ಮುರತ್ತಣೆ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ 18 ನೇ ವಾರ್ಷಿಕೋತ್ಸವ. ಬಂಟನ ಬಲಿಸುತ್ತು ಯಕ್ಷಗಾನ ಪ್ರದರ್ಶನ.
ಫೆಬ್ರವರಿ 23, 2025
0
ಮುರತ್ತಣೆ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ 18 ನೇ ವಾರ್ಷಿಕೋತ್ಸವ. ಬಂಟನ ಬಲಿಸುತ್ತು ಯಕ್ಷಗಾನ ಪ್ರದರ್ಶನ.
ಹೊಸಂಗಡಿ: ಶಿವಶಕ್ತಿ ಫ್ರೆಂಡ್ಸ್ ಕ್ಲಬ್ (ರಿ.) ಮುರತ್ತಣೆ ಇದರ 18 ನೇ ವಾರ್ಷಿಕೋತ್ಸವವು ನಾಳೆ (24/02/2025 ಸೋಮವಾರ) ಜರಗಲಿದೆ. ಸಂಜೆ 7 ರಿಂದ ಸಭಾ ಕಾರ್ಯಕ್ರಮ, ರಾತ್ರಿ 9 ರಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬಪ್ಪನಾಡು ಮೇಳದವರಿಂದ ರವಿಕುಮಾರ್ ಸುರತ್ಕಲ್ ವಿರಚಿತ ಮಾಧವ ಭಂಡಾರಿ ಕುಳಾಯಿ ಪದ್ಯರಚನೆಯ “ಬಂಟನ ಬಲಿಸುತ್ತು” ಎಂಬ ಯಕ್ಷಗಾನ ಬಯಲಾಟ ಜರಗಲಿದೆ. ಭಾಗವತರಾಗಿ ಸತ್ಯನಾರಾಯಣ ಪುಣಿಂಚಿತ್ತಾಯ, ಧೀರಜ್ ರೈ ಸಂಪಾಜೆ, ಗಿರೀಶ್ ರೈ ಕಕ್ಕೆಪದವು, ಕಲಾವಿದರಾಗಿ ದಿನೇಶ್ ಕೋಡಪದವು; ಮಧೂರು ರಾಧಾಕೃಷ್ಣ ನಾವಡ; ರಾಜೇಶ್ ರೈ ಅಡ್ಕ; ತಿಲಕ್ ಹೆಗ್ಡೆ ಪುತ್ತೂರು; ಕಡಬ ಶ್ರೀನಿವಾಸ ರೈ; ಜಯಾನಂದ ಸಂಪಾಜೆ ಮೊದಲಾದವರು ಭಾಗವಹಿಸುವರು.

