Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೇರಳ ರಾಜ್ಯ ಸರಕಾರದ ಭೂಕಂದಾಯ ಇಲಾಖೆಯ ಜನವಿರೋಧಿ ಕ್ರಮಗಳ ವಿರುದ್ಧ ಹೊಸಬೆಟ್ಟು ಗ್ರಾಮ ಕಚೇರಿಗೆ ಕಾಂಗ್ರೆಸ್ ನಿಂದ ಧರಣಿ.

ಕೇರಳ ರಾಜ್ಯ ಸರಕಾರದ ಭೂಕಂದಾಯ ಇಲಾಖೆಯ ಜನವಿರೋಧಿ ಕ್ರಮಗಳ ವಿರುದ್ಧ ಹೊಸಬೆಟ್ಟು ಗ್ರಾಮ ಕಚೇರಿಗೆ ಕಾಂಗ್ರೆಸ್ ನಿಂದ ಧರಣಿ.
ಮಂಜೇಶ್ವರ: ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ, ಕೇರಳ ರಾಜ್ಯ ಸರಕಾರದ ಭೂಕಂದಾಯ ಹೆಚ್ಚಳ ಸೇರಿದಂತೆ ಜನವಿರೋಧಿ ಕ್ರಮಗಳ ವಿರುದ್ಧ ಹೊಸಬೆಟ್ಟು ಗ್ರಾಮ ಕಚೇರಿ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿಎಂಕೆ ಮುಹಮ್ಮದ್ ಧರಣಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೃಷ್ಣ ಅಡಕ್ಕತೊಟ್ಟಿ, ಐಆರ್‌ಡಿಪಿ ಇಬ್ರಾಹಿಂ, ಮನ್ಸೂರ್ ಬಿಎಂ, ಯೋಗೀಶ್ ಮಂಜೇಶ್ವರ, ರಂಜಿತ್ ಹೊಸಬೆಟ್ಟು, ಓಂ ಕೃಷ್ಣ, ಯು ಅಬ್ದುಲ್ ರೆಹಮಾನ್, ವಿವಿ ರಾಮನ್, ಜಕರಿಯಾ ಶಾಲಿಮಾರ್, ಅಬ್ದುಲ್ಲಾ ದಿಲ್ದಾರ್, ರಝಾಕ್, ಸುನೀಲ್ ಕುಂಜತ್ತೂರು, ಶಬೀರ್ ಅಹ್ಮದ್, ಜೆಸ್ಸಿ ಅನಿಲ್, ಲತೀಫ್ ಐಎನ್‌ಟಿಸಿಯು, ಹನೀಫ್ ಕುಂಜತ್ತೂರ್, ಸೂಪಿ ಜಮಾಲ್, ಇಸ್ಮಾಯಿಲ್ ಎಂ.ಕೆ, ಸಿದ್ದಿಕ್ ಪೋಸೊಟ್, ತಮ್ಮಿ ಕುನ್ನಿಲ್, ಫೈರೋಸ್, ಖಲೀಲ್, ರತ್ನಾಕರನ್, ಹಸೈನಾರ್, ಶುಹೈಬ್, ಬಾಶಿತ್, ಹನ್ನಾನ್ ಮುಂತಾದವರು ಉಪಸ್ಥಿತರಿದ್ದರು .ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನೀಫ್ ಪಡಿಂಜಾರ್ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಮಾಜಿ ಅಧ್ಯಕ್ಷ ಶಾಫಿ ಮಾಸ್ತರ್ ಸ್ವಾಗತಿಸಿ, ಬ್ಲಾಕ್ ಕಾರ್ಯದರ್ಶಿ ನಾಗೇಶ್ ಮಂಜೇಶ್ವರ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.