ಕಣ್ವತೀರ್ಥ ಮೀನು ಸಂಸ್ಕಾರಣ ಕಾರ್ಖಾನೆಯ ದುರ್ಗಂದ ಹಾಗೂ ಅಸಹನೀಯ ವರ್ತನೆ ವಿರುದ್ಧ ಸ್ಥಳೀಯರೊಂದಿಗೆ ಬಿಜೆಪಿ ನೇತಾರರ ನಿಯೋಗ ಕಾರ್ಖಾನೆಗೆ ದಿಢೀರ್ ಭೇಟಿ. ಪ್ರತಿಭಟನೆಗೆ ಸಿದ್ಧತೆ.
ಫೆಬ್ರವರಿ 21, 2025
0
ಕಣ್ವತೀರ್ಥ ಮೀನು ಸಂಸ್ಕಾರಣ ಕಾರ್ಖಾನೆಯ ದುರ್ಗಂದ ಹಾಗೂ ಅಸಹನೀಯ ವರ್ತನೆ ವಿರುದ್ಧ ಸ್ಥಳೀಯರೊಂದಿಗೆ ಬಿಜೆಪಿ ನೇತಾರರ ನಿಯೋಗ ಕಾರ್ಖಾನೆಗೆ ದಿಢೀರ್ ಭೇಟಿ. ಪ್ರತಿಭಟನೆಗೆ ಸಿದ್ಧತೆ.
ಮಂಜೇಶ್ವರ: ಕಣ್ವತೀರ್ಥ ಸಮೀಪ ಕಾರ್ಯ ನಿರ್ವಹಿಸುವ ಮೀನು ಸಂಸ್ಕಾರಣ ಕಾರ್ಖಾನೆ ದುರ್ಗಂದ ಹಾಗೂ ಅಸಹನೀಯ ವರ್ತನೆಯಿಂದ ಬೇಸತ್ತ ಸ್ಥಳೀಯ ನಾಗರಿಕರ ದೂರಿನ ಮೇರೆಗೆ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ಎಂ.ಎಲ್, ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ ಎಂ, ಮುಖಂಡರಾದ ಯಾದವ ಬಡಾಜೆ, ಲಕ್ಷಣ ಕುಚ್ಚಿಕಾಡ್, ಯತೀರಾಜ್ ಶೆಟ್ಟಿ, ವಿನಯ ಭಾಸ್ಕರ್, ಹಾಗೂ ಸ್ಥಳೀಯರ ಉಪಸ್ಥಿತಿಯಲ್ಲಿ ಇಂದು ಅಪರಾಹ್ನ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಖಾನೆ ಪರಿಸರ ಸಂಪೂರ್ಣ ದುರ್ಗಂಧ ಬೀರುತ್ತಿದ್ದು,
ಕಾರ್ಖಾನೆ ಮಾಲೀಕರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇಲ್ಲದೆ ಇದ್ದಲ್ಲಿ ಕಾರ್ಖಾನೆ ಮಾಲಿಕನ ವಿರುದ್ದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲು ತೀರ್ಮಾನ ಮಾಡಿದ್ದು, ಸೂಕ್ತ ಕ್ರಮ ಜರಗಿಸದಿದ್ದರೆ ಬಿಜೆಪಿ ಖಾರ್ಖಾನೆ ಎದುರಲ್ಲಿ ಪ್ರತಿಭಟನೆ ಮಾಡಲು ತೀರ್ಮಾನಿಸಿದೆ.