ಮೀಯಪದವು ಗ್ರಾಮ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ಧರಣಿ.
ಫೆಬ್ರವರಿ 21, 2025
0
ಮೀಯಪದವು ಗ್ರಾಮ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ಧರಣಿ.
ಮಂಜೇಶ್ನರ : ಕೇರಳದ ಎಡರಂಗ ಸರಕಾರದ ಜನದ್ರೋಹ ಬಜೆಟ್ ಗೆದುರಾಗಿ ಮತ್ತು ಭೂ ತೆರಿಗೆ ಹೆಚ್ಚಳಕ್ಕೆ
ಎದುರಾಗಿ ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ಸೇತೃತ್ವದಲ್ಲಿ ಮೀಯಪದವು ವಿಲೇಜ್ ಆಫೀಸ್ ಧರಣಿ
ಕಾರ್ಯಕ್ರಮ ಜರುಗಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ದಾಮೋದರ ಮಾಸ್ತರ್ ಅವರ ಅಧ್ಯಕ್ಷತೆಯಲ್ಲಿ ಮಾಜೀ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸೋಮಪ್ಪ ಧರಣಿ ಉದ್ಘಾಟಿಸಿದರು. ಕೇರಳದ ಎಡರಂಗ ಸರಕಾರ ಎಲ್ಲಾ
ರಂಗಗಳಲ್ಲಿಯೂ ವಿಫಲವಾಗಿದ್ದು, ಜನದ್ರೋಹ ಬಜೆಟ್ ಅನ್ನು ಸರ್ಕಾರ ಮಂಡಿಸಿರುವುದು ನಿಜಕ್ಕೂ
ಆತಂಕಕಾರಿಯಾಗಿದೆ, ಭೂತರಿಗೆಯನ್ನು ಶೇಕಡ 50ರಷ್ಟು ಹೆಚ್ಚಳ ಮಾಡಿದ ಪಿಣರಾಯಿ ವಿಜಯನ್ ಸರ್ಕಾರ,
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಅಭಿವೃದ್ಧಿ ಯೋಜನೆಗಳನ್ನು, ಸ್ಥಳೀಯಾಡಳಿತ ಸಂಸ್ಥೆಗಳ ಫಂಡನ್ನು
ಕಡಿತಗೊಳಿಸಿದ್ದು, ರೇಷನ್ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲವಾಗಿಸಿದ್ದು, ಇಂತಹ ಜನ ವಿರೋಧಿ
ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ದಿನಗಳು ದೂರವಿಲ್ಲವೆಂದು ಅವರು ಹೇಳಿದರು. ಮಾಜೀ ಜಿಲ್ಲಾ
ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮುಖ್ಯ ಪ್ರಭಾಷಣಗೈದರು. ಕಾರ್ಯಕ್ರಮದಲ್ಲಿ
ಕಾಂಗ್ರೆಸ್ ಮುಖಂಡರಾದ ಸಂಕಬೈಲು ಸತೀಶ್ ಅಡಪ್ಪ, ಬಿ.ಕೆ ಮೊಹಮ್ಮದ್, ಮೊಹಮ್ಮದ್ ಜೆಜ್ಜ, ಮೊಹಮ್ಮದ್
ಹನೀಫ್ ಎಚ್. ಎ, ಗಂಗಾಧರ ಕೆ, ಶೇಕ್ ಅಬ್ಬಾಸ್, ಅಬ್ದುಲ್ ಖಾದರ್ ಹಾಜಿ ತಲೇಕಳ, ಜೂಲಿಯಾನ ಡಿ'
ಸೋಜಾ, ಪಳ್ಳಿಕುಂಞ ತಲೇಕಳ, ಲತೀಫ್ ಅಡ್ಕತ್ತಗುರಿ, ಸೀತಾರಾಮ ಬೇರಿಕೆ, ಸಲೀಂ ಧರ್ಮನಗರ, ಫಿಲೋಮಿನಾ
ಮೊಂತೆರೋ, ಇಬ್ರಾಹಿಂ ಕಾನ,ಜೋಕಿಂ ಡಿ' ಸೋಜ, ಇಮ್ತಿಯಾಜ್ ಅಹಮದ್, ರಮೀಝ್ ಧರ್ಮನಗರ, ಶಿವಪ್ಪ
ಮೂಲ್ಯ, ಮುಸ್ತಫಾ, ಐತ ಗೌರಿಮೂಲೆ, ಫ್ರಾನ್ಸಿಸ್, ವಿಶ್ವನಾಥ, ಅಬೂಬಕ್ಕರ್, ಇಬ್ರಾಹಿಂ, ಮಹೇಶ್,
ಡೆನ್ಸಿಲ್, ನೌಫಾಲ್ ಮುಂತಾದವರು ಉಪಸ್ಥಿತರಿದ್ದರು.

