Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ರಾಜ್ಯ ಸಮ್ಮೇಳನ ನಾಳೆಯಿಂದ ಕಾಸರಗೋಡಿನಲ್ಲಿ. ಸಮ್ಮೇಳನಕ್ಕೆ ಸಿದ್ಧತೆ ಪೂರ್ಣ.

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ರಾಜ್ಯ ಸಮ್ಮೇಳನ ನಾಳೆಯಿಂದ ಕಾಸರಗೋಡಿನಲ್ಲಿ. ಸಮ್ಮೇಳನಕ್ಕೆ ಸಿದ್ಧತೆ ಪೂರ್ಣ.
ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ರಾಜ್ಯ ಸಮ್ಮೇಳನ ನಾಳೆ 10 ಹಾಗೂ 11 ರಂದು ಕಾಸರಗೋಡು ನಗರ ಸಭಾ ಸಭಾಂಗಣದಲ್ಲಿ ನಡೆಸಲಾಗುವುದೆಂದು ಸಮಿತಿಯ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾ‌ರ್ ಶೆಟ್ಟಿ ತಿಳಿಸಿದ್ದಾರೆ. ಇದಕ್ಕಾಗಿ ಅಂತಿಮ ಹಂತದ ಸಿದ್ಧತೆಗಳು ಪೂರ್ಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮದಂಗವಾಗಿ ನಾಳೆ ಬೆಳಿಗ್ಗೆ 9 ಕ್ಕೆ ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನ ಪರಿಸರದಿಂದ ಮೆರವಣಿಗೆ ಆರಂಭಗೊಳ್ಳಲಿದೆ. ಬಳಿಕ 10 ಗಂಟೆಗೆ ನಗರಸಭಾ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್ ಉದ್ಘಾಟಿಸುವರು. ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕರ್ನಾಟಕ ಸರಕಾರ)ದ ಅಧ್ಯಕ್ಷ ಸೋಮಣ್ಣ ಬೇವಿನಮರದ ವಿಶೇಷ ಅತಿಥಿಯಾಗಿ ಭಾಗವಹಿಸುವರು. ಶಾಸಕರಾದ ಎನ್‌.ಎ.ನೆಲ್ಲಿಕುನ್ನು, ಸಿ.ಎಚ್. ಕುಂಇಂಬು ಮುಖ್ಯ ಅತಿಥಿಯಾಗಿರುವರು. ಖ್ಯಾತ ಅಂಕಣಕಾರ, ಚಿಂತಕ ಮಹಾಬಲೇಶ್ವರ ರಾವ್ ಪ್ರಧಾನ ಭಾಷಣ ಮಾಡುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಶಿಕ್ಷಣ ಉಪನಿರ್ದೆಶಕ ಮಧುಸೂದನನ್, ಕೇರಳ ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕನ್ನಡ ವ್ಯವಸ್ಥಾಪಕರ ಸಂಘಟನೆ ಅಧ್ಯಕ್ಷ ಜಯದೇವ ಖಂಡಿಗೆ, ವಾರ್ಡ್ ಕೌನ್ಸಿಲರ್ ವರಪ್ರಸಾದ್ ಕೆ, ಎಸ್‌ಎಸ್‌ಎಸ್‌ಕೆ ‌ ಡಿಪಿಒ ಬಿಜುರಾಜ್ ಮತ್ತು ಜಿಲ್ಲಾ ಕೈಟ್ ಕೋ- ಆರ್ಡಿನೇಟ‌ರ್ ರೋಜಿ ಜೋಸೆಫ್ ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 1.30 ಕ್ಕೆ ವಿವಿಧ ವಿಷಯಗಳ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಅಂಗನವಾಡಿಗಳಲ್ಲಿ ಕನ್ನಡ ಭಾಷಾ ಕಲಿಕೆಯ ಮಹತ್ವ ಎಂಬ ವಿಷಯದ ಬಗ್ಗೆ ನಯನ ಗಿರೀಶ್ ವಿಷಯ ಮಂಡಿಸುವರು. ಕನ್ನಡ ಮಾಧ್ಯಮ ಶಾಲೆಗಳ ಬಲವರ್ಧನೆಯಲ್ಲಿ ಶಿಕ್ಷಕ ಮತ್ತು ಕನ್ನಡಿಗರ ಪಾತ್ರ ಎಂಬ ವಿಷಯವನ್ನು ನಿವೃತ್ತ ಮುಖ್ಯ ಶಿಕ್ಷಕಿ ಪದ್ಮಾವತಿ ಎಂ ವಿಷಯ ಮಂಡಿಸುವರು. ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳ ಕೊಡುಗೆ - ಸವಾಲುಗಳು ಮತ್ತು ಪರಿಹಾರೋಪಾಯಗಳು ಎಂಬ ವಿಷಯದ ಬಗ್ಗೆ ಡಾ. ರತ್ನಾಕರ ಮಲ್ಲ ಮೂಲೆ ವಿಷಯ ಮಂಡಿಸುವರು. . ಪ್ರೊ. ಟಿ.ಕೆ. ಖಂಡಿಗೆ, ಕೆ. ಬಾಬು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು. 11 ರಂದು ಬೆಳಿಗ್ಗೆ 9.30 ಕ್ಕೆ ವಿದಾಯಕೂಟ ಸಮಾರಂಭ ನಡೆಯಲಿದೆ. ಶ್ರೀನಿವಾಸ್ ರಾವ್‌ ರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ವಿಶ್ರಾಂತ ಉಪನ್ಯಾಸಕ ಶಿಖಾರಿಪುರ ಕೃಷ್ಣಮೂರ್ತಿ ಉದ್ಘಾಟಿಸುವರು. ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ, ಕಾಞಂಗಾಡ್ ಜಿಲ್ಲಾ ಶಿಕ್ಷಣಾಧಿಕಾರಿ ಅರವಿಂದ ಕೆ, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ರಾಜಗೋಪಾಲ ಎನ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಎಂ, ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಅಗಸ್ಟಿನ್ ಬರ್ನಾಡ್, ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ಮಹಾ ಲಿಂಗೇಶ್ವರ ರಾಜ್, ನಂದಿಕೇಶನ್ ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 1.30 ರಿಂದ ಪ್ರತಿನಿಧಿ ಸಮ್ಮೇಳನ ನಡೆಯಲಿದೆ. ಶ್ರೀನಿವಾಸ ರಾವ್ ಅಧ್ಯಕ್ಷತೆ ವಹಿಸುವರು. ಹಲವರು ಉಪಸ್ಥಿತರಿರುವರು. 'ಅಪರಾಹ್ನ 3 ಗಂಟೆಗೆ ಶ್ರೀನಿವಾಸ್ ರಾವ್‌ರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಿ.ಶಿಲ್ಪಾ, ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನಮ್ಮ ಕುಡ್ಲ ಡಾ. ಪ್ರಿಯಾ ಹರೀಶ್ ಮುಖ್ಯ ಭಾಷಣಗಾರರಾಗಿರುವರು. ಡಯಟ್ ಪ್ರಾಂಶುಪಾಲ ಡಾ. ರಘುರಾಮ ಭಟ್, ಬಿಎಚ್ಎಸ್ಎಸ್ ಸಹಾಯಕ ನಿರ್ದೇಶಕಿ ಉದಯ ಕುಮಾರಿ, ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ನೈಯಾಟಿಂಗರ ಜಿಲ್ಲಾ ವಿದ್ಯಾಧಿಕಾರಿ ಇಬ್ರಾಹಿಂ ಬುಡ್ರಿಯ, ಕಾಸರಗೋಡು ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ. ಮೋಹನ್‌ದಾಸ್‌ ಮತ್ತು ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಇದರ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮ ಬಳಿಕ ಬಹುಮಾನ ವಿತರಣೆ ನಡೆಯಲಿದೆ. ಪಿ.ವಿ. . ವಿನೋದ್ ರಾಜ್, ಎಂ. ಶರತ್ ಕುಮಾರ್, ಸಿ.ಎಚ್. ಜಯರಾಮ, ಎ. ಸುಕೇಶ್ ಮತ್ತು ವಿಜಯ ಕುಮಾರಿ ಸೇರಿದಂತೆ ಹಲವರು ಭಾಗವಹಿಸಿ ಮಾಹಿತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.