ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ VEO ವರ್ಗಾವಣೆ ಕೇರಳ ರಾಜ್ಯ ಸರಕಾರದ ಬೇಜವಾಬ್ದಾರಿ - ಬಿಜೆಪಿ.
ಫೆಬ್ರವರಿ 27, 2025
0
ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ VEO ವರ್ಗಾವಣೆ ಕೇರಳ ರಾಜ್ಯ ಸರಕಾರದ ಬೇಜವಾಬ್ದಾರಿ - ಬಿಜೆಪಿ.
ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ ಇದ್ದ ಇಬ್ಬರು Village Extension Officer (VEO) ಒಬ್ಬರು ವರ್ಗಾವಣೆ ಮಾಡಿ , ಮತ್ತೊಬ್ಬರು ಒಂದು ವರ್ಷದ ಸುದೀರ್ಘ ರಜೆಗೆ ಕಳುಹಿಸಿರುವ ತೀರ್ಮಾನ ರಾಜಕೀಯ ಪ್ರೇರಿತವೇ ಎಂದು ಬಿಜೆಪಿ ಮಂಜೇಶ್ವರ ಕೇರಳ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ಪಂಚಾಯತ್ ಆಡಳಿತ ಅವಧಿಯ ಕೊನೆಯ ವರ್ಷ, ಮಾತ್ರವಲ್ಲ ಆರ್ಥಿಕತೆ ವರ್ಷದ ಅಂತಿಮ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಸ್ಥಳೀಯಡಳಿತ ಪಂಚಾಯತ್ ಅಧಿಕಾರಿಗಳನ್ನು, ಕ್ಲಾರ್ಕ್ ಗಳನ್ನು ವರ್ಗಾವಣೆ ಮಾಡುವುದು ಯಾವ ಉದ್ದೇಶದಿಂದ.?, ಇದು ರಾಜಕೀಯ ಪ್ರೇರಿತ ತೀರ್ಮಾನಗಳು, ಹಾಗೂ ಆರ್ಥಿಕ ವರ್ಷದ ಅಂತಿಮ ಹಂತ ದಲ್ಲಿ ಸರಕಾರ ಬೊಕ್ಕಸಕ್ಕೆ ಉಳಿಕೆಗಳು ಇಂತಹ ತೀರ್ಮಾನಗಳನ್ನು ಪಿನರಾಯಿ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ವರ್ಗಾವಣೆ ಮಾಡಿದರೆ ಪರಿಣಾಮವಾಗಿ, ಗ್ರಾಮ ಪಂಚಾಯತಿಗೆ ಬರುವ ಸಾರ್ವಜನಿಕರು ತಮ್ಮ ಅವಶ್ಯಕತೆಗಳನ್ನು ಪೂರ್ಣಗೊಳಿಸಿಕೊಳ್ಳಲು ತೀವ್ರವಾದ ಸಂಕಷ್ಟ ಅನುಭವಿಸುತ್ತಿದ್ದಾರೆ. VEO ಗಳು ಇಲ್ಲದೆ ಇರುವುದರಿಂದ, ಲೈಫ್ ಭವನ ಪದ್ಧತಿ, ಸೇರಿದಂತೆ ಸರಕಾರದ ಎಲ್ಲಾ ಯೋಜನೆಗಳ ಅನುಷ್ಠಾನ, ಹಾಗೂ ಇತರ ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಅನೇಕ ಕೆಲಸಗಳು ಸ್ಥಗಿತಗೊಳ್ಳುತ್ತಿದೆ.
ಜನತೆ ತಮ್ಮ ಅವಶ್ಯಕತೆ ಬಂದು ನಿರಾಸೆ ಯಿಂದ ವಾಪಾಸ್ ಆಗಬೇಕಾದರೆ ಪರಿಸ್ಥಿತಿ. ಪಂಚಾಯತ್ ತಾತ್ಕಾಲಿಕ ಹತ್ತಿರದ ಗ್ರಾಮ ಪಂಚಾಯತ್‌ನ VEO ಯನ್ನು ನಿಯೋಜನೆಯಿಂದ ಕಾರ್ಯ ಆಗುವುದಿಲ್ಲ ತಾತ್ಕಾಲಿಕ ಬಂದವರು ಜವಾಬ್ದಾರಿ ನಿರ್ವಹಣೆ ಮಾಡುವುದಿಲ್ಲ, ಹಾಗೂ ವೇಗವು ಇರುವುದಿಲ್ಲ.
ಆರ್ಥಿಕತೆ ವರ್ಷದ ಕೊನೆಯಲ್ಲಿ
ಅಧಿಕಾರಿಗಳ ವರ್ಗಾವಣೆ ಜನತೆಗೆ ಮಾರಕ ವಾಗಿ ಭಾದಿಸುತ್ತದೆ ಮಾತ್ರವಲ್ಲ ಅಧಿಕಾರಿಗಳು ಎಲ್ಲರೂ ಎದರಂಗದ ಕಾರ್ಮಿಕ ಸಂಘಟನೆ ಯ ವಕ್ತರರಂತೆ ವರ್ತಿಸುತ್ತರೆಂದು
ಎಂದು ಬಿಜೆಪಿ ಹೇಳಿದೆ. ಜನಸಾಮಾನ್ಯರ ದೈನಂದಿನ ಸಮಸ್ಯೆ ಗೆ ಸ್ಪಂದಿಸಬೇಕಾದ ಸರಕಾರ ರಾಜ್ಯದಲ್ಲಿ ವರ್ಗಾವಣೆ ದಂದೆ ಮಾಡಿ ಎಡರಂಗದ ಕಾರ್ಮಿಕ ಸಂಘಟನೆಗಳ ಒತ್ತಡಕ್ಕೆ ಮಣಿಯುತಿದೆ. ಕೂಡಲೇ ಸರಕಾರ, ಜಿಲ್ಲಾ ಸ್ಥಳೀಯಡಳಿತ ಅಧಿಕಾರಿಗಳು ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಸರಕಾರಿ ನೌಕರರ ವರ್ಗಾವಣೆ ಮಾಡದಂತೆ ಬಿಜೆಪಿ ಅಗ್ರಹಿಸಿದೆ.

