ಸಮುದ್ರಕ್ಕೆ ಹಾರಿದ ದಂಪತಿಗಳು. ಸಮುದ್ರ ಪಾಲಾದ ಪತಿ, ಬದುಕುಳಿದ ಪತ್ನಿ.
ಫೆಬ್ರವರಿ 23, 2025
0
ಸಮುದ್ರಕ್ಕೆ ಹಾರಿದ ದಂಪತಿಗಳು. ಸಮುದ್ರ ಪಾಲಾದ ಪತಿ, ಬದುಕುಳಿದ ಪತ್ನಿ.
ಮಂಜೇಶ್ವರ: ದಂಪತಿಗಳಿಬ್ಬರೂ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈಯಲು ಯತ್ನಿಸಿದ ಘಟನೆ ಮಂಜೇಶ್ವರ ಕುಂಡು ಕೊಳಕೆ ಸಮುದ್ರ ತೀರದಲ್ಲಿ ನಡೆದಿದೆ. ಘಟನೆಯಲ್ಲಿ ದಂಪತಿಗಳ ಪೈಕಿ ಪತಿ ಸಮುದ್ರ ಪಾಲಾಗಿದ್ದು, ಪತ್ನಿಯನ್ನು ಸ್ಥಳೀಯರು ಬದುಕುಳಿಸಿದ್ದಾರೆ. ಈ ಘಟನೆ ನಿನ್ನೆ ಸಂಜೆ ನಡೆದಿದೆ. ಮೀಂಜ ಗ್ರಾಮ ಪಂಚಾಯತ್ ಗೊಳಪಟ್ಟ ಕಡಂಬಾರು ನೀರೋಲ್ಪೆ ನಿವಾಸಿ ಹೊಸಂಗಡಿ ಎ.ಎಸ್ ಟೈಲರ್ ಮಾಲಕ ಭಾಸ್ಕರ್ ನೀರೋಲ್ಪೆ (60) ನೀರು ಪಾಲಾದ ವ್ಯಕ್ತಿಯಾಗಿದ್ದಾರೆ. ಇವರ ಪತ್ನಿ ಮಾಲತಿ (55) ಬದುಕುಳಿದವರಾಗಿದ್ದಾರೆ. ಇವರ ಸುಪುತ್ರ ಕಿರಣ್ ಚಲನಚಿತ್ರದ ಶೂಟಿಂಗ್ ನಿಮ್ಮಿತ ಮೂಡಬಿದ್ರೆಗೆ ತೆರಳಿದ್ದು, ಪುತ್ರ ಹಾಗೂ ಭಾಸ್ಕರ್ ರ ಸಹೋದರ ಮುರತ್ತನೆ ನಿವಾಸಿ ನಾರಾಯಣರವರು ಕಾಲ್ ಕರೆ ಮಾಡಿದಾಗ ಇಬ್ಬರ ಕಾಲ್ ಸ್ವಿಚ್ ಆಫ್ ಬರುತ್ತಿತ್ತು ಎಂದು ನಾರಾಯಣರವರು ತಿಳಿಸಿದ್ದಾರೆ. ನಿನ್ನೆ ಸಂಜೆ 6.30 ರ ವೇಳೆ ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಲತಿಯ ಫೋಟೋ ಸಹಿತ ಸಂದೇಶವೊಂದು ಹರಿದಾಡುತ್ತಿದ್ದು, ಮಾಹಿತಿ ತಿಳಿದು ಕೂಡಲೇ ಕುಂಡುಕೊಳಕೆ ಸಮುದ್ರ ತೀರಕ್ಕೆ ನಾರಾಯಣರು ತೆರಳಿದ್ದಾರೆ. ಅಲ್ಲಿ ದಂಪತಿಗಳು ಸಮುದ್ರ ಪಾಲಾಗುವ ಮಧ್ಯೆ ಮಾಲತಿಯನ್ನು ಸ್ಥಳೀಯರು ರಕ್ಷಿಸಿದ ವಿಷಯ ತಿಳಿದು ಬಂತು. ಕೂಡಲೇ ಸ್ಥಳೀಯರ ಮುಖೇನ ಮಾಲತಿಯವರನ್ನ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಸಮುದ್ರದಲ್ಲಿ ನಾಪತ್ತೆಯಾದ ಭಾಸ್ಕರ್ ರವರ ಪತ್ತೆ ಹಚ್ಚಲು ಮೀನುಗಾರರ ಪ್ರಯತ್ನ ಕೂಡಾ ಮುಂದುವರಿಯುತ್ತಿದೆ. ದಂಪತಿಗಳಿಬ್ಬರು ಸಮುದ್ರಕ್ಕೆ ಹಾರಲು ಕಾರಣವೇನೆಂದು ತಿಳಿದುಬಂದಿಲ್ಲ. ಘಟನೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

