Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕರ್ನಾಟಕ ಆರ್‌ಟಿಸಿ ದರ ಏರಿಕೆ ಹಿಂಪಡೆಯಬೇಕು: ಅಶ್ವಿನಿ ಎಂ.ಎಲ್.

ಕರ್ನಾಟಕ ಆರ್‌ಟಿಸಿ ದರ ಏರಿಕೆ ಹಿಂಪಡೆಯಬೇಕು: ಅಶ್ವಿನಿ ಎಂ.ಎಲ್.
ಕಾಸರಗೋಡು: ಇತ್ತೀಚೆಗೆ ಕರ್ನಾಟಕ ಆರ್‌ಟಿಸಿ ಬಸ್ ದರ ಏರಿಕೆ ಅಂತಾರಾಜ್ಯ ಪ್ರಯಾಣಿಕರಿಗೆ, ವಿಶೇಷವಾಗಿ ಗಡಿ ಜಿಲ್ಲೆಗಳಾದ ಕಾಸರಗೋಡು ಪ್ರದೇಶದ ಜನತೆಗೆ ತೀವ್ರ ಪರಿಣಾಮ ಬೀರಲಿದೆ. ಈ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ಆಗ್ರಹಿಸಿದ್ದಾರೆ. ಶೇಕಡಾ 15ರಷ್ಟು ದರ ಏರಿಕೆಯಾಗಿದ್ದು, ಕೇರಳ ಮತ್ತು ಕರ್ನಾಟಕ ನಡುವಿನ ಒಪ್ಪಂದದ ಪ್ರಕಾರ ಕೇರಳ ಆರ್‌ಟಿಸಿ ದರವೂ ಏರಿಕೆಯಾಗುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಪರಿಚಯಿಸಿರುವುದರಿಂದ ಸಾರಿಗೆ ನಿಗಮದ ವೆಚ್ಚದಲ್ಲಿ ಹೆಚ್ಚಳವಾಗಿದೆ. ಈ ಹೆಚ್ಚುವರಿ ಹೊರೆಯನ್ನು ಸಮತೋಲಗೊಳಿಸಲು ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಕುಟುಂಬಗಳಿಗೆ ಉಚಿತ ಪ್ರಯಾಣದ ಪ್ರಯೋಜನಗಳು ಬಿಟ್ಟು, ಬಜೆಟ್‌ ಮೇಲೆ ತೀವ್ರ ಆರ್ಥಿಕ ಒತ್ತಡ ಉಂಟಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರದ ಈ ದರ ಏರಿಕೆಯನ್ನು ಜನವಿರೋಧಿ ಕ್ರಮ ಎಂದು ಟೀಕಿಸಿರುವ ಅಶ್ವಿನಿ ಎಂ.ಎಲ್., ಈ ನಿರ್ಧಾರದ ವಿರುದ್ಧ ಶೀಘ್ರವೇ ತೀವ್ರ ಪ್ರತಿಭಟನೆಗಳು ನಡೆಯಲಿವೆ ಎಂದು ಎಚ್ಚರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.