ಉದ್ಯಾವರ ಮಾಡದ ರಿಕ್ಷಾ ಚಾಲಕ ಪ್ರಕಾಶ್ (53) ಹೃದಯಾಘಾತದಿಂದ ನಿಧನ.
ಜನವರಿ 07, 2025
0
ಉದ್ಯಾವರ ಮಾಡದ ರಿಕ್ಷಾ ಚಾಲಕ ಪ್ರಕಾಶ್ (53) ಹೃದಯಾಘಾತದಿಂದ ನಿಧನ.
ಮಂಜೇಶ್ವರ: ಉದ್ಯಾವರ ಮಾಡ ಕೆರೆ ಬಳಿ ನಿವಾಸಿ, ಮಾಡದಲ್ಲಿ ರಿಕ್ಷಾ ಚಾಲಕರಾಗಿರುವ ಪ್ರಕಾಶ್ (53) ಹೃದಯಾಘಾತಗೊಂಡು, ಹೊಸಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದು, ಕಿಡ್ನಿ ವೈಫಲ್ಯದಿಂದ ಊರಿಗೆ ಮರಳಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಮೃತರು ತಂದೆ: ಪೂವಪ್ಪ ಬೆಲ್ಚಾಡ, ತಾಯಿ: ಮಾಧವಿ, ಪತ್ನಿ: ಅಕ್ಷತಾ, ಪುತ್ರಿ: ಸಿಂಚನ, ಸಹೋದರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಳ್ಚಪ್ಪಾಡ, ಸಹೋದರಿ: ಸುಲೋಚನ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ಕೊಲ್ಯದಲ್ಲಿರುವ ಹವಾನಿಯಂತ್ರಿತ ಶವಾಶನದಲ್ಲಿರಿಸಲಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಮನೆಗೆ ತರಲಾಗುವುದು. ಬಳಿಕ ಉದ್ಯಾವರ ಮಾಡ ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮನೆಮಂದಿ ತಿಳಿಸಿದ್ದಾರೆ.

