ಹೊಸಂಗಡಿ ಇನ್ಫೆಟ್ ಜೀಸಸ್ ಚರ್ಚ್ ನಲ್ಲಿ ಜನವರಿ 10 ರಿಂದ 12 ರ ತನಕ 11 ನೇ ವರ್ಷದ ವಾರ್ಷಿಕ ಹಬ್ಬ. 11 ರಂದು ಸಂಜೆ ಧಾರ್ಮಿಕ ಸೌಹಾರ್ದ ಸಮ್ಮೇಳನ ಹಾಗೂ ಮ್ಯಾಜಿಕ್ ಶೋ.
ಜನವರಿ 08, 2025
0
ಹೊಸಂಗಡಿ ಇನ್ಫೆಟ್ ಜೀಸಸ್ ಚರ್ಚ್ ನಲ್ಲಿ ಜನವರಿ 10 ರಿಂದ 12 ರ ತನಕ 11 ನೇ ವರ್ಷದ ವಾರ್ಷಿಕ ಹಬ್ಬ. 11 ರಂದು ಸಂಜೆ ಧಾರ್ಮಿಕ ಸೌಹಾರ್ದ ಸಮ್ಮೇಳನ ಹಾಗೂ ಮ್ಯಾಜಿಕ್ ಶೋ.
ಮಂಜೇಶ್ವರ: ಹೊಸಂಗಡಿ ಬಳಿಯ ದುರ್ಗಿಪಳ್ಳದಲ್ಲಿರುವ ಬಾಲ ಏಸುವಿನ ದೇವಾಲಯ (ಇನ್ಫೆನ್ಟ್ ಜೀಸಸ್ ಚರ್ಚ್) ದಲ್ಲಿ 11 ನೇ ವರ್ಷದ ವಾರ್ಷಿಕ ಹಬ್ಬ ಈ ತಿಂಗಳ 10, 11, 12 ರಂದು ನಡೆಯಲಿದೆ ಎಂದು ಚರ್ಚ್ ನ ಫಾದರ್ ಲೂಯಿಸ್ ಮರಿಯದಾಸ್ ಚರ್ಚ್ ನಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಕೇರಳದ ತಲಶ್ಯೇರಿಯ ಡಯಾಶೀಸ್ ಗೊಳಪಟ್ಟ ಸಿರಿಯನ್ ಕ್ಯಾಥೋಲಿಕ್ ಸಮುದಾಯದವರು ಕಳೆದ ಹಲವು ವರ್ಷಗಳಿಂದ ಮಂಜೇಶ್ವರ ಭಾಗದಲ್ಲಿ ವಾಸಿಸುತ್ತಿದ್ದು, ಒಟ್ಟು 450ಕ್ಕೂ ಅಧಿಕ ಭಕ್ತರು ಒಂದುಗೂಡಿ ಈ ಚರ್ಚ್ ನ್ನು ಕಟ್ಟಿಸಿ, ಬಾಲ ಏಸುವಿನ ಪ್ರತಿಮೆಯನ್ನು ಸ್ಥಾಪಿಸಿ, ಪ್ರತೀದಿನ ಪೂಜೆ ಪುನಸ್ಕಾರ, ಪ್ರಾರ್ಥನೆಗಳನ್ನು ನೆರವೇರಿಸುತ್ತಿದ್ದಾರೆ. ಇದೀಗ ಚರ್ಚ್ ಗೆ ಹನ್ನೊಂದನೇ ವರ್ಷದ ಸಂಭ್ರಮ. ಈ ಬಾರಿ ಎಲ್ಲಾ ಧರ್ಮದವರನ್ನ ಆಹ್ವಾನಿಸಿ, ಧಾರ್ಮಿಕ ಸೌಹಾರ್ದ ಸಮ್ಮೇಳನ ನಡೆಸುವ ಮೂಲಕ ಊರಿನ ಜನತೆಯೊಂದಿಗೆ ಸೌಹಾರ್ದತೆಯನ್ನು ಸಾರಲು ಚರ್ಚಿನ ಆಡಳಿತ ಸಮಿತಿ ನಿರ್ಣಯಿಸಿದೆ ಎಂದು ಚರ್ಚ್ ನ ಧರ್ಮಗುರು ಲೂಯಿಸ್ ಮಾರಿಯಾದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆ ಪ್ರಯುಕ್ತ ಜನವರಿ 10 ರಂದು ಸಂಜೆ 4.15 ಕ್ಕೆ ಹಬ್ಬದ ಧ್ವಜಾರೋಹಣ, ಬಳಿಕ ನೊವೇನಾ ಪ್ರಾರ್ಥನೆಯನ್ನು ಚರ್ಚ್ ನ ಧರ್ಮಗುರುಗಳಾದ ರೆವ. ಫಾ. ಲೂಯಿ ಮರಿಯಾದಾಸ್ ನೆರೆವೇರಿಸಲಿರುವರು. 4.30 ಕ್ಕೆ ತಲಚ್ಚೇರಿ ಮಹಾಧರ್ಮ ಪ್ರಾಂತ್ಯದ ವೈಸ್ ಚಾನ್ಸಲರ್,
ರೆವ. ಫಾ. ಸುಬಿನ್ ರಾತ್ತಪಳ್ಳಿ
ಪವಿತ್ರ ಬಲಿ ಪೂಜೆ ನೆರೆವೇರಿಸಲಿರುವರು. ಸಂಜೆ
6.00 ಕ್ಕೆ ಸಂಡೆ ಸ್ಕೂಲ್, ಸಂಯುಕ್ತ ಭಕ್ತ ಸಂಘಟನೆಯ ವಾರ್ಷಿಕೋತ್ಸವ ನಡೆಯಲಿದ್ದು, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೇರೋ ವಿಶೇಷ ಅತಿಥಿಯಾಗಿರುವರು. ಜನವರಿ 11 ಶನಿವಾರದಂದು ಸಂಜೆ 4.30 ಕ್ಕೆ ತಲಶ್ಯೇರಿ ಮಹಾಧರ್ಮ ಪ್ರಾಂತ್ಯದ ಸೋಶಿಯಲ್ ಸರ್ವಿಸ್ ಸೊಸೈಟಿಯ ಅಸಿಸ್ಟೆಂಟ್ ಡೈರೆಕ್ಟರ್ ರೆವ ಫಾ. ಲೂಕೋಸ್ ಮಾಡಶೇರಿ ಪವಿತ್ರ ಬಲಿಪೂಜೆ, ನೊವೇನಾ ಪ್ರಾರ್ಥನೆ ನೆರವೇರಿಸಲಿರುವರು. ಬಳಿಕ ಸಂಜೆ 6.00 ಕ್ಕೆ: ಧಾರ್ಮಿಕ ಸೌಹಾರ್ದ ಸಮ್ಮೇಳನ ನಡೆಯಲಿದ್ದು, ಮಂಜೇಶ್ವರ
ಶಾಸಕರಾದ ಎ.ಕೆ.ಎಂ ಅಶ್ರಫ್
ಉದ್ಘಾಟಿಸಲಿರುವರು.ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ
ಶ್ರೀಮತಿ ಸುಂದರಿ ಆರ್. ಶೆಟ್ಟಿ, ಮೀಯಪದವು ಅವರ್ ಲೇಡಿ ಆಫ್ ಫಾತಿಮಾ ಚರ್ಚ್ ನ
ಧರ್ಮಗುರುಗಳಾದ ರೆವ. ಫಾ ಎಡ್ರಿನ್ ವಿನ್ಸೆಂಟ್ ಕೊರಿಯ, ಪುರೋಹಿತರಾದ ವೇದಮೂರ್ತಿ ಶ್ರೀ ಹರಿನಾರಾಯಣ ಮಯ್ಯ ಕುಂಬಳೆ, ಅಂಗಡಿಮೊಗರು ಜುಮಾ ಮಸ್ಜಿದ್ ನ ಚೀಫ್ ಇಮಾಂ ಅಬ್ದುಲ್ ಖಾದರ್ ಸಖಾಫಿ ಕಾಟಿಪ್ಪಾರ, ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭಾಶಂಸನೆಗೈಯಲ್ಲಿರುವರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಜೆ 7.00 ಕ್ಕೆ ದೇಶ,ವಿದೇಶದಲ್ಲಿ ಪ್ರಸಿದ್ಧಿ ಪಡೆದ ಜಾದೂಗಾರ ಸುಧೀರ್ ಮಾಡಕತ್ತ ಮತ್ತು ಬಳಗದವರಿಂದ, ಸುಮಾರು 24 ಕಲಾವಿದರನ್ನೊಳಗೊಂಡ "ಮ್ಯಾಜಿಕ್ ಸಿನ್‌ಸಿಲ" ಮ್ಯಾಜಿಕ್ ಶೋ ಕಾರ್ಯಕ್ರಮ ನಡೆಯಲಿದೆ. ಜನವರಿ 12 ಆದಿತ್ಯವಾರದಂದು ಸಂಜೆ 4.30 ಕ್ಕೆ: ಹೊಸಂಗಡಿ ಇನ್ ಫ್ಯಾಂಟ್ ಜೀಸಸ್ ಚರ್ಚ್ ನ
ಧರ್ಮಗುರುಗಳಾದ ರೆವ. ಫಾ ಲೂಯಿಮರಿಯಾದಾಸ್, ಮಂಜೇಶ್ವರ ಅವರ್ ಲೇಡಿ ಆಫ್ ಮರ್ಸಿ ಚರ್ಚ್ ನ ಧರ್ಮಗುರುಗಳಾದ ರೆವ. ಫಾ ಎಡ್ರಿನ್ ಫ್ರಾನ್ಸಿಸ್ ಪಿಂಟೊ,
ಮೀಯಪದವು ಅವರ್ ಲೇಡಿ ಆಫ್ ಫಾತಿಮಾ ಚರ್ಚ್ ನ ಧರ್ಮಗುರುಗಳಾದ ರೆವ. ಫಾ ಎಡ್ರಿನ್ ವಿನ್ಸೆಂಟ್ ಕೊರಿಯ,
ಮಂಜೇಶ್ವರ ಡೋನ್ ಬೊಸ್ಕೋದ ಸುಪೀರಿಯರ್
ರೆವ. ಫಾ. ಮೈಕೆಲ್ ಕೊನ್ನಾನಿಕಾಡ್, ಎಸ್. ಡಿ.ಬಿ.
ರೆವ. ಫಾ. ಮನು ಜಾನ್ಸನ್ ಪೀಡೀಕಯಿಲ್ ರಿಂದ ಸಂಭ್ರಮದ ಸಮೂಹ ಬಲಿಪೂಜೆ, ನೊವೇನಾ ಪ್ರಾರ್ಥನೆ ನೆರವೇರಲಿದೆ. ಬಳಿಕ
ಮಂಜೇಶ್ವರ ಡೋನ್ ಬೊಸ್ಕೋ ಸೆಂಟ್ರಲ್ ಸ್ಕೂಲ್ ನ
ಪ್ರಿನ್ಸಿಪಾಲ್ ರೆವ. ಫಾ. ಟೋಮಿ ಚಿರಕಲ್ ರಿಂದ ವಚನ ಬೋಧನ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30 ಕ್ಕೆ ಚರ್ಚ್ ನಿಂದ ಹೊಸಂಗಡಿ ಪೇಟೆಗೆ ಮೆರವಣಿಗೆ ನಡೆಯಲಿದೆ. ಹೊಸಂಗಡಿ ಪೇಟೆಯಲ್ಲಿ ವರ್ಕಾಡಿ ಸೆಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್ ನ ಧರ್ಮಗುರುಗಳಾದ ರೆವ. ಫಾ. ಬೇಸಿಲ್ ವಾಸ್ ರಿಂದ ವಚನ ಬೋಧನಾ ಕಾರ್ಯಕ್ರಮ ನಡೆಸಲಿರುವರು. ಬಳಿಕ 7.45 ಮೆರವಣಿಗೆ ಚರ್ಚಿಗೆ ಹಿಂತಿರುಗಿ ಸಿಡಿಮದ್ದು ಪ್ರದರ್ಶನ, ಭೋಜನ ಕೂಟ, ಧ್ವಜಾಅವರೋಹಣ ನಡೆಯಲಿದೆ. ಜನವರಿ 11 ಶನಿವಾರದಂದು ನಡೆಯುವ ಧಾರ್ಮಿಕ ಸೌಹಾರ್ದ ಸಮ್ಮೇಳನದಲ್ಲಿ ಸರ್ವ ಧರ್ಮದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿಯೂ, ಬಳಿಕ ನಡೆಯುವ ಮ್ಯಾಜಿಕ್ ಶೋ ಕಾರ್ಯಕ್ರಮವನ್ನು ಕೂಡಾ ವೀಕ್ಷಿಸಬೇಕಾಗಿಯೂ, ಇದಕ್ಕಾಗಿ ಸಾರ್ವಜನಿಕರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಚರ್ಚ್ ನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಚರ್ಚ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಚರ್ಚ್ ನ ಧರ್ಮಗುರುಗಳಾದ:
ರೆವ. ಫಾ ಲೂಯಿಮರಿಯಾದಾಸ್, ಚರ್ಚ್ ನ ಆಡಳಿತ ಮಂಡಳಿಯ ಟ್ರಸ್ಟಿ ಪದಾಧಿಕಾರಿಗಳಾದ: ವಿಜಿ ಅತ್ತಿಕುಳಂ, ಅನಿಲ್ ಕುಂಜತ್ತೂರು, ಸನ್ನಿ ವೆಲಿಪರಂಬಿಲ್, ಮ್ಯಾಥ್ಯೂ ಮಣಿಯಪುರಕ್ಕಲ್, ಚರ್ಚಿನ ಕೋರ್ಡಿನೆಟರ್: ಥೋಮಸ್ ಪಾನಕಲ್, ಕಾರ್ಯಕ್ರಮ ಸಂಯೋಜಕರಾದ: ಜೋಯಿ ವೆಜಿಕಾ ಮೊದಲಾದವರು ಉಪಸ್ಥಿತರಿದ್ದರು.



