಪೂರ್ವಾಹ್ನ 8:00 ರಿಂದ 9:00 : ಚಪ್ಪರ ಮದುವೆ ಮತ್ತು ಎಡಞಚಾರ, 10:30 : ಶ್ರೀ ದೇವರ ನೃತ್ಯೋತ್ಸವ (ಶ್ರೀ ಗಿರೀಶ್ ಅಡಿಗ, ಕರಿಚ್ಚೇರಿ ಇವರಿಂದ), 11:00 : ತುಲಾಭಾರ ಸೇವೆ, 11:30 : ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಮಧ್ಯಾಹ್ನ 12:00 : ವಿಷ್ಣುಮೂರ್ತಿ ದೈವ ಮತ್ತು ಶ್ರೀ ದೇವಿಯ ಭೇಟಿ, 1:00ರಿಂದ : ಅನ್ನಸಂತರ್ಪಣೆ, ಅಪರಾಹ್ನ 2:00ರಿಂದ : ಪಿಲಿಚಾಮುಂಡಿ ದೈವದ ಕೋಲ, 2:30ರಿಂದ : ಬಬ್ಬರ್ಯನ ಕೋಲ, ಸಾಯಂ 5:00: ಮೆಗಾ ಕೈಕೊಟ್ಟು ನೃತ್ಯ ಪ್ರದರ್ಶನ, ಸಂಜೆ 7:00ರಿಂದ : ಗುಳಿಗನ ಕೋಲ, ರಾತ್ರಿ 8:30 : ಅನ್ನಸಂತರ್ಪಣೆ, 8:30ರಿಂದ : ವಿವಿಧ ಮನೋರಂಜನಾ ಕಾರ್ಯಕ್ರಮಗಳು ಊರ ಕಲಾವಿದರಿಂದ, 10:00 : ಭಂಡಾರ ನಿರ್ಗಮನ ಮತ್ತು ಉತ್ಸವ ಸಮಾರೋಪ ನಡೆಯಲಿದೆ. ಈ ಬಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಚಂದ್ರ ಶೇಖರ ಕೆ, ಎನ್ ಪ್ರಭಾಕರ ಕೂಡ್ಲು, ನಾರಾಯಣ, ದಯಾನಂದ ನಾಯ್ಕಪ್, ಚಂದ್ರಶೇಖರ ಕುಂಟಗೇರಡ್ಕ, ದೇವದಾಸ್ ಕುಂಟಗೇರಡ್ಕ, ಬಿಎಂ ನರೇಂದ್ರ ಮೊದಲಾದವರು ಉಪಸ್ಥಿತರಿದ್ದರು.



