Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ ಹೊಸಬೆಟ್ಟು ಅಳಿವೆ ಬಾಗಿಲಿನಲ್ಲಿ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಶ್ರೀ ಬೊಬ್ಬರ್ಯ ದೈವದ ಜಾತ್ರೆ ಹಾಗೂ ಶ್ರೀ ಭಗವತೀ ಮಾತೆಯ ಹೂಮುಡಿ ಮಹೋತ್ಸವ ಜನವರಿ 13 ರಂದು.

ಮಂಜೇಶ್ವರ ಹೊಸಬೆಟ್ಟು ಅಳಿವೆ ಬಾಗಿಲಿನಲ್ಲಿ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಶ್ರೀ ಬೊಬ್ಬರ್ಯ ದೈವದ ಜಾತ್ರೆ ಹಾಗೂ ಶ್ರೀ ಭಗವತೀ ಮಾತೆಯ ಹೂಮುಡಿ ಮಹೋತ್ಸವ ಜನವರಿ 13 ರಂದು.
ಮಂಜೇಶ್ವರ: ಮಂಜೇಶ್ವರ ಹೊಸಬೆಟ್ಟು ಸಮುದ್ರ ತೀರದ ಅಳಿವೆ ಬಾಗಿಲಿನಲ್ಲಿ ವರ್ಷಂಪ್ರತಿ ಜರಗುವ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಶ್ರೀ ಬೊಬ್ಬರ್ಯ ದೈವದ ಜಾತ್ರೆ ಹಾಗೂ ಶ್ರೀ ಭಗವತೀ ಮಾತೆಯ ಹೂಮುಡಿ ಮಹೋತ್ಸವ ಈ ತಿಂಗಳ 13 ರಂದು ಸೋಮವಾರ ಜರಗಲಿದೆ. ಅಂದು ಸಂಜೆ 4 ಕ್ಕೆ ಉದ್ಯಾವರ ಮಾಡ ಕ್ಷೇತ್ರದಿಂದ ಭಂಡಾರ ಹೊರಟು ಸಂಜೆ 6 ಕ್ಕೆ ಹೊಸಬೆಟ್ಟು ಅಳಿವೆ ಬಾಗಿಲು ತಲುಪಲಿದೆ. ಬಳಿಕ ಉತ್ಸವ ಪ್ರಾರಂಭಗೊಳ್ಳಲಿದೆ ಎಂದು ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಕಿರಣ್ ಶೆಟ್ಟಿ ಮಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದೇ ರೀತಿ 12 ರಂದು ರವಿವಾರ ಬೆಳಿಗ್ಗೆ 8.30ಕ್ಕೆ ನವೀಕರಿಸಿದ ಕಟ್ಟೆಯಲ್ಲಿ ಬೊಬ್ಬರ್ಯ ದೈವದ ಪುನಃ ಪ್ರತಿಷ್ಠೆ ಕಾರ್ಯಕ್ರಮವು ಕೂಡಾ ನಡೆಯಲಿದೆ. ಎಂದು ಬ್ರಹ್ಮಶ್ರೀ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.