Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಕೋ - ಆಪರೇಟಿವ್ ಸೊಸೈಟಿಯ ನೂತನ ಕಛೇರಿ ಉದ್ಘಾಟನೆ.

ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಕೋ - ಆಪರೇಟಿವ್ ಸೊಸೈಟಿಯ ನೂತನ ಕಛೇರಿ ಉದ್ಘಾಟನೆ.
ಕುಂಬಳೆ: ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಕೋ - ಆಪರೇಟಿವ್ ಸೊಸೈಟಿಯ ನೂತನ ಕಛೇರಿಯನ್ನು ಕಾಸರಗೋಡು ಎಂ. ಪಿ. ರಾಜಮೋಹನ್ ಉಣ್ಣಿತಾನ್ ಉದ್ಘಾಟಿಸಿದರು.
ನೂತನ ಕಛೇರಿಯು ಕುಂಬಳೆ ಪೇಟೆಯ ಮುಳಿಯಡ್ಕ ಕಾಂಪ್ಲೆಕ್ಸ್ ನಲ್ಲಿ ಔಪಚಾರಿಕವಾಗಿ ಉದ್ಘಾಟನೆಗೊಂಡಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಕೆ.ವಿ. ವಿ. ಇ. ಎಸ್ ಕಾಸರಗೋಡಿನ ಜಿಲ್ಲಾಧ್ಯಕ್ಷರಾದ ಕೆ. ಅಹಮ್ಮದ್ ಶರೀಫ್ ವಹಿಸಿದ್ದರು.
ಸೊಸೈಟಿಯ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಕೆ. ಪಿ. ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಕೇರಳ ಬ್ಯಾಂಕ್ ಕುಂಬಳೆ ಶಾಖೆಯ ಶಾಖಾಧಿಕಾರಿ ಉಣ್ಣಿಕೃಷ್ಣನ್, ಜಿಲ್ಲಾ ಪಂಚಾಯತ್ ಸದಸ್ಯೆ ಜಮೀಲಾ ಸಿದ್ದಿಕ್, ಸಂಘದ ಸ್ಥಾಪಕ ಹಾಗೂ ಮಾಜಿ ಅಧ್ಯಕ್ಷರಾದ ಎಂ. ಅಬ್ಬಾಸ್, ಕೆ.ವಿ. ವಿ. ಇ. ಎಸ್ ಕುಂಬಳೆ ಘಟಕದ ಅಧ್ಯಕ್ಷರಾದ ರಾಜೇಶ್ ಎಂ, ಕುಂಬಳೆ ಸರ್ವಿಸ್ ಬ್ಯಾಂಕ್ ಅಧ್ಯಕ್ಷರಾದ ರಾಧಾಕೃಷ್ಣ ರೈ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಸಿರ್ ಮೊಗ್ರಲ್, ಬಶೀರ್ ಕನಿಲ ಭಾಗವಹಿಸಿದರು. ಸಂಘದ ನಿರ್ದೇಶಕ ಹಾಗೂ ನಿರ್ದೇಶಕಿಯರಾದ ಅನ್ವರ್ ಸಿ. ಟಿ, ರಾಕೇಶ್ ಕುಮಾರ್, ರುಖ್ಯ ಬಂಬ್ರಾಣ, ಸುಪ್ರಭಾ ಶೆಟ್ಟಿ ಉಪ್ಪಳ, ಮೊಹಮ್ಮದ್ ನವಾಜ್ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಹಾಗೂ ಸಂಘದ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.